ಭಾಗ್ಯಲಕ್ಷ್ಮೀ ಸೀರಿಯಲ್ (Bhagyalakshmi Serial) ಸದ್ಯ ಅತ್ತೆ ಸೊಸೆಯ ಭಾಂಧವ್ಯದಿಂದಾಗಿ ಸೀರಿಯಲ್ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ, ಜೊತೆಗೆ ಟಿಆರ್ ಪಿಯನ್ನು ಸಹ ಹೆಚ್ಚಿಸಿಕೊಂಡಿದೆ. ಯಾಕಂದ್ರೆ ಅತ್ತೆಯಾಗಿ ಸೊಸೆಗೆ ತಾನೇನು ಮಾಡಬೇಕು ಅನ್ನೋದನ್ನ ಸಮಾಜಕ್ಕೆ ಈ ಸೀರಿಯಲ್ ಮೂಲಕ ತಿಳಿಸಲಾಗಿದೆ.
ಭಾಗ್ಯಲಕ್ಷ್ಮೀ ಸೀರಿಯಲ್ ನ ಹೊಸ ಪ್ರೋಮೋ (promo) ರೀಲೀಸ್ ಆಗಿದ್ದು, ಇದರಲ್ಲಿ ಅತ್ತೆಯ ಪ್ರೋತ್ಸಾಹದಿಂದ ಸೊಸೆಯ ಮಹಾಪಯಣ ಆರಂಭ ಎಂದು ಬರೆದುಕೊಂಡಿದ್ದು, ಅದರಲ್ಲಿ ಸೊಸೆ ಭಾಗ್ಯಾಳನ್ನು ಶಾಲೆಗೆ ಬಿಡಲು ಬಂದ ಕುಸುಮತ್ತೆಯ ಮಾತುಕತೆಯನ್ನು ತೋರಿಸಲಾಗಿದೆ.
ಮದುವೆ ಆದ ಮೇಲೆ ಗಂಡ, ಮನೆ, ಮಕ್ಕಳು, ಸಂಸಾರ ಇದೇ ಅಲ್ವಾ ಜೀವನ ಎಂದು ಭಾಗ್ಯ ಅತ್ತೆಯನ್ನು ಕೇಳುತ್ತಾಳೆ. ಅದಕ್ಕೆ ಅತ್ತೆ ಮಾಂಗಲ್ಯ ಅದು, ಮೂಗುದಾರ ಅಲ್ಲ ಎಂದು ಹೇಳುವ ಮೂಲಕ ಅತ್ತೆ, ಸೊಸೆ ಹೇಗಿರಬೇಕು ಅನ್ನೋದನ್ನು ತಿಳಿಸಿದ್ದಾರೆ.
ಅಡುಗೆ ಮನೆಬಿಟ್ಟು ಶಾಲೆಗೆ ಹೋದ್ರೆ, ಜನ ಆಡಿಕೊಳ್ತಾರೆ ಎಂದು ಸೊಸೆ ಅಂದಾಗ, ಅತ್ತೆ ಆಡಿಕೊಳ್ಳುವವರ ಬಾಯಿ ಮುಚ್ಚಿಸೋದಕ್ಕೆ ಈ ನಿರ್ಧಾರ ತೆಗೆದುಕೊಂಡಿರೋದು, ನನ್ನ ಸೊಸೆ ಕೈಯಲ್ಲಿ ಎಲ್ಲಾನೂ ಆಗುತ್ತೆ ಎಂದು ಸೊಸೆಯನ್ನು ಹುರಿದುಂಬಿಸಿ ಸ್ಕೂಲ್ ಗೆ ಕಳುಹಿಸುತ್ತಾಳೆ ಅತ್ತೆ.
ಅಡುಗೆ ಮನೆಯಿಂದ ಕ್ಲಾಸ್ ರೂಮ್ ಗೆ ಅನ್ನೋ ಸಬ್ ಟೈಟಲ್ ಜೊತೆ ಹೊಸ ಟೈಟಲ್ ಕಾರ್ಡ್ ಕೂಡ ಬಿಡುಗಡೆ ಮಾಡಿದ್ದಾರೆ ಕಲರ್ಸ್ ಕನ್ನಡ (colors Kannada). ಈ ಪ್ರೋಮೋ ನೋಡಿ, ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು, ಕೆಲವರು ತಮ್ಮ ಜೀವನದಲ್ಲಿ ಆದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ, ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ. ಜನ ಏನು ಹೇಳಿದ್ದಾರೆ ನೋಡೋಣ.
