Bhagyalakshmi Serial: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಭಾಗ್ಯಲಕ್ಷ್ಮಿ’ ಇದೀಗ 1000 ಸಂಚಿಕೆ ದಾಟಿ ಮುನ್ನುಗ್ಗುತ್ತಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ 2000 ಸಂಚಿಕೆ ಪೂರೈಸಿದ್ದು, ಆ ದಾಖಲೆಯನ್ನು ಮುರಿಯುತ್ತಾ ಅನ್ನೋದನ್ನು ಕಾದು ನೋಡಬೇಕು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿ. ಈ ಧಾರಾವಾಹಿ ಆರಂಭವಾದಾಗಿನಿಂದ ಇಲ್ಲಿವರೆಗೆ ಹಲವಾರು ಟ್ವಿಸ್ಟ್ ಟರ್ನ್ ಪಡೆದುಕೊಂಡು ಜನರ ನಿರೀಕ್ಷೆಯನ್ನು ಹೆಚ್ಚಿಸುತ್ತಾ ಸಾಗುತ್ತಿದೆ. ವೀಕ್ಷಕರು ಕೂಡ ಸೀರಿಯಲ್ ನಲ್ಲಿ ಮುಂದೇನಾಗುತ್ತೆ ಎಂದು ಕಾಯುತ್ತಿದ್ದಾರೆ.
26
1000 ಸಂಚಿಕೆ ಪೂರೈಸಿದ ಭಾಗ್ಯಲಕ್ಷ್ಮೀ
ಇದೀಗ ಭಾಗ್ಯಲಕ್ಷ್ಮೀ ಸೀರಿಯಲ್ ತಂಡ 1000 ಸಂಚಿಕೆಗಳನ್ನು ಪೂರೈಸಿದ್ದು, ಭಾಗ್ಯಾ ಬದುಕಿನ ಹೋರಾಟಕ್ಕೆ 1000 ಸಂಚಿಕೆಗಳು ಪೂರ್ಣಗೊಂಡಿವೆ. ಈ ಕುರಿತು ಈಗಾಗಲೇ ಕಲರ್ಸ್ ಕನ್ನಡ ಕೂಡ ವೀಕ್ಷಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಒಬ್ಬ ಹೆಣ್ಣು ಮಗಳು ಯಾವ ರೀತಿ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು ಅನ್ನೋದನ್ನು ಭಾಗ್ಯ ತೋರಿಸಿಕೊಟ್ಟಿದ್ದಾಳೆ ಎಂದು ಅಭಿಮಾನಿಗಳು ಖುಷಿಯಿಂದ ಹೇಳಿಕೊಂಡಿದ್ದಾರೆ.
36
ಸೀರಿಯಲ್ ತಂಡ ಹೇಳಿದ್ದೇನು?
ಭಾಗ್ಯ ಕೇವಲ ಧಾರಾವಾಹಿಯೊಂದರ ಪಾತ್ರದ ಕಥೆಯಲ್ಲ. ನಮ್ಮ ನಡುವಿನ ಅದೆಷ್ಟೋ ಹೆಣ್ಣು ಮಕ್ಕಳ ಕಥೆ. ನೀವೆಲ್ಲರೂ ಈ ಕತೆಯನ್ನು ಕಾಳಜಿಯಿಂದ, ವಿಶ್ವಾಸದಿಂದ ನಿಮ್ಮದಾಗಿಸಿಕೊಂಡಿದ್ದೀರಿ. ಪ್ರೀತಿಯಿಂದ ಮೈದಡವಿ ಇಲ್ಲಿಯವರೆಗೂ ಕರೆತಂದಿದ್ದೀರಿ. ತಿರುವುಗಳು ಎದುರಾದಾಗ ಹೊರಳಿಕೊಳ್ಳದೆ ನಮ್ಮೊಡನೆ ನಡೆದಿದ್ದೀರಿ, ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದೀರಿ. ನಿಮ್ಮಿಂದಾಗಿಯೇ ನಿಮ್ಮ ನೆಚ್ಚಿನ ಭಾಗ್ಯಲಕ್ಷ್ಮೀ ಸಾವಿರ ಸಂಚಿಕೆಗಳನ್ನು ಪೂರೈಸಲು ಸಾಧ್ಯವಾಗಿದೆ. ಸಾಗಬೇಕಾದ ದಾರಿ ಇನ್ನೂ ಇದೆ. ನಿಮ್ಮ ಹಾರೈಕೆ, ನಿಮ್ಮ ಬೆಂಬಲ ಸದಾ ನಮ್ಮ ಜೊತೆಗಿರಲಿ. ಭಾಗ್ಯಲಕ್ಷ್ಮೀ ತಂಡದ ವತಿಯಿಂದ ಪ್ರೀತಿಯ ಧನ್ಯವಾದಗಳು ಎಂದಿದ್ದಾರೆ.
