ಸುದೀಪ್ ಕ್ಲಾಸ್: ಕಾಕ್ರೋಚ್ ಸುಧಿಯ ಆಟದ ಅಸಲಿಯತ್ತು ಬಯಲು?

Published : Oct 04, 2025, 10:29 PM IST

Cockroach Sudhi game truth: ಬಿಗ್‌ಬಾಸ್ ಟಾಸ್ಕ್‌ನಲ್ಲಿ ತಮಗೆ ಮೋಸವಾಗಿದೆ ಎಂದು ಕಾಕ್ರೋಚ್ ಸುಧಿ ಆರೋಪಿಸಿದ್ದರು. ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಅವರು, ಸುಧಿಗೆ ಆಟದ ನಿಯಮಗಳ ಬಗ್ಗೆ ಪಾಠ ಮಾಡಿ ಎಚ್ಚರಿಕೆ ನೀಡಿದರು. 

PREV
15
ಕಾಕ್ರೋಚ್ ಸುಧಿ

ಟಾಸ್ಕ್‌ನಲ್ಲಿ ತಮಗೆ ಮೋಸ ಆಗಿದೆ ಎಂದು ಕಾಕ್ರೋಚ್ ಸುಧಿ ಅವರು ಸುದೀಪ್ ಮುಂದೆ ಹೇಳಿದರು. ಒಬ್ಬ ಆಟಗಾರನ ತಪ್ಪಿನಿಂದ ನಿಮಗೆ ರೂಲ್ಸ್ ಗೊತ್ತಾಗಬೇಕಾ? ವಾದ ಮಾಡುವಲ್ಲಿ ಎಲ್ಲವೂ ನಮ್ಮದು ಸರಿ ಇರಬೇಕು ಅಂತ ಹೇಳುವುದು ತಪ್ಪು ಎಂದು ಸುದೀಪ್ ಕ್ಲಾಸ್ ತೆಗೆದುಕೊಂಡರು.

25
ಬಿಗ್‌ಬಾಸ್ ಟಾಸ್ಕ್

ಬಿಗ್‌ಬಾಸ್ ಟಾಸ್ಕ್ ರದ್ದು ಮಾಡಿದಾಗ ಕಾಕ್ರೋಚ್ ಸುಧಿ, ಉಸ್ತುವಾರಿಗಳಾದ ಕಾವ್ಯಾ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ನನಗೆ ಆಟದ ನಿಯಮಗಳು ಗೊತ್ತಿತ್ತು. ಟೇಪ್ ಹಿಡಿದುಕೊಂಡು ಬೆಳೆದವನು ನಾನು. ನನ್ನ ಲೆಕ್ಕಾಚಾರ ಸರಿಯಾಗಿತ್ತು ಎಂದು ಹೇಳಿದ್ದರು. ಆದ್ರೆ ವೀಕೆಂಡ್ ಪಂಚಾಯ್ತಿಯಲ್ಲಿ ನಿಯಮಗಳು ಗೊತ್ತಿರಲಿಲ್ಲ ಎಂದು ಕಾಕ್ರೋಚ್ ಸುಧಿ ಒಪ್ಪಿಕೊಂಡಿದ್ದಾರೆ.

35
ಸುದೀಪ್ ಎಚ್ಚರಿಕೆ

ಮಕ್ಕಳನ್ನು ಶಾಲೆಗೆ ಕಳುಹಿಸಿದಾಗ ಮೊದಲು ಎಲ್‌ಕೆಜಿ ಇರುತ್ತದೆ. ಮೊದಲು ಎ ಫಾರ್ ಆಪಲ್, ಬಿ ಫಾರ್ ಬಾಲ್ ಮತ್ತು ಸಿ ಫಾರ್ ಕ್ಯಾಟ್ ಕಲಿಯಬೇಕು ಎಂದು ಕಾಕ್ರೋಚ್ ಸುಧಿಗೆ ಸುದೀಪ್ ಅವರು ಪಾಠ ಮಾಡಿದರು. ಇದು ನಿಮ್ಮ ಮೊದಲನೇ ವಾರ, ನಾನು 11 ಸೀಸನ್ ನಡೆಸಿದ್ದೇನೆ ಎಂದು ಸುದೀಪ್ ಎಚ್ಚರಿಕೆ ನೀಡಿದರು.

