ಸಹೋದರಿಯರ ಜೊತೆ ಭವ್ಯಾ ಗೌಡ ಫೋಟೋಶೂಟ್; ಕ್ಯಾಮೆರಾಮ್ಯಾನ್ ಕೂಡ ಏನ್ ಡವ್ ಮಾಡ್ತಿದ್ದಾರೆ ಅನ್ನೋದಾ?

Published : Mar 11, 2025, 03:01 PM ISTUpdated : Mar 11, 2025, 03:04 PM IST

ಡಿಫರೆಂಟ್ ಸೀರೆಯಲ್ಲಿ ಮಿಂಚಿದ ಅಕ್ಕ-ತಂಗಿಯರು. ಇಲ್ಲಿ ಯಾರು ಸೂಪರ್, ಯಾರು ಮದುವೆ ನೆಕ್ಸಟ್‌ ಹಾಗೂ ಯಾರು ನಮಗೆ ಗರ್ಲ್‌ಫ್ರೆಂಡ್‌ ಅಂತ ಗೆಸ್ ಮಾಡ್ತಿದ್ದಾರೆ ನೆಟ್ಟಿಗರು.

PREV
16
ಸಹೋದರಿಯರ ಜೊತೆ ಭವ್ಯಾ ಗೌಡ ಫೋಟೋಶೂಟ್; ಕ್ಯಾಮೆರಾಮ್ಯಾನ್ ಕೂಡ ಏನ್ ಡವ್ ಮಾಡ್ತಿದ್ದಾರೆ ಅನ್ನೋದಾ?

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಭವ್ಯಾ ಗೌಡ ಮೊದಲ ಸಲ ತಮ್ಮ ಅಕ್ಕ ದಿವ್ಯಾ ಗೌಡ ಹಾಗೂ ತಂಗಿ ವರ್ಷಿಣಿ ಜೊತೆ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. 

26

ರೋಸ್‌ ಗೋಲ್ಡ್‌ ಬಣ್ಣದ ರೇಶ್ಮೆ ಸೀರೆಯಲ್ಲಿ ಭವ್ಯಾ ಗೌಡ ಮಧುಮಗಳಂತೆ ಮಿಂಚುತ್ತಿದ್ದಾರೆ. ಸೊಂಟಕ್ಕೆ ಡಾಬು, ಹಸಿರು ಬಣ್ಣದ ನೆಕ್‌ಲೆಸ್‌ ಹಾಗೂ ಬೈತಲೆ ಬೊಟ್ಟು ಧರಿಸಿದ್ದಾರೆ. 

36

ಬಪ್ಪು ಬಣ್ಣದ ಡಿಸೈನರ್ ಕ್ರೇಮ್ ಮೈಸೂರು ಸಿಲ್ಕ್‌ ಸೀರೆಯಲ್ಲಿ ದಿವ್ಯಾ ಗೌಡ ಕಾಣಿಸಿಕೊಂಡಿದ್ದಾರೆ. ಇವರು ಸಖತ್ ದೊಡ್ಡ ಕಲ್ಲುಗಳ ಸರ ಹಾಗೂ ಒಂದೆರಡು ಬಳೆಗಳನ್ನು ಧರಿಸಿದ್ದಾರೆ.

46

ಇನ್ನೂ ತಂಗಿ ವರ್ಷಿಣಿ ನೀಲಿ ಮತ್ತು ಹಸಿರು ಬಣ್ಣದ ಸಾಫ್ಟ್‌ ಸಿಲ್ಕ್‌ ಸೀರೆ ಧರಿಸಿದ್ದಾರೆ. ಇವರು ಯಾವುದೇ ಸರ, ಬಳೆ ಧರಿಸಿಲ್ಲ. ದೊಡ್ಡ ಕಿವಿ ಓಲೆ ಅಷ್ಟೇ ಧರಿಸಿ ಸಖತ್ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. 

56

ಈ ಫೋಟೋಗಳನ್ನು ಕ್ಲಿಕ್ ಮಾಡಿರುವುದು ಉಮೇಶ್ ಎಂಬುವವರು. 'ಮುಗಿಯಲಾರದ ಕಥೆಗಳು' ಎಂದು ಭವ್ಯಾ ಬರೆದುಕೊಂಡು ಪಕ್ಕದಲ್ಲಿ ಮೂರು ಕೋತಿಗಳ ಎಮೋಜಿ ಹಾಕಿದ್ದಾರೆ.

66

ನ್ಯಾಚುರಲ್ ಆಗಿ ಫೋಟೋ ಬರಬೇಕು ಎಂದು ಫೋಟೋಗ್ರಾಫರ್‌ ಕೆಲವೊಂದು ಸಲಹೆ ನೀಡುತ್ತಿದ್ದರು. ಈ ಬಾಲೆಯರು ಮಾಡುತ್ತಿದ್ದ ಕೆಲಸ ನೋಡಿ ಏನ್ ಡವ್ ಮಾಡ್ತಿದ್ದಾರೆ ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. 

Read more Photos on
click me!

Recommended Stories