ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಣ್ಣ ತಂಗಿ' ಧಾರಾವಾಹಿ ನಟಿ ಅಖಿಲಾ: ಪತಿಯ ಹಿನ್ನೆಲೆಯೇನು?

Published : Dec 13, 2023, 08:44 AM IST

‘ಅಣ್ಣ ತಂಗಿ’ ಸೀರಿಯಲ್ ನಟಿ ಅಖಿಲಾ ಪ್ರಕಾಶ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭರತ್ ಕಾಂತ್ ಎಂಬುವವರ ಜೊತೆ ಅಖಿಲಾ ಹೊಸ ಬಾಳಿಗೆ ಕಾಲಿಟ್ಟಿದ್ದು, ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

PREV
16
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಣ್ಣ ತಂಗಿ' ಧಾರಾವಾಹಿ ನಟಿ ಅಖಿಲಾ: ಪತಿಯ ಹಿನ್ನೆಲೆಯೇನು?

'ಅಣ್ಣತಂಗಿ' ಧಾರಾವಾಹಿ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅಖಿಲಾ ಪ್ರಕಾಶ್ ( ಅಖಿಲಾ ದೇಚಮ್ಮ ) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ಈ ಮದುವೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವರು ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

26

ಕಳೆದ ವರ್ಷದಿಂದಲೇ ಅವರು ಭರತ್ ಕಾಂತ್ ಜೊತೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುತ್ತ ಪ್ರೀತಿ ಮಾಡುತ್ತಿರುವ ಸುಳಿವು ನೀಡುತ್ತಿದ್ದರು. ಇದು ಲವ್ ಮ್ಯಾರೇಜ್ ಎಂದು ಹೇಳಲಾಗಿದೆ. ಅಂದಹಾಗೆ ಕೆಲ ತಿಂಗಳುಗಳ ಹಿಂದೆ ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಮದುವೆಯಾಗಿದ್ದಾರೆ. 

36

ಈ ಮದುವೆಗೆ ಅಣ್ಣ ತಂಗಿ ಧಾರಾವಾಹಿ ಕಲಾವಿದರು ಭಾಗವಹಿಸಿದ್ದರು. ಅಖಿಲಾ-ಭರತ್ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಸುರಿದಿದೆ. ಅಣ್ಣ ತಂಗಿ ಧಾರಾವಾಹಿ ಕಲಾವಿದರು ಈ ಸಮಾರಂಭಕ್ಕೆ ಬಂದು ನವಜೋಡಿಗೆ ಶುಭ ಹಾರೈಸಿದ್ದು, ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ.

46

‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು 3’ ಮೂಲಕ ಸ್ಪರ್ಧಿಯಾಗಿ ಕಾಲಿಟ್ಟರು. ಇದೀಗ ‘ಅಣ್ಣ ತಂಗಿ’ ಸೀರಿಯಲ್‌ನಲ್ಲಿ ತಂಗಿಯ ಪಾತ್ರದಲ್ಲಿ ಅಖಿಲಾ ನಟಿಸುತ್ತಿದ್ದಾರೆ. ತುಳಸಿ ಎಂಬ ಮುಗ್ಧ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭರತ್ ಕಾಂತ್ ಯಾರು? ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸದ್ಯಕ್ಕೆ ಅಖಿಲಾ ಮಾಹಿತಿ ನೀಡಿಲ್ಲ.

56

'ಸೋಜಿಗ' ಸಿನಿಮಾದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಅಖಿಲಾ ಪ್ರಕಾಶ್ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಓಳ್ ಮುಸ್ಸಾಮಿ', '18 ರಿಂದ 25', 'ರತ್ನಮಂಜರಿ', 'ಗಾಂಚಾಲಿ' ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.

66

ಅಖಿಲಾ ಡಾಕ್ಟರ್ ಆಗಬೇಕು ಎಂದು ಬಯಸಿದ್ದರು. ಆದರೆ ಬಿ.ಕಾಂ ಪದವಿ ಪಡೆದು, ಆ್ಯಕ್ಟರ್ ಆದರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿದ ಅಖಿಲಾ ಪ್ರಕಾಶ್ ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆದಿದ್ದು ಹಿರಿತೆರೆ.

Read more Photos on
click me!

Recommended Stories