ಇದು ಭಾಗ್ಯಳ ಜೀವನದ ಕಥೆಗಳು. ಜೊತೆಗೆ ನಿಂತ ಅತ್ತೆ-ಮಾವ, ತ್ಯಾಗದ ಬೆಲೆ ಅರಿಯದ ಗಂಡ, ತಂಗಿಯ ಮದುವೆ, ಮಕ್ಕಳ ಜವಾಬ್ಧಾರಿ, ಆದಿಯ ಬಿಡಿಸಲಾರದ ಸ್ನೇಹಾ, ಕೈತುತ್ತಿನ ಚ್ಹಮತ್ಕಾರ, ಒಟ್ಟಲ್ಲಿ ಭಾಗ್ಯಾಳದ್ದು, ಸವಾಲಿನ ಹಾದಿಯಲ್ಲಿ ಹಿಂಜರಿಯದ ಪಯಣವಾಗಿದೆ. ಈ ಹೋರಾಟದ ಹಾದಿ ಈಗ ಸಾವಿರ ಸಂಚಿಕೆ ಪೂರೈಸಿರೋದೆ ಸಂಭ್ರಮವಾಗಿದೆ.
56
ಯಾರೆಲ್ಲ ನಟಿಸುತ್ತಿದ್ದಾರೆ ಧಾರಾವಾಹಿಯಲ್ಲಿ?
ಸುಷ್ಮಾ ಕೆ ರಾವ್ ಭಾಗ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಲ್ಲದೇ ಪದ್ಮಜಾ ರಾವ್, ಸುದರ್ಶನ್ ರಂಗಪ್ರಸಾದ್, ಮುಖ್ಯಮಂತ್ರಿ ಚಂದ್ರು, ಕಾವ್ಯಾ ಗೌಡ, ಅಮೃತಾ ಗೌಡ, ನಿಹಾರ್ ಗೌಡ, ಸುನೀತಾ ಶೆಟ್ಟಿ, ಆಶಾ ಅಯ್ಯನಾರ್ ಮೊದಲಾದವರು ನಟಿಸುತ್ತಿದ್ದಾರೆ.
66
ಜೈಮಾತಾ ಕಂಬೈನ್ಸ್ ಸೀರಿಯಲ್
ಜೈಮಾತಾ ಕಂಬೈನ್ಸ್ ಅದ್ಭುತ ಸೀರಿಯಲ್ ಗಳನ್ನು ಮಾಡುವಲ್ಲಿ ಎತ್ತಿದ ಕೈ. ಈ ತಂಡ ಕನ್ನಡ ಕಿರುತೆರೆಗೆ ಒಂದಕ್ಕಿಂತ ಒಂದು ಜನಪ್ರಿಯ ಧಾರಾವಾಹಿಗಳನ್ನು ನೀಡಿದೆ. ಅದರಲ್ಲೂ ನಾಲ್ಕು ಸೀರಿಯಲ್ ಗಳು ಸಾವಿರ ಸಂಚಿಕೆಗಳನ್ನು ಪೂರೈಸಿದೆ. ಕುಲವಧು ಮತ್ತು ನಮ್ಮನೆಯುವರಾಣಿ ಸಾವಿರಸಂಚಿಕೆಗಳು ದಾಟಿದ್ದರೆ, ಲಕ್ಷ್ಮೀ ಬಾರಮ್ಮ ಮೊದಲ ಧಾರಾವಾಹಿ 2000 ಸಂಚಿಕೆ ಪೂರೈಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.