ಬಿಗ್ ಬಾಸ್ ಕನ್ನಡ 11: ಗೆಲ್ಲೋದು ಹನುಮಂತನೋ? ತ್ರಿವಿಕ್ರಮನೋ?: ಸಮೀಕ್ಷೆಯಲ್ಲೇನಿದೆ?

First Published | Dec 23, 2024, 5:39 PM IST

ಬಿಗ್‌ಬಾಸ್‌ ಕನ್ನಡ ಸೀಸನ್ 11 ತುಂಬಾ ಅದ್ಬುತವಾಗಿ ಮೂಡಿ ಬರುತ್ತಿದೆ. ಗ್ರ್ಯಾಂಡ್ ಫಿನಾಲೆಗೆ ದಿನ ಶುರುವಾಗುತ್ತಿದ್ದು ಯಾರು ಫೈನಲ್ ತಲುಪುತ್ತಾರೆನ್ನುವ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿ ಹೆಚ್ಚಾಗಿದೆ. 

ಬಿಗ್‌ಬಾಸ್‌ ಕನ್ನಡ ಸೀಸನ್ 11 ತುಂಬಾ ಅದ್ಬುತವಾಗಿ ಮೂಡಿ ಬರುತ್ತಿದೆ. ಈ ಬಾರಿಯ ಟಿಆರ್‌ಪಿ ಕೂಡ ಸಿಕ್ಕಾಪಟ್ಟೆ ಚೆನ್ನಾಗಿದೆ. ದಿನ ಕಳೆದಂತೆ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಕೂಡ ಹೆಚ್ಚಾಗಿದೆ. ಗ್ರ್ಯಾಂಡ್ ಫಿನಾಲೆಗೆ ದಿನ ಶುರುವಾಗುತ್ತಿದ್ದು ಯಾರು ಫೈನಲ್ ತಲುಪುತ್ತಾರೆನ್ನುವ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿ ಹೆಚ್ಚಾಗಿದೆ. 

ಬಿಗ್‌ಬಾಸ್‌ ಕನ್ನಡ ಸೀಸನ್ 11 ಗೆಲ್ಲೋದು ಯಾರು ಎಂದು ಸುವರ್ಣ ನ್ಯೂಸ್‌.ಕಾಮ್ 'ಬಿಗ್‌ಬಾಸ್ ಪೋಲ್ಸ್' ಎಂಬ ವೋಟಿಂಗ್ಸ್ ನಡೆಸಲಾಗಿತ್ತು. ಬಿಗ್‌ಬಾಸ್‌ ಫಿನಾಲೆಗೆ 4 ವಾರ, ಯಾರಾಗ್ತಾರೆ ವಿನ್ನರ್‌? ಎಂಬ ಪೋಲ್ಸ್‌ ಪ್ರಶ್ನೆಯಲ್ಲಿ ತ್ರಿವಿಕ್ರಮ್‌, ಮಂಜು, ಹನುಮಂತ, ಭವ್ಯಾ, ಗೌತಮಿ ಹೆಸರನ್ನು ಸೂಚಿಸಲಾಗಿತ್ತು.

Tap to resize

ಈ ಪೋಲ್ಸ್ ಪ್ರಶ್ನೆಗೆ ಬಹುತೇಕ ಮಂದಿ ವೋಟ್ ಮಾಡಿದ್ದರು. ತ್ರಿವಿಕ್ರಮ್‌ಗೆ 18.4% ವೋಟ್, ಉಗ್ರಂ ಮಂಜುಗೆ 12.2% ವೋಟ್, ಹನುಮಂತ ಲಮಾಣಿಗೆ 58.7% ವೋಟ್, ಭವ್ಯಾಗೆ 6.0% ವೋಟ್, ಗೌತಮಿಗೆ 4.7% ಮಾತ್ರ ವೋಟಿಂಗ್ಸ್ ಬಂದಿತ್ತು.

ಪೋಲ್ಸ್‌ಗೆ ಬಂದ ವೋಟ್‌ನಲ್ಲಿ ತ್ರಿವಿಕ್ರಮ್‌ಗೆ 18.4%  ಹಾಗೂ ಹನುಮಂತ ಲಮಾಣಿಗೆ 58.7%  ಸಿಕ್ಕಿದ್ದು, ಹನುಮಂತನೇ ಬಹುತೇಕ ಬಿಗ್ ಬಾಸ್ ಕನ್ನಡ 11ರ ವಿನ್ನರ್ ಆಗಬಹುದು ಎಂಬುದು ಸುವರ್ಣ ನ್ಯೂಸ್‌.ಕಾಮ್ 'ಬಿಗ್‌ಬಾಸ್ ಪೋಲ್ಸ್'ನಲ್ಲಿ ಇಂಥ ಪ್ರತಿಕ್ರಿಯೆಗಳು ಲಭ್ಯವಾಗುತ್ತಿವೆ.
 

