ನಟಿ ತ್ರಿಶಾ, ಅನುಪಮಾರಂತೆ ಎದೆ ಮೇಲೆ ಟ್ಯಾಟೂ ಹಾಕಿಸಿ ಅದೃಷ್ಟ ಪರೀಕ್ಷೆಗಿಳಿದ ಜ್ಯೋತಿ ಪೂರ್ವಜ್!

First Published | Feb 15, 2024, 8:18 PM IST

ದೇಶದಲ್ಲಿ ಅತ್ಯಂತ ಬೇಡಿಕೆಯ ನಟಿಯರಾಗಿರುವ ನಟಿ ತ್ರಿಶಾ ಹಾಗೂ ಅನುಪಮಾ ಪರಮೇಶ್ವರನ್ ಅವರು ಟ್ಯಾಟೋ ಹಾಕಿಸಿಕೊಂಡ ಜಾಗದಲ್ಲಿಯೇ ಧಾರಾವಾಹಿ ನಟಿ ಜ್ಯೋತಿ ರೈ ಕೂಡ ಟ್ಯಾಟೋ ಹಾಕಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
 

ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳಲ್ಲಿ ಮಿಂಚಿರುವ ನಟಿ ಜ್ಯೋತಿ ರೈ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತಮ್ಮ ಹಾಟ್‌ ಫೋಟೋ ಹಂಚಿಕೊಂಡು ಅಭಿಮಾನಿಗಳ ಫೇವರೀಟ್ ಆಗಿದ್ದಾರೆ.
 

ಜ್ಯೋತಿ ರೈ ಅವರು ಗಂಡ, ಮಗುವಿನೊಂದಿಗೆ ಸಂತದದಿಂದ ಇರುವಾಗ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಜ್ಯೋತಿ ಗಂಡನಿಂದ ದೂರವಾಗಿ ಒಬ್ಬಂಟಿತನವನ್ನು ಅನುಭವಿಸಿ ಹೊರಗೆ ಬಂದಿದ್ದಾರೆ.
 

Tap to resize

ಇನ್ನು ಕಿರಿತೆರೆ, ಹಿರಿತೆರೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಈಗ ಜ್ಯೋತಿ ರೈ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅದೇನೆಂದರೆ ಯಶಸ್ವಿ ನಟಿಯರ ಕೆಲವು ಅದೃಷ್ಟಗಳನ್ನು ಪಡೆಯಲು ಮುಂದಾಗಿದ್ದಾರೆ.
 

ಅಂದರೆ, ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಾ ದಶಕಗಳ ಕಾಲ ಬೇಡಿಕೆ ಉಳಿಸಿಕೊಂಡು ಬಂದಿರುವ ನಟಿ ತ್ರಿಶಾ ಕೃಷ್ಣನ್ ಹಾಗೂ ಅನುಪಮಾ ಪರಮೇಶ್ವರನ್ ಅವರ ಹಾದಿಯಲ್ಲಿ ಸಾಗಲು ಮುಂದಾಗಿದ್ದಾರೆ.
 

ನಟಿಯರಾದ ತ್ರಿಶಾ ಕೃಷ್ಣನ್ ಹಾಗೂ ಅನುಪಮಾ ಪರಮೇಶ್ವರನ್ ಅವರು ಇಬ್ಬರೂ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅವರಿಗೆ ಟ್ಯಾಟೂನಿಂದಲೇ ಅದೃಷ್ಟ ಖುಲಾಯಿಸಿದ್ದು, ತಾನೂ ಒಂದು ಕೈ ನೋಡೋಣ ಎಂದು ಜ್ಯೋತಿ ರೈ ಕೂಡ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
 

ಜ್ಯೋತಿ ರೈ ಅವರು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವಾಗ ತೀವ್ರ ನೋವನ್ನು ಅನುಭವಿಸಿದ್ದಾರೆ. ಜೊತೆಗೆ, ಅವರು ಟ್ಯಾಟೂ ಹಾಕಿಸಿಕೊಳ್ಳುವಾಗ ನೋವು ಅನುಭವಿಸಿದ್ದನ್ನು ಸಾಮಾಜಿಕ ಜಾಲತಾಣಗಳಿಗೂ ಹಂಚಿಕೊಂಡಿದ್ದಾರೆ.
 

ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ಪ್ರಾಭಾವವೋ ಎಂಬಂತೆ ಜ್ಯೋತಿ ರೈಗೆ ಅದೃಷ್ಟವೂ ಖುಲಾಯಿಸಿದಂತಿದೆ. ಹಲವು ವೆಬ್‌ ಸ್ಟೋರೀಸ್‌ಗಳು ಕೂಡ ಯಶಸ್ವಿಯಾಗುತ್ತಿವೆ.
 

ಜೊತೆಗೆ, ಜ್ಯೋತಿ ರೈ ತಮ್ಮ ವೈವಾಹಿಕ ಜೀವನದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಜ್ಯೋತಿ ಅವರು ಸುಕು ಪೂರ್ವಜ್‌ ಅವರೊಂದಿಗೆ ಡೇಟಿಂಗ್‌ನಲ್ಲಿದ್ದು,. ನಿಮ್ಮನ್ನು ಪತಿಯಾಗಿ ಪಡೆಯವುದಕ್ಕೆ ಪುಣ್ಯ ಮಾಡಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
 

ಇದರ ಬೆನ್ನಲ್ಲಿಯೇ ತಮ್ಮ ಇನ್ಸ್‌ಸ್ಟಾಗ್ರಾಮ್‌ನ ಜ್ಯೋತಿ ರೈ ಕೆಕೆ ಎಂಬ ಹೆಸರನ್ನು ಬದಲಿಸಿ ಜ್ಯೋತಿಪೂರ್ವಜ್ ಎಂಬ ಹೆಸರನ್ನು ಹಾಕಿಕೊಂಡಿದ್ದಾರೆ.

Latest Videos

click me!