ಯೋಗ್ಯತೆ ಇಲ್ದೆರೋರೆಲ್ಲಾ ಬಿಗ್ ಬಾಸ್‌ನಲ್ಲಿ; ಸೋನು ಶ್ರೀನಿವಾಸ್ ವಿರುದ್ಧ ಮುಗಿಬಿದ್ದ ನೆಟ್ಟಿಗರು

First Published | Aug 7, 2022, 4:44 PM IST

ಓಟಿಟಿ ಬಿಗ್ ಬಾಸ್ ಮನೆ ಪ್ರವೇಶಿಸಿರುವ ಎರಡನೇ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಮತ್ತು ಕಾರ್ಯಕ್ರಮದ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಬಿಗ್ ಬಾಸ್ ರಿಯಾಲಿಟಿ ಶೋ ಓಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಆಗಸ್ಟ್‌ 6ರಿಂದ ಆರಂಭವಾಗಿರುವ ಈ ಶೋ ಕೆಲವೇ ಗಂಟೆಗಳಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡುತ್ತಿದೆ. 

ಓಟಿಟಿ ಬಿಗ್ ಬಾಸ್‌ ಮನೆಗೆ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಸುದ್ದಿಯಲ್ಲಿದ್ದಾರೆ. 

Tap to resize

ಕಾಂಟ್ರವರ್ಸಿ ವಿಡಿಯೋ ಸಣ್ಣ ಪುಟ್ಟಕ್ಕೆ ಟ್ರೋಲ್ ಆಗುವಂತೆ ಮಾಡಿಕೊಳ್ಳುವ ಸೋನು ಯಾವ ಕಾರಣದಿಂದ ಬಿಗ್ ಬಾಸ್‌ಗೆ ಆಯ್ಕೆ ಆಗಿದ್ದಾರೆ ಅನ್ನೋದು ನೆಟ್ಟಿಗರ ಪ್ರಶ್ನೆಯಾಗಿದೆ. 

 ಯೋಗ್ಯತೆ ಇಲ್ದೆರೋರೆಲ್ಲಾ ಬಿಗ್ ಬಾಸ್‌ನಲ್ಲಿ ಇದ್ದಾರೆ ಸಾಧನೆ ಮಾಡಿರುವವರನ್ನು ಆಯ್ಕೆ ಮಾಡಿಲ್ಲ ಅಲ್ಲದೆ ಸೋನು ಯಾರಿಗೂ ಮರ್ಯಾದೆ ಕೊಡುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಈಗಷ್ಟೆ ಡಿಪ್ಲಮೋ ಕೋರ್ಸ್‌ ಮುಗಿಸಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಬ್ರ್ಯಾಂಡ್‌ಗಳ ಜೊತೆ ಕೈ ಜೋಡಿಸಿ ಕೆಲಸ ಮಾಡಿ, ಫೋಟೋಶೂಟ್ ಮಾಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 

ಸೋನು ಗೌಡ ಮೂಲ ಹೆಸರು ಶಾಂಭವಿ ಎಂದು. ಸರ್ಕಾರಿ ಶಾಲೆ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದರು.

ಅಲ್ಲದೆ ಸೋನು ಖಾಸಗಿ ವಿಡಿಯೋಗಳು ಲೀಕ್ ಅಗಿ ದೊಡ್ಡ ಅವಾಂತರ ಸೃಷ್ಟಿ ಮಾಡಿತ್ತು. ಈ ರೀತಿ ಜನರು ಬಂದರೆ ಮಕ್ಕಳು ಜೀವನದಲ್ಲಿ ಸರಿಯಾ ಮಾರ್ಗದಲ್ಲಿ ನಡೆಯುವುದಿಲ್ಲ ಎಲಿಮಿನೇಟ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ ನೆಟ್ಟಿಗರು.

Latest Videos

click me!