ಲಿವರ್‌ ದಾನ ಮಾಡ್ತೀನಿ ಎಂದ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್!‌ ಹಾಡಿ ಹೊಗಳಿದ ರಚಿತಾ ರಾಮ್

Published : May 14, 2025, 12:09 PM ISTUpdated : May 14, 2025, 12:13 PM IST

ಯಾವಾಗಲೂ ಕಾಂಟ್ರವರ್ಸಿಗಳಿಂದಲೇ ಸದ್ದು ಮಾಡುವ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಈ ಬಾರಿ ಲಿವರ್‌ ದಾನ ಮಾಡ್ತೀನಿ ಎಂದು ಹೇಳಿದ್ದಾರೆ. ʼಭರ್ಜರಿ ಬ್ಯಾಚುಲರ್ಸ್‌ʼ ಶೋನಲ್ಲಿ ಅವರು ಈ ಬಗ್ಗೆ ಹೇಳಿದ್ದಾರೆ.  

PREV
15
ಲಿವರ್‌ ದಾನ ಮಾಡ್ತೀನಿ ಎಂದ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್!‌ ಹಾಡಿ ಹೊಗಳಿದ ರಚಿತಾ ರಾಮ್

ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ 'Dedication Round' ಏರ್ಪಡಿಸಲಾಗಿತ್ತು. ಆ ವೇಳೆ ಜೊತೆಗಾರರ ಸಾಧನೆ, ಏಳಿಗೆಗಾಗಿ ಪರಸ್ಪರ ಹರಕೆ, ತ್ಯಾಗಗಳಿಂದ ಸಾರ್ಥಕತೆ ಮೆರೆದಿದ್ದಾರೆ. ಡ್ರೋನ್‌ ಪ್ರತಾಪ್‌ ಅವರು ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ, ನೆಲದಲ್ಲಿ ಊಟ ಮಾಡಿದರು. ಇನ್ನು ದರ್ಶನ್‌ ನಾರಾಯಣ್‌ ಅವರು ರವಿಚಂದ್ರನ್‌ ಜೊತೆ ಅಮೃತಾ ನಾಯ್ಕ್‌ ಫೋಟೋಶೂಟ್‌ ಮಾಡಿಸಿದರು. 

25

ಅಮ್ರಿಟಾಗೋಸ್ಕರ ಸುನೀಲ್‌ ಹಾಡು ಬರೆದು ಹಾಡಿದರು. ಸುಕೃತಾ ನಾಗ್‌ಗೋಸ್ಕರ ವಿಶೇಷವಾಗಿ ಅಪ್ಪ-ಮಗಳ ಬಾಂಧವ್ಯ ಹೇಳುವ ಡ್ಯಾನ್ಸ್‌ ಮಾಡಲಾಯ್ತು. ಇನ್ನು ಪವಿಗೋಸ್ಕರ ಕೂಡ ಅವರ ಪಾರ್ಟನರ್‌ ಹುಡುಗಿ ಡ್ರೆಸ್‌ ಹಾಕಿ ಡ್ಯಾನ್ಸ್‌ ಮಾಡಿದರು.

35

ಈ ಟೈಮ್‌ನಲ್ಲಿ ರಕ್ಷಕ್‌ ಅವರು ಲಿವರ್‌ ದಾನ ಮಾಡ್ತೀನಿ ಎಂದು ಹೇಳಿದ್ದಾರೆ. ʼಸೀತಾರಾಮʼ ಧಾರಾವಾಹಿ ನಟಿ ರಮೋಲ ಅವರು ರಕ್ಷಕ್‌ಗೆ ಮೆಂಟರ್‌ ಆಗಿದ್ದಾರೆ. ಈ ಹೇಳಿಕೆ ಕೇಳಿ ನಟಿ ರಕ್ಷಿತಾ ಪ್ರೇಮ್‌ ಅವರು “ನಿನ್ನ ಹೃದಯ ದೊಡ್ಡದು” ಎಂದು ಹೇಳಿದ್ದಾರೆ.
 

45

ರಕ್ಷಕ್‌ ಅವರು ಈ ವೇದಿಕೆಯಲ್ಲಿ ʼಬುಲ್‌ ಬುಲ್‌ʼ ಸಿನಿಮಾದ ವಿವಾದಿತ ಡೈಲಾಗ್‌ ಹೇಳಿ ದೊಡ್ಡ ಕಾಂಟ್ರವರ್ಸಿ ಆಗಿತ್ತು. ಚಾಮುಂಡಿ ಭಕ್ತರ ನಂಬಿಕೆಗೆ ಧಕ್ಕೆ ಆಗಿದೆ ಎಂದು ಆರೋಪಿಸಲಾಗಿತ್ತು. ಆಮೇಲೆ ರಕ್ಷಕ್‌ ಅವರು ಕ್ಷಮೆ ಕೇಳಿದ್ದರು. 
 

55

ಅಂದಹಾಗೆ ರಕ್ಷಕ್‌ ಅವರು ರಿಯಾಲಿಟಿ ಶೋನಲ್ಲಿ ಸದ್ಯ ಬ್ಯುಸಿ ಆಗಿದ್ದು, ಸಿನಿಮಾ ಮಾಡುವೆ ಎಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಸಿನಿಮಾ ಬಗ್ಗೆ ಅಪ್‌ಡೇಟ್ಸ್‌ ಕೊಡಬಹುದು. 
 

Read more Photos on
click me!

Recommended Stories