1997-2013ರ ಜೆನ್ಸಿ ಮಕ್ಕಳ ಲವ್‌ ಲೈಫ್‌ ಹೀಗಿರತ್ತಾ? ಪ್ರೇಮ ಪಾಠ ಮಾಡೋ ರವಿಚಂದ್ರನ್‌ ಕಂಗಾಲು!

Published : Feb 24, 2025, 10:30 AM ISTUpdated : Feb 24, 2025, 10:59 AM IST

ಜೀ ಕನ್ನಡದಲ್ಲಿ ʼಭರ್ಜರಿ ಬ್ಯಾಚುಲರ್ಸ್ʼ‌ ಶೋ ಪ್ರಸಾರ ಆಗುತ್ತಿದೆ. ಈ ಶೋನಲ್ಲಿ ರವಿಚಂದ್ರನ್‌, ರಚಿತಾ ರಾಮ್‌ ಅವರು ಜಡ್ಜ್‌ಗಳಾಗಿದ್ದಾರೆ. ಇಲ್ಲಿ ಗರ್ಲ್‌ಫ್ರೆಂಡ್‌ ಇರದ ಹುಡುಗರಿಗೆ ಹೇಗೆ ಹುಡುಗಿಯರನ್ನು ಪಟಾಯಿಸೋದು ಎಂದು ಹೇಳಿಕೊಡಲಾಗುತ್ತದೆಯಂತೆ. ಸುಕೃತಾ ನಾಗ್‌ ಅವರು ರಿಲೇಶನ್‌ಶಿಪ್‌ ವೈರುಧ್ಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿಯೂ jency generation ಅಲ್ಲಿರುವ ಮನಸ್ಥಿತಿಗಳ ಬಗ್ಗೆ ಮಾತನಾಡಿದ್ದಾರೆ. 1997 ರಿಂದ 2012ರವರೆಗೆ jency generation ಇದೆ.   

PREV
17
1997-2013ರ ಜೆನ್ಸಿ ಮಕ್ಕಳ ಲವ್‌ ಲೈಫ್‌ ಹೀಗಿರತ್ತಾ? ಪ್ರೇಮ ಪಾಠ ಮಾಡೋ ರವಿಚಂದ್ರನ್‌ ಕಂಗಾಲು!

ಬಾಯ್‌ ಬೆಸ್ಟಿ ( Boy Bestie ): ಹುಡುಗ ಫ್ರೆಂಡ್‌ ಆಗಿರ್ತಾನೆ, ಆದರೆ ರೊಮ್ಯಾಂಟಿಕ್ ರಿಲೇಶನ್‌ಶಿಪ್‌‌ ಇರೋದಿಲ್ಲ. ಅಂದರೆ ಹುಡುಗನಿಗೆ ಸಾಕಷ್ಟು ಹುಡುಗಿಯರು ಫ್ರೆಂಡ್‌ ಆಗಿರುತ್ತಾರೆ, ಆದರೆ ಅವರಿಗೆ ರೊಮ್ಯಾಂಟಿಕ್‌ ರಿಲೇಶನ್‌ಶಿಪ್‌ ಇರೋದೇ ಇಲ್ಲ. 
 

27

ಬಾಯ್‌ಫ್ರೆಂಡ್ ( Boyfriend- ) ರೊಮ್ಯಾಂಟಿಕ್‌ ರಿಲೇಶನ್‌ಶಿಪ್‌ ಇರುತ್ತದೆ. ಆದರೆ ಅದು ಮದುವೆವರೆಗೂ ಹೋಗುತ್ತದೆಯೇ ಇಲ್ಲವೇ ಎಂದು ಹೇಳೋಕೆ ಆಗದು. 
 

37

ಸಿಚ್ಯುವೇಶನ್‌ಶಿಪ್-‌ ( situationship ) ರೊಮ್ಯಾಂಟಿಕ್ ರಿಲೇಶನ್‌ಶಿಪ್‌ ಇರುತ್ತದೆ, ಆದರೆ‌ ಭಾವನಾತ್ಮಕವಾಗಿ ಕಮಿಟ್‌ಮೆಂಟ್‌ ಇರೋದಿಲ್ಲ. 
 

47

ಗೋಸ್ಟಿಂಗ್‌ ( Ghosting )- ಏನೂ ಹೇಳದೆ, ಅರ್ಧಕ್ಕೆ ಸಂಬಂಧವನ್ನು ಕಟ್‌ ಮಾಡೋದು. ರೊಮ್ಯಾಂಟಿಕ್‌ ರಿಲೇಶನ್‌ಶಿಪ್‌ನಲ್ಲಿ, ಕೆಲಸದ ಸ್ಥಳದಲ್ಲಿ ಈ ರೀತಿ ಆಗುವುದು. 

57

ಬ್ರೆಡ್‌ಕ್ರಮ್ಮಿಂಗ್‌‌ - ಇದಕ್ಕೆ hansel and gretelling ಎಂದು ಕೂಡ ಕರೆಯಲಾಗುವುದು. ರಿಲೇಶನ್‌ಶಿಪ್‌ನಲ್ಲಿ ಇರ್ತೀನಿ ಅಂತ ಹೇಳದೆ ನಿಮ್ಮ ಗಮನವನ್ನು ಸೆಳೆಯಲಾಗುತ್ತದೆ. ಓರ್ವ ವ್ಯಕ್ತಿಯ ನಿಜವಾದ ಸಂಬಂಧಕ್ಕೆ ಸಂಪೂರ್ಣವಾಗಿ ಬದ್ಧರಾಗದೆ, ಅವರನ್ನು ಹಿಡಿದಿಟ್ಟುಕೊಳ್ಳಲು ಸಾಕಷ್ಟು ಗಮನ ಕೊಡುವುದು. 

67

ಆರ್ಬೇಟಿಂಗ್ ( orbiting relationship ). ಇಲ್ಲಿ ವ್ಯಕ್ತಿ ಇನ್ನೋರ್ವ ವ್ಯಕ್ತಿಯ ಜೊತೆಗೆ ನೇರವಾಗಿ ಸಂವಹನ ಕಟ್‌ ಮಾಡುತ್ತಾರೆ, ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಆ ವ್ಯಕ್ತಿಯ ಪೋಸ್ಟ್‌ಗೆ ಲೈಕ್‌ ಮಾಡುತ್ತ, ಕಾಮೆಂಟ್‌ ಮಾಡುತ್ತ ಆಕ್ಟೀವ್‌ ಆಗಿರುತ್ತಾನೆ. 
 

77

ಗ್ಯಾಸ್‌ಲೈಟಿಂಗ್ ( gaslighting in a relationship ) ಒಬ್ಬ ಸಂಗಾತಿಯು ತನ್ನ ಸಂಗಾತಿಯ ವಾಸ್ತವತೆಯನ್ನು, ಅವರ ಸುತ್ತಲಿನ ಪರಿಸ್ಥಿತಿಯನ್ನು ಅಥವಾ ಅವರ ಭಾವನೆಗಳು ಮತ್ತು ಅಗತ್ಯಗಳನ್ನು ನಿರಾಕರಿಸೋದು, ಈ ಮೂಲಕ ಅವರನ್ನು ದುರ್ಬಲಗೊಳಿಸೋದು. 

 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories