Holi 2022- Ankita Lokhande ಹೋಳಿ ಪಾರ್ಟಿಯಲ್ಲಿ ಕಿರುತೆರೆ ಸೆಲೆಬ್ರಿಟಿಗಳ ದಂಡು

Published : Mar 20, 2022, 05:52 PM IST

ಶುಕ್ರವಾರ ದೇಶಾದ್ಯಂತ ಹೋಳಿ  (Holi 2022)  ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಸಾಮಾನ್ಯ ಜನರಿಂದ ಹಿಡಿದು ಕಿರುತೆರೆ ಸೆಲೆಬ್ರಿಟಿಗಳವರೆಗೂ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಾಲಿಕಾ ವಧು ಧಾರಾವಾಹಿಯಲ್ಲಿ ನಂದಿನಿ ಪಾತ್ರ ಮಾಡಿದ್ದ ನಟಿ ಮಹಿ ವಿಜ್  (Mahi Vij) ಪತಿ ಜೈ ಭಾನುಶಾಲಿ ಹಾಗೂ ಮಗಳು ತಾರಾ ಅವರೊಂದಿಗೆ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಅಂಧೇರಿಯಲ್ಲಿ ಅಂಕಿತಾ ಲೋಖಂಡೆ (Ankita Lokhande) ಹೋಳಿ ಪಾರ್ಟಿಯನ್ನು ಎಂಜಾಯ್ ಮಾಡಿದ್ದಾರೆ. ಇವರಲ್ಲದೆ, ಟಿವಿ ಉದ್ಯಮದಿಂದ ದಿವ್ಯಾಂಕಾ ತ್ರಿಪಾಠಿ  (Divyanka Tripathi) ಮತ್ತು ಅವರ ಪತಿ  ವಿವೇಕ್ ದಹಿಯಾ, ಸರ್ಗುನ್ ಮೆಹ್ತಾ ಮತ್ತು ಅವರ ಪತಿ ರವಿ ದುಬೆ ಸೇರಿದಂತೆ ಅನೇಕ ಟಿವಿ ಸ್ಟಾರ್ಸ್‌ ಆಗಮಿಸಿದರು. ಕಿರುತೆರೆ ಸೆಲೆಬ್ರಿಟಿಗಳು ಹೋಳಿ ಆಚರಿಸಿದ್ದು ಹೀಗೆ...

PREV
17
Holi 2022- Ankita Lokhande ಹೋಳಿ ಪಾರ್ಟಿಯಲ್ಲಿ ಕಿರುತೆರೆ ಸೆಲೆಬ್ರಿಟಿಗಳ ದಂಡು

ಬಾಲಿಕಾ ವಧು ಧಾರಾವಾಹಿಯಲ್ಲಿ ನಂದಿನಿ ಪಾತ್ರ ಮಾಡಿದ್ದ ನಟಿ ಮಹಿ ವಿಜ್ ಪತಿ ಜೈ ಭಾನುಶಾಲಿ ಹಾಗೂ ಮಗಳು ತಾರಾ ಅವರೊಂದಿಗೆ ಹೋಳಿ ಹಬ್ಬವನ್ನು  ಆಚರಿಸಿದರು. ಈ ಸಮಯದಲ್ಲಿ, ಮಹಿ ಜೀನ್ಸ್‌ ಶಾರ್ಟ್‌ ಧರಿಸಿ ಕಾಣಿಸಿಕೊಂಡರು.


 

27

ಅಂಧೇರಿಯಲ್ಲಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್ ಹೋಳಿ ಪಾರ್ಟಿಯನ್ನು ಆಯೋಜಿಸಿದ್ದರು. ಪಾರ್ಟಿಯ ಸಮಯದಲ್ಲಿ ತನ್ನ ಪತಿಯೊಂದಿಗೆ ಪೋಸ್ ನೀಡುತ್ತಿರುವ ಪವಿತ್ರಾ ರಿಶ್ತಾ ನಟಿ.


 

37

ಹೋಳಿ ಹಬ್ಬದಂದು ಕಿರುತೆರೆ ನಟಿ ರಶ್ಮಿ ದೇಸಾಯಿ ಈ ರೀತಿ ಕಾಣುತ್ತಿದ್ದರು. ರಶ್ಮಿ ದೇಸಾಯಿ ಇತ್ತೀಚೆಗೆ ಕೆಲವು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.


 

47

ಹೋಳಿ ಪಾರ್ಟಿಗೆ ಪತಿ ವಿವೇಕ್ ದಹಿಯಾ ಅವರ ಜೊತೆ ದಿವ್ಯಾಂಕ ತ್ರಿಪಾಠಿ ಆಗಮಿಸಿದರು. ಇಬ್ಬರೂ ಪರಸ್ಪರ ಮುಖಕ್ಕೆ ಗುಲಾಲ್ ಬಣ್ಣ ಹಚ್ಚಿಕೊಂಡಿದ್ದ  ಈ ಜೋಡಿ ಕ್ಯಾಮಾರಾಗೆ ಪೋಸ್‌ ಕೊಟ್ಟಿದ್ದು ಹೀಗೆ.

57

ಪತ್ನಿ ಸರ್ಗುನ್ ಮೆಹ್ತಾ ಅವರ ಜೊತೆ ಹೋಳಿ ಪಾರ್ಟಿಯಲ್ಲಿ ಪಾಲ್ಗೊಳ್ಳಲು ರವಿ ದುಬೆ ಆಗಮಿಸಿದರು. ಸರ್ಗುನ್ ಮೆಹ್ತಾ ಅವರು ಪ್ರಸಿದ್ಧ ಹಾಡು 'ತಿತ್ಲಿಯಾನ್' ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.


 

67

ಹೋಳಿ ಪಾರ್ಟಿಯಲ್ಲಿ ನಟಿ ರಾಯ್ ಲಕ್ಷ್ಮಿ ಈ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೂಲಿ ಚಿತ್ರದಲ್ಲಿ ರಾಯ್ ಲಕ್ಷ್ಮಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರ ಹೆಸರು ಎಂಎಸ್ ಧೋನಿಯೊಂದಿಗೆ ಸಹ ಕೇಳಿ ಬಂದಿತ್ತು.

77

ಬಿಗ್ ಬಾಸ್ 15 ವಿಜೇತ ತೇಜಸ್ವಿ ಪ್ರಕಾಶ್ ಅವರೊಂದಿಗೆ ಕರಣ್ ಕುಂದ್ರಾ,  ಅಂಧೇರಿಯಲ್ಲಿ ನಡೆದ ಅಂಕಿತಾ ಲೋಖಂಡೆ ಅವರ ಹೋಳಿ ಪಾರ್ಟಿಗೆ ಆಗಮಿಸಿದರು. ಈ ವೇಳೆ ಇಬ್ಬರೂ  ಹೋಳಿ ಆಡಿ ನಂತರ ಕ್ಯಾಮರಾಗೆ ಪೋಸ್ ನೀಡಿದರು.


 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories