ಕೆಂಪು ಸೀರೆಯುಟ್ಟು ಆರು ಗಜಗಳ ಶುದ್ಧ ಸೊಬಗು ಎಂದ ಸಂಗೀತಾ ಶೃಂಗೇರಿ: ನಿಮ್ ತಮ್ಮ ಡ್ರೋನ್ ಪ್ರತಾಪ್‌ ಎಲ್ಲಿ ಎಂದ ಫ್ಯಾನ್ಸ್‌!

Published : Mar 01, 2024, 12:30 AM IST

ನಟಿ ಸಂಗೀತಾ ಶೃಂಗೇರಿ ಅವರು ಬಿಗ್​​ಬಾಸ್ 10 ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಿಗ್​ಬಾಸ್ ಮನೆಗೆ ಹೋಗಿ ಬಂದಾಗಿನಿಂದಲೂ ಸದ್ದು ಮಾಡಿದ ಸಂಗೀತಾ ಶೃಂಗೇರಿ ಇದೀಗ  ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. 

PREV
17
ಕೆಂಪು ಸೀರೆಯುಟ್ಟು ಆರು ಗಜಗಳ ಶುದ್ಧ ಸೊಬಗು ಎಂದ ಸಂಗೀತಾ ಶೃಂಗೇರಿ: ನಿಮ್ ತಮ್ಮ ಡ್ರೋನ್ ಪ್ರತಾಪ್‌ ಎಲ್ಲಿ ಎಂದ ಫ್ಯಾನ್ಸ್‌!

ಚಾರ್ಲಿ ಬೆಡಗಿ, ಬಿಗ್​ಬಾಸ್ ಚೆಲುವೆ ಸಂಗೀತಾ ಶೃಂಗೇರಿ ಅವರು ಇತ್ತೀಚೆಗೆ ಸುಂದರವಾದ ಕೆಂಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. ಫುಲ್​ಸ್ಲೀವ್ಸ್ ರೆಡ್ ಕಲರ್ ಬ್ಲೌಸ್ ಧರಿಸಿಕೊಂಡು ಝರಿ ಸೀರೆಯುಟ್ಟಿದ್ದು, ಅವರ ಲುಕ್ ಆಕರ್ಷಕವಾಗಿತ್ತು.

27

ಸೀರೆ ಜೊತೆ ತಲೆಗೂದಲಿಗೆ ಸಂಗೀತಾ ಮಲ್ಲಿಗೆ ಮುಡಿದಿದ್ದರು. ಇದರ ಜೊತೆಗೆ ಹಸಿರು ಹರಳಿನ ಗ್ರ್ಯಾಂಡ್ ಇಯರಿಂಗ್ಸ್, ನೆಕ್ಲೆಸ್ ಹಾಗೂ ಉಂಗುರವನ್ನು ಧರಿಸಿದ್ದರು. ಇದು ಅವರಿಗೆ ತುಂಬಾ ಸಖತ್ತಾಗಿ ಕಾಣಿಸಿದೆ. ರೆಡ್ ಜೊತೆ ಗ್ರೀನ್ ಹರಳಿನ ಜ್ಯುವೆಲ್ಸ್ ಸಖತ್ ಆಗಿ ಮ್ಯಾಚಿಂಗ್ ಆಗಿತ್ತು.

37

ಇದರ ಜೊತೆಗೆ ಸಂಗೀತಾ ಕೈತುಂಬಾ ಬಳೆಗಳನ್ನು ಕೂಡಾ ಧರಿಸಿದ್ದರು. ಅವರು ಕೆಂಬಣ್ಣದ ಪುಟ್ಟ ಬಿಂದಿ ಹಣೆಗಿಟ್ಟು ತುಂಬಾ ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ. ಅವರು ಕೆಲವೊಂದು ಫೋಟೋಗಳನ್ನು ಇನ್​ಸ್ಟಾಗ್ರಾಮ್‌ ಮೂಲಕ ಶೇರ್ ಮಾಡಿದ್ದಾರೆ. 

47

ಇಷ್ಟೇ ಅಲ್ಲದೆ ಸಂಗೀತಾ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಪುಟ್ಟ ಮಕ್ಕಳೊಂದಿಗೂ ಸಮಯ ಕಳೆದಿದ್ದು ಕಂಡುಬಂದಿದೆ. ನೆಟ್ಟಿಗರು ಕೂಡಾ ಸೂಪರ್, ಕ್ಯೂಟ್, ಮುದ್ದು ಗೊಂಬೆ, ಹಾಗೂ ನಿಮ್ ತಮ್ಮ ಡ್ರೋನ್ ಪ್ರತಾಪ್ ಎಲ್ಲಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

57

ಸಂಗೀತಾ ಅವರು ಗುರುತಿಸಿಕೊಂಡಿದ್ದು 777 ಚಾರ್ಲಿ ಸಿನಿಮಾ ಮೂಲಕ. ಸಂಗೀತ ಬಿಗ್ ಬಾಸ್ 10ರ ಗೆಲ್ಲುವ ಸ್ಪರ್ಧಿ ಆಗಿದ್ರು. ಆದ್ರೆ 2ನೇ ರನ್ನರ್ ಅಪ್ ಆಗಿ ಹೊರ ಹೋಗಿದ್ದು ಮಾತ್ರ ಸಂಗೀತ ಅಭಿಮಾನಿಗಳಲ್ಲಿ ತೀರಾ ನೋವುಂಟು ಮಾಡಿತ್ತು.

67

ಸೋಷಿಯಲ್ ಮೀಡಿಯಾದಲ್ಲಿ ಸಂಗೀತಾ ಶೃಂಗೇರಿ ಆ್ಯಕ್ಟಿವ್ ಆಗಿದ್ದು ತಮ್ಮ ಕುರಿತಾದ ಎಲ್ಲಾ ವಿಚಾರಗಳನ್ನೂ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಫೋಟೋಸ್ ಹಾಗೂ ವಿಡಿಯೋಸ್ ಅಪ್ಲೋಡ್ ಮಾಡುತ್ತಿರುತ್ತಾರೆ.

77

ಸಂಗೀತಾ ಶೃಂಗೇರಿ ಧಾರಾವಾಹಿಗಳ ಮೂಲಕ ಸದ್ದು ಮಾಡುತ್ತಾ ಕೊನೆಗೆ ಕನ್ನಡ ಬೆಳ್ಳಿತೆರೆ ಮೇಲೆ ಕೂಡ ಮಿಂಚಿದ್ದರು. ಅದರಲ್ಲೂ ಕೆಲವು ವರ್ಷದ ಹಿಂದೆ ರಿಲೀಸ್ ಆಗಿದ್ದ ಸಂಗೀತಾ ಶೃಂಗೇರಿ ಅವರ ಸಿನಿಮಾ '777 ಚಾರ್ಲಿ' ಸಖತ್ ಸೌಂಡ್ ಮಾಡಿತ್ತು. 

Read more Photos on
click me!

Recommended Stories