ಕಣ್ಣು ಕಣ್ಣು ಕಲೆತಾಯ್ತು, ಅರಳಿತು ಪ್ರೀತಿ ಹೂ; ಶುರುವಾಯ್ತು ಆದಿ-ಭಾಗ್ಯ ಪ್ರೇಮ ಕಥನ

Published : Jul 24, 2025, 11:55 AM IST

Kannada Serial BhagyaLakshmi: ತಂಗಿ ಪೂಜಾಳ ಮದುವೆಯ ನಂತರ ಭಾಗ್ಯಾಳ ಬದುಕು ಹೊಸ ತಿರುವು ಪಡೆಯುತ್ತಿದೆ. ಆದಿ ಕಾಮತ್ ಜೊತೆಗಿನ ಆಕಸ್ಮಿಕ ಭೇಟಿಯೊಂದು ಹೊಸ ಪ್ರೇಮಕಥೆಗೆ ನಾಂದಿ ಹಾಡುವ ಸೂಚನೆ ನೀಡುತ್ತಿದೆ. ತಾಂಡವ್‌ಗೆ ಇದರಿಂದ ಹೊಟ್ಟೆ ಉರಿಯಾಗುವುದು ಖಚಿತ.

PREV
16

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಆಗಿರೋ ಭಾಗ್ಯಲಕ್ಷ್ಮೀ ಹೊಸ ತಿರುವು ಪಡೆದುಕೊಂಡಿದೆ. ತಂಗಿ ಪೂಜಾ ಮದುವೆ ಮಾಡಿ ಗೆದ್ದಿರುವ ಭಾಗ್ಯಾ ಜೀವನ ಹೊಸ ಆಯಾಮವನ್ನು ಪಡೆದುಕೊಳ್ಳಲಿದೆ. ಹೊಸ ಬದುಕಿನ ಆರಂಭದಲ್ಲಿ ಭಾಗ್ಯಾ ಬಂದು ನಿಂತಿದ್ದಾಳೆ.

26

ಆರಂಭದಲ್ಲಿ ಪೂಜಾ ಮದುವೆಗೆ ಆದಿ ಕಾಮತ್ ತೀವ್ರ ವಿರೋಧ ವ್ಯಕ್ತಪಡಿಸಿದ್ದನು. ಮೊದಲಿನಿಂದಲೂ ಭಾಗ್ಯಾ ಮತ್ತು ಕುಸುಮಾ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಆದಿ ಹೊಂದಿದ್ದನು. ಭಾಗ್ಯಾಳ ಒಳ್ಳೆತನ ಅರಿತ ಆದಿ ಸೋದರ ಕಿಶನ್ ಜೊತೆಯಲ್ಲಿ ಪೂಜಾ ಮದುವೆ ಮಾಡಿಸಿ ಮನೆ ತುಂಬಿಸಿಕೊಂಡಿದ್ದಾನೆ.

36

ಇನ್ನು ಭಾಗ್ಯಾಳಿಂದ ದೂರವಾಗಿರುವ ದುಷ್ಟ ತಾಂಡವ್ ಪೂಜಾ ಮದುವೆಯಲ್ಲಿಯೂ ತನ್ನ ಕಂತ್ರಿ ಬುದ್ಧಿ ತೋರಿಸಲು ಬಂದಿದ್ದನು. ಮಗ ಬಂದ ಕೂಡಲೇ ರಣಚಂಡಿಯಾದ ಕುಸುಮಾ, ಸಖತ್ ಕ್ಲಾಸ್ ತೆಗೆದುಕೊಂಡು, ಕೋಲೇಟು ನೀಡಿ ಕಲ್ಯಾಣ ಮಂಟಪದಿಂದ ಹೊರಗೆ ತಳ್ಳಿದ್ದಳು.

