ಶ್ರೀರಸ್ತು ಶುಭಮಸ್ತು ಸೆಟ್: ಮೇಕಪ್ ಮುಂಚೆ ಹೇಗ್ ಇರ್ತಾರೆ ನಟರು!

Published : Jun 19, 2024, 03:44 PM ISTUpdated : Jun 19, 2024, 04:56 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ನ ನಟ-ನಟಿಯರು ರಿಯಲ್ ಲೈಫಲ್ಲಿ ಹೇಗಿರ್ತಾರೆ ಅನ್ನೋದನ್ನು ನೀವೆ ನೋಡಿ. ಮಾಧವ ತುಳಸಿಯಿಂದ ಹಿಡಿದು, ಓಡಿ ಹೋದಳವರೆಗೂ ಇಲ್ಲಿದೆ ಮುದ್ದಾದ ಫೋಟೋಗಳು.   

PREV
17
ಶ್ರೀರಸ್ತು ಶುಭಮಸ್ತು ಸೆಟ್: ಮೇಕಪ್ ಮುಂಚೆ ಹೇಗ್ ಇರ್ತಾರೆ ನಟರು!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಲ್ಲಿ ಒಂದು ಶ್ರೀರಸ್ತು ಶುಭಮಸ್ತು(Shreerastu Shubhamastu). ಈ ಧಾರಾವಾಹಿಯಲ್ಲಿ ಬರುವಂತಹ ಪ್ರತಿಯೊಬ್ಬ ನಟರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿಸಿ, ನಟಿಸುತ್ತಿದ್ದಾರೆ. ಹಾಗಾಗಿಯೇ ವೀಕ್ಷಕರು ಇಷ್ಟಪಟ್ಟು ಸೀರಿಯಲ್ ನೋಡ್ತಾರೆ. 
 

27

ಈ ಧಾರಾವಾಹಿ ತುಳಸಿ ಮತ್ತು ಮಾಧವನ ಸ್ನೇಹ, ಮದುವೆಯಿಂದ ಆರಂಭವಾಗಿ ಸದ್ಯ ಮನೆ ಎರಡು ಭಾಗವಾಗದಂತೆ ಹೇಗೆ ಉಳಿಸೋದು ಅನ್ನೋದರ ಕಥೆ ಶುರುವಾಗಿದೆ. ತುಳಸಿ ಮನೆಯವರನ್ನೆಲ್ಲಾ ಒಟ್ಟಾಗಿರಿಸಲು ಪ್ರಯತ್ನಿಸಿದ್ರೆ, ಶಾರ್ವರಿ ಮನೆಯನ್ನು ಮುರಿಯೋದಕ್ಕೆ ಪ್ರಯತ್ನಿಸುತ್ತಿದ್ದಾರೆ. 
 

37

ಕಳೆದ ಕೆಲದಿನಗಳಿಂದ ಎಪಿಸೋಡ್‌ಗಳು ತುಂಬಾ ಇಂಟ್ರೆಸ್ಟಿಂಗ್ ಆಗಿ ಬರುತ್ತಿವೆ. ತುಳಸಿಯ ಭರತನಾಟ್ಯ, ಮನೆಯವರ ಡ್ಯಾನ್ಸ್, ಅಮ್ಮನನ್ನು ಮೆಚ್ಚಿಕೊಂಡ ಸಮರ್ಥ್, ತುಳಸಿಯಲ್ಲಿ ತನ್ನ ಅಮ್ಮನನ್ನು ಕಾಣುತ್ತಿರುವ ಅಭಿ, ಇವೆಲ್ಲವೂ ವೀಕ್ಷಕರಿಗಂತೂ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಇದೀಗ ಶ್ರೀರಸ್ತು ಶುಭಮಸ್ತುವಿನ ಎಲ್ಲಾ ತಾರೆಯರು ಸೇರಿ ಪಾರ್ಟಿ ಮಾಡಿದ್ದಾರೆ. 
 

47

ಸೀರಿಯಲ್‌ನಲ್ಲಿ ನಟಿಸೋ ನಟ -ನಟಿಯರು ಅಲ್ಲಿ ಪಾತ್ರವನ್ನು ಜೀವಿಸುತ್ತಾರೆ ಅಷ್ಟೇ, ಆದ್ರೆ ರಿಯಲ್ ಲೈಫಲ್ಲಿ ಅವರು ತುಂಬಾನೆ ವಿಭಿನ್ನವಾಗಿರ್ತಾರೆ. ಇದೀಗ ಸೀರಿಯಲ್‌ನಲ್ಲಿ ಸಂಧ್ಯಾ ಆಗಿ ನಟಿಸುತ್ತಿರುವ ದೀಪಾ ಕಟ್ಟೆ (Deepa Katte) ಶ್ರೀರಸ್ತು ಶುಭಮಸ್ತು ಸೀರಿಯಲ್ ತಾರೆಯರು ನಡೆಸಿದ ಪಾರ್ಟಿಯ ಫೋಟೋ ಶೇರ್ ಮಾಡಿದ್ದಾರೆ. 
 

57

ಶ್ರೀರಸ್ತು ಶುಭಮಸ್ತು ಸೀರಿಯಲ್ 400 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಸಂದರ್ಭದಲ್ಲಿ ಸೀರಿಯಲ್ ತಂಡ ಸಣ್ಣದಾಗಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಸೀರಿಯಲ್ ನಟ -ನಟಿಯರು, ತಮ್ಮ ಪಾತ್ರವನ್ನು ಬಿಟ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

67

400 ಸಂಚಿಕೆಗಳ ಸಂಭ್ರಮಾಚರಣೆಯಲ್ಲಿ ಸುಧಾರಾಣಿ, ಅಜಿತ್ ಹಂದೆ, ಲಾವಣ್ಯ, ದರ್ಶಿನಿ, ಅನನ್ಯಾ, ಸ್ವಪ್ನಾ ದೀಕ್ಷಿತ್, ದರ್ಶಿತ್ ಗೌಡ, ನಕುಲ್, ಅರ್ಫತ್ ಶರೀಫ್, ಸುಷ್ಮಿತಾ, ಜೊತೆಗೆ ಸೀರಿಯಲ್‌ನ ಎಲ್ಲಾ ಹಿರಿಯ- ಕಿರಿಯ ಕಲಾವಿದರೂ ಆಗಮಿಸಿದ್ದರು. 
 

77

ಅಷ್ಟೇ ಅಲ್ಲ ಸೀರಿಯಲ್‌ನಲ್ಲಿ ಈ ಹಿಂದೆ ಶಾರ್ವರಿ ಪಾತ್ರ ನಿರ್ವಹಿಸುತ್ತಿದ್ದ ನೇತ್ರಾ ಜಾದವ್ ಅವರೂ ಆಗಮಿಸಿ ಸಂಭ್ರಮಿಸಿದ್ದಾರೆ. ನೋಡಿ ನಿಮ್ಮ ನೆಚ್ಚಿನ ಸೀರಿಯಲ್ ತಾರೆಯರು ನಿಜ ಜೀವನದಲ್ಲಿ ಹೇಗೆ ಕಾಣಿಸ್ತಾರೆ ಅನ್ನೋದನ್ನು ನೀವು ನೋಡಿ. 
 

click me!

Recommended Stories