ಗಾಯಕ ಹನುಮಂತ ಲಮಾಣಿ, ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ಗ್ರಾಮದ ಹನುಮಂತ ಮೂಲತಃ ಕುರಿಗಾಹಿ. ತನ್ನ ಧ್ವನಿಯಿಂದಲೇ ಫೇಮಸ್ ಆದವರು. ಜೀ ಕನ್ನಡ ವಾಹಿನಿಯ 'ಸರಿಗಮಪ' ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡವರು. ಜೊತೆಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌' ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿ ಜನಮೆಚ್ಚುಗೆ ಪಡೆದಿದ್ದರು.

ಹನುಮಂತ ಲಮಾಣಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಗೆ ಲುಂಗಿ ಉಟ್ಟು ಪ್ರವೇಶಿಸಿದ್ದು, ಹೋಗುತ್ತಿದ್ದಂತೆ ವಾರದ ಕ್ಯಾಪ್ಟನ್ ಆಗಿಯೂ ಆಯ್ಕೆ ಆಗಿದ್ದರು. ಜೊತೆಗೆ ತನ್ನ ಹಾಸ್ಯದ ದಾಟಿಯಲ್ಲಿ ಮನೆಮಂದಿಯ ಜೊತೆ ತಮ್ಮ ಪರಿಚಯ ಮಾಡಿಕೊಂಡಿದ್ದರು. 

ನನ್ನ ಹೆಸರು ಹನುಮಂತ, ನನ್ನ ಊರು ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರು ಭಟ್ನಿ ಎಂದು ತಮ್ಮನ್ನು ಪರಿಚಯ ಮಾಡಿಕೊಂಡಿದ್ದರು. ನಾನು ಹಾಡು ಹಾಡ್ತೀನಿ. ನಿಮ್ಮನ್ನು ನೋಡಿ ಬೆಳೆದಿದ್ದೇನೆ. ಮಾತಾಡುವಾಗ ತಪ್ಪಾದ್ರೆ. ಹೊಟ್ಟೆಗೆ ಹಾಕಿಕೊಳ್ಳಿ. ಹೊಡೆಯುವಂತಿದ್ರೆ ಒಂದೆರಡೆಟು ಹೊಡೆದು ಬಿಡಿ ಎಂದು ಹನುಮಂತ ಹೇಳಿದ್ದರು.

ಇಲ್ಲಿ ಯಾರು ಹೊಡೆಯುಂತಿಲ್ಲ. ಹೊಡೆದ್ರೆ ಮನೆಗೆ ಹೋಗ್ತೀವಿ ಎಂದು ಮನೆ ಮಂದಿಗೆ ತಮಾಷೆ ಮಾಡಿದ್ರು. ನಮ್ದು ಉತ್ತರ ಕನ್ನಡ ಭಾಷೆ, ಹೊಗಳೋದಕ್ಕೂ ಬೈಯ್ತೀವಿ ಅದಕ್ಕೆ ಯಾರು ಮನಸ್ಸಿಗೆ ತಗೋಬೇಡಿ ಎಂದು  ಹನುಮಂತ ತಮ್ಮದೇ ಹಾಸ್ಯ ಶೈಲಿಯಲ್ಲಿ ತಿಳಿಸಿದ್ದರು.

ಕುರಿಗಾಯಿ ಆಗಿದ್ದ ಹನುಮಂತ ಲಮಾಣಿ ತನ್ನ ಗಾಯನದ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನಗೆದಿದ್ದರು. 'ಸರಿಗಮಪ ಸೀಸನ್ 15'ರ ಮೊದಲ ರನ್ನರ್ ಅಪ್‌ ಆಗಿದ್ದರು. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ ಹನುಮಂತ ಲಮಾಣಿ ತನ್ನ ಗಾಯನದಿಂದ ಮೋಡಿ ಮಾಡಿದ್ದರು. 

ಯಾವುದೇ ಸಂಗೀತ ತರಬೇತಿ ಇಲ್ಲದೇ ತನ್ನ ಗಾಯನದಿಂದ ಹನುಮಂತ ಗಮನ ಸೆಳೆದಿದ್ದರು. 'ಸರಿಗಮಪ ಸೀಸನ್ 15'ಕ್ಕೆ ಆಯ್ಕೆಯಾದ ಮೆಂಟರ್‌ಗಳ ಮಾರ್ಗದರ್ಶನದಿಂದ ಹನುಮಂತ ಲಮಾಣಿ ಗಾಯನದಲ್ಲಿ ಮತ್ತಷ್ಟು ಪಕ್ವತೆ ಬಂದಿತ್ತು.'ಸರಿಗಮಪ ಸೀಸನ್ 15' ಬಳಿಕ ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಸೆಮಿಫೈನಲ್‌ವರೆಗೂ ಹನುಮಂತ ಹೋಗಿ ವೀಕ್ಷಕರನ್ನು ರಂಜಿಸಿದ್ದರು. 

Latest Videos

click me!