ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರಮುಖ ಸ್ಪರ್ಧಿಯಾಗಿ ಮೋಡಿ ಮಾಡಿದ್ದ ಅನುಪಮಾ ಅವರ ಆಟಕ್ಕೆ ಬ್ರೇಕ್ ಬಿದ್ದಿದೆ. ಈ ಹಿಂದೆ ಇವರು 2017ರಲ್ಲಿ ಬಿಗ್ ಬಾಸ್ ಐದನೇ ಸೀಸನ್‌ನಲ್ಲಿ 98 ದಿನಗಳನ್ನು ಪೂರೈಸಿದರು.
ಹೀಗೆ ಬಿಗ್ ಬಾಸ್‌ನಲ್ಲಿ ಎರಡನೇ ಅವಕಾಶ ಸಿಗುವುದು ಆದೃಷ್ಟವೇ ಸರಿ ಮತ್ತು ಅನುಪಮ ಅವರು ಎರಡನೇ ಬಾರಿ ಬಿಗ್‌ಬಾಸ್‌ನಲ್ಲಿ ಅವಕಾಶ ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
'ಈ ಋತುವಿನಲ್ಲಿ ನಾನು ಸಾಕಷ್ಟು ಬೆಳೆದಿದ್ದೇನೆ ಎಂದು ನನಗೆ ಅನಿಸುತ್ತದೆ. ಒಮ್ಮೊಮ್ಮೆ ನನಗೇ ಆಶ್ಚರ್ಯವಾಗುತ್ತದೆ. ನಾನು ಮನೆಯೊಳಗಿದ್ದ ಅಷ್ಟೂ ದಿನಗಳೂ ಕೋಪಗೊಳ್ಳಲಿಲ್ಲ ಅಥವಾ ಹಿಂದಿನ ಸೀಸನ್‌ನಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸಲಿಲ್ಲ. ಬಿಗ್ ಬಾಸ್‌ನಂತಹ ರಿಯಾಲಿಟಿ ಶೋನ ಭಾಗವಾಗುವುದು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನಡೆಯುವ ಸಂಗತಿ. ಅದು ನಿಮಗೆ ಎರಡನೇ ಬಾರಿಗೆ ಸಿಕ್ಕರೆ, ನೀವು ಅದು ನಮ್ಮ ಲಕ್ ಎಂದು ನಾನು ನಂಬುತ್ತೇನೆ. ನನ್ನ ಹಿಂದಿನ ಶೋನಲ್ಲಿ ನಂಗೇನೂ ಅಷ್ವು ವಿಶ್ವಾಸವಿರಲಿಲ್ಲ. ನಾನು ಹಿಂಜರಿಯುತ್ತಿದ್ದೆ. ಇತರರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂದು ಯಾವಾಗಲೂ ತಲೆ ಕೆಡಿಸಿಕೊಳ್ಳುತ್ತಿದ್ದೆ. ನಾನೂ ದುರ್ಬಲಳಾಗಿದ್ದೆ. ಆದರೆ ಈ ಸಮಯದಲ್ಲಿ, ನಾನು ಹೆಚ್ಚು ಆತ್ಮವಿಶ್ವಾಸ ಮತ್ತು ಬಲಶಾಲಿಯಾಗಿದ್ದೇನೆ' ಎಂದು ಹೇಳಿದ್ದರು.
ಅನುಪಮಾ ಗೌಡ ಈ ಸೀಸನ್‌ನಲ್ಲಿ ಟಾಸ್ಕ್, ಅಡುಗೆ, ಮನರಂಜನೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಈಗ 13ನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಯೊಳಗೆ 85 ದಿನಗಳನ್ನು ಕಳೆದರು ಮತ್ತು ಕಳೆದ ವಾರವಷ್ಟೇ ಆಟದಿಂದ ಹೊರಬಿದ್ದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ನಂತರ ಅನುಪಮ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮಲ್ಲರ ಪ್ರೀತಿ ಬಿಗ್ ಬಾಸ್ ಗೆದ್ದಷ್ಟೇ ಸಂತೋಷ ನೀಡಿದೆ ಎಂದು ತಮ್ಮ ಕೆಲವು ಫೋಟೋಗಳ ಜೊತೆ ಇನ್‌ಸ್ಟ್ರಾಮ್‌ನಲ್ಲಿ ಅನುಪಮಾ ಒಂದು ಪೋಸ್ಟ್ ಅನ್ನು ಹಾಕಿದ್ದಾರೆ.
2003ರಲ್ಲಿ ಲಂಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅನುಪಮಾ ಅವರು 2015ರ ನಗಾರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಸಿನಿಮಾದಲ್ಲಿ ನಾಯಕಿಯಾಗುವ ಮೊದಲು ಅನುಪಮಾ ಅವರು ಅವರು ಹಳ್ಳಿ ದುನಿಯಾ ಎಂಬ ರಿಯಾಲಿಟಿ ಶೋ (Reality Show) ಮೂಲಕ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು, ಆದರೆ ಅವರು ಬಿಗ್ ಬಾಸ್ ಕನ್ನಡದ ಐದನೇ ಸೀಸನ್ ಮೂಲಕ ಮನೆ ಮಾತಾದರು.
ಕನ್ನಡ ಕೋಗಿಲೆ, ರಾಜ-ರಾಣಿ, ಮಜಾ ಭಾರತ ಮುಂತಾದ ಶೋಗಳಲ್ಲಿ ನಿರೂಪಕಿಯಾಗಿಯೂ ಸೈ ಅನಿಸಿಕೊಂಡಿರುವ ಇವರು ಚಿ ಸೌ ಸಾವಿತ್ರಿ ಮತ್ತು ಅಕ್ಕ ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ.
ಆ ಕರಾಳ ರಾತ್ರಿ, ತ್ರಯಂಬಕಂ, ಪುಟ 109 ಮತ್ತು ಬೆಂಕಿಯಲ್ಲಿ ಆರಳಿದ ಹೂವು ಸೇರಿದಂತೆ ಸಾಕಷ್ಟು ಪ್ರಾಜೆಕ್ಟ್ ಗಳಲ್ಲಿ ಅನುಪಮ ಗೌಡ ಭಾಗವಾಗಿದ್ದಾರೆ.