ಇಂಥ ಅತ್ತೆ ಸಿಗೋದು ಪುಣ್ಯ ಮಾಡಿರಬೇಕು, ಎಲ್ಲಾ ಅತ್ತೆಯಂದಿರು ಸೊಸೆನ ಮಗಳ ತರ ನೋಡಿದ್ರೆ ಆ ಸಂಸಾರ ತುಂಬಾ ತುಂಬಾ ಚೆನ್ನಾಗಿರುತ್ತೆ , ಆದ್ರೆ ಈ ಜಗತ್ತಲ್ಲಿ 90% ಅತ್ತೆಯರು ಸೊಸೆನ ಮಗಳತರ ನೋಡಲ್ಲ ತನ್ನ ಮನೆಯ ಕೆಲಸದೋಳ್ ತರ ನೋಡ್ತಾರೆ. ಇಂಥಹ ಸ್ಟೋರಿ ಟಿವಿ ನೋಡೋಕೆ ಚೆನ್ನಾಗಿದೆ, ರಿಯಲ್ ಲೈಫಲ್ಲಿ ಯಾರು ಮಾಡಲ್ಲ. ಇದು ನನ್ನ ನಿಜ ಜೀವನದ ಅನುಭವ ಎಂದು ಒಬ್ಬರು ತಿಳಿಸಿದ್ದಾರೆ.
ಇನ್ನೋಬ್ಬ ಅಭಿಮಾನಿ ನನ್ಗೂ ಇಂತ ಅತ್ತೆ ಸಿಕ್ಕಿದ್ರೆ ಬಹುಶಃ ನಾನೂ ಯಾವ್ದಾದ್ರೂ ಸರ್ಕಾರಿ ಕೆಲಸ ಮಾಡುತ್ತಿದ್ದೆ.... ಆದರೆ ಮದ್ವೆ ಆಗಿದ್ದೆ ತಡ ಕಾಲೇಜು ಬಿಡಿಸಿ ಮನೆ ಕೆಲ್ಸಕ್ಕೆ ಹಚ್ಚಿ ಬಿಟ್ರು ಇಷ್ಟೇ ಅಲ್ವ ಹೆಣ್ಣು ಮಕ್ಕಳ ಜೀವನ ಎಂದು ನೋವು ತೋಡಿಕೊಂಡಿದ್ದಾರೆ.
ಕುಸುಮ ಅತ್ತೆಯ ಪ್ರೋತ್ಸಾಹ ದೊಂದಿಗೆ ನಮ್ಮ ಭಾಗ್ಯಕ್ಕನ ಮಹಾ ಪಯಣ ಶುರುವಾಗುತ್ತಿದೆ ಒಳ್ಳೆಯದಾಗಲಿ. ಅತ್ತೆ ಸೊಸೆ ಕಿತ್ತಾಡುವ ಈ ಕಾಲದಲ್ಲಿ ಅತ್ತೆ ಸೊಸೆ ಬಾಂಧವ್ಯ ಎಂತದ್ದು ಅನ್ನೋದನ್ನ ಜೀವನದ ಮೌಲ್ಯಗಳನ್ನು ತಿಳಿಸಿಕೊಡುತ್ತಿರುವ ಧಾರವಾಹಿ ಭಾಗ್ಯಲಕ್ಷ್ಮಿ. ಒಂದು ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲ ಸಾಧನೆ ಮಾಡಬಹುದು ಇದನ್ನೆಲ್ಲಾ ತುಂಬಾ ಚೆನ್ನಾಗಿ ತಿಳಿಸಿ ಕೊಡ್ತಾ ಇದ್ದಾರೆ ಹೀಗೆ ಮುಂದುವರೆಯಲಿ ಎಂದು ಮತ್ತೊಬ್ಬರು ಶುಭ ಹಾರೈಸಿದ್ದಾರೆ.