ಹಳ್ಳಿ ಹುಡುಗಿ ಪ್ಯಾಟೆಗೆ ಬಂದ್ಲು ರಿಯಾಲಿಟಿ ಶೋ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ನಯನಾ.
ಬಿಗ್‌ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಸಿದ್ದರು. ಅನೇಕ ವಾರಗಳು ಮನೆಯಲ್ಲಿದ್ದು, ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.
ಚರಣ್ ಹಾಗೂ ನಯನಾ ಹಲವು ವರ್ಷಗಳ ಕಾಲ ಪ್ರೀತಿಸಿ ಗುರು ಹಿರಿಯರ ಒಪ್ಪಿಗೆ ಪಡೆದು, ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಜನವರಿ 30ರಂದು ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ರಿವೀಲ್ ಮಾಡಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ವಿದೇಶದಲ್ಲಿ ನೆಲೆಸಿರುವ ನಯನಾ ಇದೀಗ ತಾಯಿ ಆಗುತ್ತಿದ್ದಾರೆ.
ಮುಖದಲ್ಲಿ ತಾಯಿತನದ ಗ್ಲೋ ಎದ್ದು ಕಾಣಿಸುತ್ತಿದ್ದು, ಇನ್‌ಸ್ಟಾದಲ್ಲಿ ಹೆಚ್ಚಾಗಿ ಸೆಲ್ಫೀ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಡಾ.ರಾಜ್‌ಕುಮಾರ್ ಕುಟುಂಬದವರ ಜೊತೆ ಉತ್ತಮ ಸಂಬಂಧ ಹೊಂದಿರುವ ನಯನ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Suvarna News