45
ಹೇಳಿಕೆಗಳಿಗೆ ಬದ್ಧವಾಗಿರಲ್ಲ

ಈ ವೇಳೆ ಮಾತನಾಡಿದ ಗಿಲ್ಲಿ ನಟ, ಟಾಸ್ಕ್ ಆಡುವಾಗ ಮಲ್ಲಮ್ಮ ಅವರು 25 ಸ್ಲ್ಯಾಬ್‌ಗಳನ್ನು ಹಲಗೆ ಮೇಲೆ ಇರಿಸಿದ್ದರು. ಆದ್ರೆ ಕಾಕ್ರೋಚ್ ಸುಧಿ ಪದೇ ಪದೇ ತಮ್ಮ ಸ್ಲ್ಯಾಬ್ ಬಿಳಿಸಿಕೊಳ್ಳುತ್ತಿದ್ದರು. ಇದು ಅವರ ಆಟದ ಸ್ಟ್ರಾಟರ್ಜಿ ಅಂತಾರೆ ಎಂದು ತಮಾಷೆ ಮಾಡಿದರು. ಯಾಶಿಕಾ ಮಾತನಾಡಿ, ಕಾಕ್ರೋಚ್ ಸುಧಿ ಅವರು ತಮ್ಮ ಹೇಳಿಕೆಗಳಿಗೆ ಬದ್ಧವಾಗಿರಲ್ಲ ಎಂದರು.

ಇದನ್ನೂ ಓದಿ: ಥರ್ಡ್ ಕ್ಲಾಸ್ ರೀತಿ ವರ್ತಿಸಿದ್ದ, ಅವಾಜ್ ಹಾಕಿದ್ಮೇಲೆ ಬಕೆಟ್ ಹಿಡಿತಿದ್ದಾನೆ: ಸತೀಶ್ ಹೇಳಿದ್ಯಾರಿಗೆ?

55
ಫೈನಲಿಸ್ಟ್

ಟಾಸ್ಕ್ ಸಂದರ್ಭದಲ್ಲಿಯೂ ಉಸ್ತುವಾರಿಯಾಗಿದ್ದ ಅಶ್ವಿನಿ ಗೌಡ ಅವರು ಕಾಕ್ರೋಚ್ ಸುಧಿ ಸುಳ್ಳು ಹೇಳುತ್ತಿರೋದನ್ನು ಪತ್ತೆ ಮಾಡಿದ್ದರು. ಮೊದಲೇ ಎಲ್ಲಾ ರೂಲ್ಸ್ ಗೊತ್ತಿತ್ತು ಅಂತ ಹೇಳುತ್ತಿರೋದು ಸುಳ್ಳು ಎಂದು ಅಶ್ವಿನಿ ಗೌಡ ಹೇಳಿದ್ದರು. ಮತ್ತೊಂದು ಟಾಸ್ಕ್‌ನಲ್ಲಿ ಮಾಳು ಆಟವಾಡಿ ಗೆದ್ದು ಸುಧಿ ಅವರನ್ನು ಫೈನಲಿಸ್ಟ್ ಮಾಡಿದ್ದರು.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಸಿಗುತ್ತೋ ಇಲ್ಲೋ ಗೊತ್ತಿರಲಿಲ್ಲ, 5 ಗ್ಲಾಸ್ ಕುಡಿದು ಬಂದೆ ಎಂದ ಸ್ಪರ್ಧಿ

Read more Photos on
click me!

Recommended Stories