ಚೈತ್ರಾ ಕೊಟೂರು-ನಾಗಾರ್ಜುನ್‌ರದ್ದು ಬಲವಂತ ಮದುವೆ ಆಗಿದ್ದರೆ ಈ ಪೋಟೋಗಳು ಏನು?

First Published | Mar 30, 2021, 5:44 PM IST

ಚೈತ್ರಾ ಕೊಟೂರು ಹಾಗೂ ನಾಗಾರ್ಜುನ್ ಮದುವೆ ವಿಚಾರದ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟನೆ ಸಿಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು, ಇದು ಬಲವಂತದ ಮದುವೆ ಎಂದು ಹೇಳಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. 

ಮಾರ್ಚ್‌ 28ರಂದು ಬೆಂಗಳೂರಿನ ಗಣಪತಿ ದೇವಾಲಯದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚೈತಾ ಕೊಟೂರು ಮತ್ತು ನಾಗಾರ್ಜುನ್.
ಸಿವಿಲ್ ಎಂಜಿನಿಯರ್ ಅಗಿರುವ ನಾಗಾರ್ಜುನ್ ಮದುವೆಯೇ ದಿನವೇ ಸಂಜೆ ಪೊಲೀಸ್ ಸ್ಟೇಷನ್‌ ಮೆಟ್ಟಿಲೇರಿ, ಇದು ಬಲವಂತದ ಮದುವೆ ಎಂದು ಕುಟುಂಬಸ್ಥರ ಜೊತೆ ದೂರು ನೀಡಿದ್ದಾರೆ.
Tap to resize

ಇಬ್ಬರ ಪ್ರೀತಿಗೆ ನಾಗಾರ್ಜುನ್ ಕುಟುಂಬದಿಂದ ವಿರೋಧವಿದ್ದ ಕಾರಣ ಒಪ್ಪಿಗೆಯಿಂದಲೇ ದೇವಾಲಯದಲ್ಲಿ ಮದುವೆ ಮಾಡಿಕೊಂಡಿರುವುದು ಎಂದು ಚೈತ್ರಾ ಕೊಟೂರು ಹೇಳುತ್ತಿದ್ದಾರೆ.
ಚೈತ್ರಾ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಕಾರಣ ಚೈತ್ರಾ ಕೂಡ ಕೋಲಾರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರುಗಳನ್ನು ಸ್ವೀಕರಿಸಿದ ಪೊಲೀಸರು, ಎರಡು ಕುಟುಂಬದವರು ಮಾತನಾಡಲು ಬುಧವಾರದವರೆಗೂ ಸಮಯ ನೀಡಿದ್ದಾರೆ.
ಒಂದು ವರ್ಷದಿಂದ ಪ್ರೀತಿಸುತ್ತಿರುವುದರ ಬಗ್ಗೆ ಚೈತ್ರಾ ಬಳಿ ಸಾಕ್ಷಿಗಳಿವೆ, ನಾಗಾರ್ಜುನ್‌ ಹುಟ್ಟು ಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ನಾಗಾರ್ಜುನ್‌ ಹುಟ್ಟುಹಬ್ಬ ಆಚರಿಸಿರುವ ಚೈತ್ರಾ ಡಿಸೈನರ್ ಬಟ್ಟೆಗಳು ಹಾಗೂ ಚಿನ್ನ ಬ್ರೇಸಲೆಟ್ ಉಡುಗೊರೆಯಾಗಿ ನೀಡಿದ್ದರು.
ಈ ಫೋಟೋಗಳ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಬಲವಂತ ಮದುವೆ ಆಗಿದ್ದರೆ ಚೈತ್ರಾ ಬಳಿ ನೀವು ಚಿನ್ನದ ಬ್ರೇಸಲೆಟ್ ಪಡೆಯುವುದು ತಪ್ಪಲ್ಲವೇ? ಎಂದು ಕಾಮೆಂಟ್ ಮಾಡಿದ್ದಾರೆ.
ಒಂದು ವೇಳೆ ನಾಗಾರ್ಜುನ್ ಕುಟುಂಬದವರು ಮಾತುಕತೆ ಮಾಡಲು ಬಾರದಿದ್ದರೆ ಚೈತ್ರಾ ಕಾನೂನಿನ ಪ್ರಕಾರ ಏನು ಮಾಡಬೇಕೆಂಬುದನ್ನು ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

Latest Videos

click me!