ಶ್ರೀಗೌರಿ ಸೀರಿಯಲ್: ಅರ್ಚನಾ ಆಗಿ ಎಂಟ್ರಿ ಕೊಟ್ಟ ಕನ್ನಡತಿ ಖ್ಯಾತಿಯಾ ಸಾನಿಯಾ

Published : Feb 21, 2024, 11:11 AM IST

ಶ್ರೀಗೌರಿ ಸೀರಿಯಲ್ ಸದ್ಯ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಇದೀಗ ಈ ಸೀರಿಯಲ್ ನಲ್ಲಿ ಅಪ್ಪು ತಂಗಿ ಅರ್ಚನಾ ಪಾತ್ರದಲ್ಲಿ ಆರೋಹಿ ನೈನಾ ಕಾಣಿಸಿಕೊಂಡಿದ್ದಾರೆ.   

PREV
18
ಶ್ರೀಗೌರಿ ಸೀರಿಯಲ್: ಅರ್ಚನಾ ಆಗಿ ಎಂಟ್ರಿ ಕೊಟ್ಟ ಕನ್ನಡತಿ ಖ್ಯಾತಿಯಾ ಸಾನಿಯಾ

ಕನ್ನಡತಿ ಸೀರಿಯಲ್ (Kannadati Serial) ನಲ್ಲಿ ರಮೋಲ ನಿರ್ಗಮಿಸಿದ ನಂತರ ಸಾನಿಯಾ ಪಾತ್ರ ಮಾಡಿರೋ ಆರೋಹಿ ನೈನಾ (Arohi Naina) ನೆನಪಿದ್ಯಾ? ಇದೀಗ ಆ ಬ್ಯೂಟಿ ಕಲರ್ಸ್ ಕನ್ನಡದ ಶ್ರೀಗೌರಿ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ. 
 

28

ಕನ್ನಡತಿ ಸೀರಿಯಲ್ ನಲ್ಲಿ ನೆಗೆಟಿವ್ ಶೇಡ್ (negative shade) ಪಾತ್ರ ಮಾಡುವ ಮೂಲಕ, ಸಾನಿಯಾ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಆರೋಹಿ ಇದೀಗ ಮತ್ತೊಮ್ಮೆ ಶ್ರೀಗೌರಿ ಸೀರಿಯಲ್ ನಲ್ಲೂ ಒಂಥರಾ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 

38

ಕರಾವಳಿಯ ಕಂಬಳದ ಕಥೆ ಹೊಂದಿರುವ ಶ್ರೀಗೌರಿ ಸೀರಿಯಲ್ ಹೊಸ ಕಥೆಯೊಂದಿಗೆ ಜನರಿಗೆ ಮೆಚ್ಚುಗೆಯಾಗಿದೆ. ಈ ಸೀರಿಯಲ್‌ನಲ್ಲಿ ನಾಯಕ ಅಪ್ಪುವಿನ ತಂಗಿಯಾಗಿ ಮತ್ತು ಮಂಗಳಮ್ಮನ ಮಗಳು ಅರ್ಚನಾ ಆಗಿ ಆರೋಹಿ ನಟಿಸುತ್ತಿದ್ದಾರೆ. 
 

48

ನಾಯಕ ಅಪ್ಪುವಿನದು ಬಡತನದ ಕುಟುಂಬ, ಎಲ್ಲರೂ ಕಷ್ಟಪಟ್ಟು ದುಡಿಯುವ ಕುಟುಂಬವದು. ಈ ಮನೆಯ ಮಗಳು ಅರ್ಚನಾ. ಆಕೆ ನದಿ ಈಚೆ ಇರುವ ಗ್ರಾಮದಲ್ಲಿದ್ದರೆ ತುಂಬಾನೆ ಮುಗ್ಧೆ, ಆದ್ರೆ ಆಚೆ ಬಂದ್ರೆ ಮಾತ್ರ ಪೂರ್ತಿ ಬದಲಾವಣೆ. 
 

58

ನದಿಯ ಆಚೆ ಭಾಗದಲ್ಲಿ ಅರ್ಚನಾ ಚೂಡಿದಾರ್ ಹಾಕಿ ಎಷ್ಟು ಸಾಧುವಾಗಿರುತ್ತಾಳೋ, ನದಿ ಈಚೆ ದಾಟಿ ಕಾಲೇಜಿಗೆ ಬಂದರೆ ಪಕ್ಕಾ ಮಾಡರ್ನ್ ಹುಡುಗಿಯಾಗಿ ಬದಲಾಗುತ್ತಾಳೆ. ಡ್ರೆಸ್, ಮಾತಿನ್ ಸ್ಟೈಲ್, ಫ್ರೆಂಡ್ಸ್ ಗ್ಯಾಂಗ್ ಎಲ್ಲರೂ ಬದಲಾಗುತ್ತೆ. 

68

ಸದ್ಯ ತಂಗಿಯನ್ನು ಮುಗ್ಧೆ ಅಂದುಕೊಂಡಿರೋ ಅಪ್ಪು, ಸತ್ಯ ತಿಳಿದಿರೋ ಗೌರಿ ಜೊತೆ ಜಗಳವಾಡೋದೆ ಇದೇ ತಂಗಿಯ ಕಾರಣದಿಂದ. ತಂಗಿ ಬೆಳ್ಳಗಿರೋ ಹಾಲಲ್ಲ, ಕಳ್ಳಿ ಹಾಲು ಅನ್ನೋದು ಅಣ್ಣನಿಗೆ ಗೊತ್ತಾಗಬೇಕಿದೆ. ಆವಾಗ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು. 
 

78

ಇನ್ನು ಆರೋಹಿ ಬಗ್ಗೆ ಹೇಳೊದಾದ್ರೆ ಮಡಿಕೇರಿಯ ಬೆಡಗಿ ಆರೋಹಿ ನೈನಾ, ಬಣ್ಣದ ಜಗತ್ತಿಗೆ ಕಾಲಿಟ್ಟದ್ದು ಇವಳು ಸುಜಾತ ಸೀರಿಯಲ್ ನ ಸಣ್ಣ ಪಾತ್ರದ ಮೂಲಕ, ನಂತರ ಹೂಮಳೆ (Hoomale) ಸೀರಿಯಲ್ ನಲ್ಲಿ  ಶೋಭಾ ಪಾತ್ರದ ಮೂಲಕ ಮನೆಮಾತಾದರು. 
 

88

ನಂತರ ಕನ್ನಡತಿ ಸೀರಿಯಲ್ ನಲ್ಲಿ ಜನಪ್ರಿಯತೆ ಪಡೆದಿದ್ದ ನೆಗೆಟಿವ್ ಪಾತ್ರ ಸಾನಿಯಾ ಪಾತ್ರಕ್ಕೆ ರಮೋಲ (Ramola) ಬಿಟ್ಟು ಹೋದ ನಂತರ  ಆರೋಹಿ ಆ ಪಾತ್ರಕ್ಕೆ ಆಯ್ಕೆಯಾಗಿ ಬಹಳ ಸುಂದರವಾಗಿ ಅಭಿನಯಿಸಿದ್ದರು, ನಂತರ ಭರ್ಜರಿ ಬ್ಯಾಚುಲರ್ ನಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಶ್ರೀಗೌರಿ ಮೂಲಕ ಜನರನ್ನು ರಂಜಿಸುತ್ತಿದ್ದಾರೆ ಆರೋಹಿ. 
 

Read more Photos on
click me!

Recommended Stories