46

ಇತ್ತ ವ್ಯವಹಾರದಲ್ಲಿ ಆದಿ ಕಾಮತ್ ಮತ್ತು ತಾಂಡವ್ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಒಬ್ಬರಿಗೊಬ್ಬರು ಬ್ರದರ್ ಅಂತ ಕರೆಯುವಷ್ಟು ಆದಿ-ತಾಂಡವ್ ಆಪ್ತರಾಗಿದ್ದಾರೆ. ಈಗ ತಾಂಡವ್ ಮಾಜಿ ಪತ್ನಿಯನ್ನೇ ಆದಿ ಮದುವೆಯಾದ್ರೆ ಹೇಗಿರುತ್ತೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಉಂಟಾಗಿದೆ. ಇಂದು ಬಿಡುಗಡೆಯಾದ ಸ್ಮಾಲ್ ಪ್ರೋಮೋದಲ್ಲಿ ಆದಿ ಮತ್ತು ಭಾಗ್ಯ ಪ್ರೇಮಾಂಕುರದ ಮೊದಲ ಹಂತವನ್ನು ತೋರಿಸಲಾಗಿದೆ.

56

ಪ್ರೋಮೋದಲ್ಲಿ ಏನಿದೆ?

ಭ್ಯಾಗ್ಯಾಳ ಕಾರ್‌ನ ಹಿಂಭಾಗದ ಚಕ್ರ ಪಂಚರ್ ಆಗಿರುತ್ತದೆ. ಸ್ವಾವಲಂಭಿ ಭಾಗ್ಯಾ ಯಾರ ಸಹಾಯವಿಲ್ಲದೇ ಚಕ್ರ ಬದಲಿಸುತ್ತಾಳೆ. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಆದಿ, ಕಾರ್ ನಿಲ್ಲಿಸಿ ಭಾಗ್ಯಾಗೆ ಸಹಾಯ ಮಾಡುತ್ತಾನೆ. ಕೈ ತೊಳೆದುಕೊಳ್ಳಲು ಭಾಗ್ಯಾ ನೀರು ನೀಡಲು ಬಂದಾಗ, ಮೊದಲು ನೀವು ಕೈಗಳನ್ನು ಸ್ವಚ್ಛಗೊಳಿಸಿ ಎಂದು ನೀರು ಹಾಕುತ್ತಾನೆ. ಈ ವೇಳೆ ಇಬ್ಬರ ಮುಖದಲ್ಲಿನ ಮಂದಹಾಸ ಇದು ಪಕ್ಕಾ ಲವ್ ಆಗೋ ಸ್ಮೈಲ್ ಎಂದು ಕಮೆಂಟ್ ಮಾಡಿದ್ದಾರೆ.

66

ತಾಂಡವ್‌ಗೆ ಹೊಟ್ಟೆ ಉರಿ

ಆದಿ ಮತ್ತು ಭಾಗ್ಯಾ ಒಂದಾದ್ರೆ ತಾಂಡವ್‌ಗೆ ಹೊಟ್ಟೆ ಉರಿ ಆಗೋದು ಗ್ಯಾರಂಟಿ ಎಂದು ವೀಕ್ಷಕರು ಪ್ರೋಮೋಗೆ ಕಮೆಂಟ್ ಮಾಡುತ್ತಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾ ಯಾವಾಗಲೂ ಭಾಗ್ಯಾಗೆ ಕಷ್ಟಕೊಡಲು ಪ್ರಯತ್ನಿಸುತ್ತಿರುತ್ತಾರೆ. ಇಷ್ಟು ದಿನ ಭಾಗ್ತಾಗೆ ಆಸರೆಯಾಗಿ ಕುಸುಮಾ ಅತ್ತೆ ನಿಲ್ಲುತ್ತಿದ್ದರು. ಇನ್ಮುಂದೆ ಭಾಗ್ಯಾಗೆ ಆದಿ ಸಾಥ್ ನೀಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

Read more Photos on
click me!

Recommended Stories