ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಶಶಿ ಕುಮಾರ್ ಮತ್ತು ಸ್ವಾತಿ ಆಗಸ್ಟ್ 7ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಕನ್ಷೆನ್ಷನ್ ಸೆಂಟರ್‌ವೊಂದರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 6ರಂದು ಆರತಕ್ಷತೆ ಮತ್ತು 7ರಂದು ಮದುವೆ ನಡೆದಿದೆ.
ಶಶಿ ಕುಮಾರ್ ಮತ್ತು ಸ್ವಾತಿ ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಆಗಿದೆ.
ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಹುಡುಗಿ ಹೆಸರು ಸ್ವಾತಿ, ಮೂಲತಃ ದೊಡ್ಡಬಳ್ಳಾಪುರದವರು. ಸ್ವಾತಿ ಕೂಡ ಕೃಷಿ ಕುಟುಂಬದಿಂದ ಬಂದವರು ಎನ್ನಲಾಗಿದೆ.
ಕಿರುತೆರೆ, ಸಿನಿಮಾ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶಶಿ ಕುಮಾರ್ ಮೂಲತಃ ಚಿಕ್ಕಬಳ್ಳಾಪುರದವರು. ಬೆಂಗಳೂರಿನ ಪ್ರತಿಷ್ಠಿತ ಜಿಕೆವಿಕೆಯಲ್ಲಿ ಕೃಷಿ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.
ಬಿಗ್ ಬಾಸ್ ಶೋ ನಂತರ ಶಶಿ ಕುಮಾರ್ ಶುಗರ್ ಫ್ಯಾಕ್ಟರಿ, ಮೆಹಬೂಬ ಸಿನಿಮಾದಲ್ಲಿ ನಟಿಸಿದ್ದಾರೆ. ಮೆಹಬೂಬ ಚಿತ್ರಕ್ಕೆ 6 ಪ್ಯಾಕ್ ಕೂಡ ಮಾಡಿದ್ದರು
.ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶಶಿ ಕುಮಾರ್ ಆರೋಗ್ಯದ ಬಗ್ಗೆ ಸುಲಭ ಕೃಷಿ ಮತ್ತು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾರೆ.