ಬಿಗ್‌ಬಾಸ್ ಪವಿ ಪೂವಪ್ಪ ರಿಯಲ್ ಲೈಫ್ ಹೇಗಿದೆ ಗೊತ್ತಾ? ನಾವು ನೀವು ಅಂದ್ಕೊಂಡಂಗಿಲ್ಲ ಬಿಡಿ!

First Published | Dec 12, 2023, 3:54 PM IST

ಕಿರುತೆರಯಲ್ಲಿ ಅತಿಹೆಚ್ಚಿನ ಜನರು ವೀಕ್ಷಣೆ ಮಾಡುವಂತಹ ಕಾರ್ಯಕ್ರಮಗಳಲ್ಲಿ ಒಂದಾದ ಬಿಗ್‌ಬಾಸ್ ಕನ್ನಡ ಸೀಸನ್ 10 ಈಗಾಗಲೇ 50 ದಿನ ಪೂರೈಸಿದೆ. ಇದರ ಬೆನ್ನಲ್ಲಿಯೇ ಮಾಡೆಲ್ ಪವಿ ಪೂವಪ್ಪ ಹಾಗೂ ಅವಿನಾಶ್ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶ ಪಡೆದಿದ್ದಾರೆ. ಆದರೆ, ಈಗ ಬಿಗ್‌ಬಾಸ್ ಮನೆ ಸೇರಿರುವ ಪವಿ ಪೂವಪ್ಪ ಅವರ ರಿಯಲ್ ಜೀವನ ನಾವು ನೀವು ಅಂದುಕೊಂಡಂಗಿಲ್ಲ.

ಕಿರುತೆರೆ ಇತಿಹಾಸದಲ್ಲೇ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಬರೋಬ್ಬರಿ 50 ದಿನಗಳನ್ನು ಪೂರೈಸಿದ್ದು. ಇದೀಗ ಬಿಗ್‌ಬಾಸ್‌ ಕನ್ನಡಕ್ಕೆ ಎರಡು ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.
 

ಬಿಗ್‌ಬಾಸ್‌ ಮನೆಗೆ ಇಬ್ಬರು ಸ್ಪರ್ಧಿಗಳು ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳಲ್ಲಿ ಒಬ್ಬರು ಫ್ಯಾಷನ್‌ ಮಾಡೆಲ್‌ ಪವಿ ಪೂವಪ್ಪ ಮತ್ತೊಬ್ಬರು ಕ್ರಿಕೆಟರ್‌, ಫ್ಯಾಷನ್‌ ಮಾಡೆಲ್‌ ಅವಿನಾಶ್ ಶೆಟ್ಟಿ ಆಗಿದ್ದಾರೆ. ಆದರೆ, ಬಿಗ್‌ಬಾಸ್ ಮನೆಯಲ್ಲಿ ಯಾರ ಬಲೆಗೂ ಬೀಳದೇ ತನ್ನದೇ ಆಟವಾಡುತ್ತಿರುವ ಪವಿ ಪೂವಪ್ಪ ಅರ ನೈಜ ಜೀವನ ಹೇಗಿದೆ ಇಲ್ಲಿದೆ ನೋಡಿ..
 

Tap to resize

ಕೊಡಗು ಮೂಲದವರಾದ ಪವಿ ಪೂವಪ್ಪ ಅವರು ರೂಪದರ್ಶಿಯಾಗಿದ್ದಾರೆ. ಉನ್ನತ ಬ್ರಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿದ್ದಾರೆ. ಅವರು ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ "ಸೊಪ್ಪನ ಸುಂದರಿ" ಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.  
 

ಇದರೊಂದಿಗೆ ತಾವು ಕೂಡ ಶಾರ್ಟ್ ಬಟ್ಟೆಯನ್ನು ಹಾಕಿಕೊಂಡು ಫೋಟೋ ಶೂಟ್‌ ಮಾಡಿಸಿರುವುದೂ ಹೆಚ್ಚಾಗಿದೆ. ಪವಿ ಆಗಾಗ ತನ್ನ ಹಾಟ್‌ ಮಾಡೆಲಿಂಗ್ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾನದ ಖಾತೆಗಳಲ್ಲಿ ಶೇರ್ ಮಾಡುತ್ತಿರುತ್ತಾರೆ.
 

ಪವಿ ಪೂವಪ್ಪ ಅವರು ತಮ್ಮ ಹಾಟ್ ಫೋಟೋಗಳಿಂದಲೇ ಮಿಲಿಯನ್‌ಗಟ್ಟಲೆ ಫ್ಯಾನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್ನು ಈಕೆಗೆ ಇನ್ಟಾಗ್ರಾಮ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
 

ಕನ್ನಡದ ಬಿಗ್‌ಬಾಸ್ ಮನೆಗೆ ವೈಲ್ಡ್‌ ಕಾರ್ಡ್ ಎಂಟ್ರಿ ಬಳಿಕ ಅಲ್ಲಿ ಇವರಿಗೆ ಹೂವಿನ ಹಾಸಿಗೆ ಸ್ವಾಗತವಂತೂ ಸಿಕ್ಕಿಲ್ಲ. ಬಿಗ್‌ಬಾಸ್ ಮನೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಕಳುಹಿಸುವ ಯತ್ನವನ್ನೂ ಇತರ ಕಂಟೆಸ್ಟಂಟ್‌ಗಳು ಮಾಡಿದ್ದಾರೆ.
 

ನಾವು ನೀವೆಲ್ಲರೂ ಪವಿ ಪೂವಪ್ಪ ಎಂದು ಕರೆಯುತ್ತಿದ್ದು, ಅವರ ನೈಜ ಹೆಸರು ಪವಿತ್ರ ಪೂವಪ್ಪ ಎಂಬುದಾಗಿದೆ. ಆದರೆ, ತಾವೇ ತಮ್ಮ ಹೆಸರನ್ನು ಶಾರ್ಟ್‌ ಮಾಡಿಕೊಂಡಿದ್ದಾರೆ.

ಪವಿ ನೋಡೋಕೆ ಸಖತ್ತಾಗಿದ್ದಾರಂತೆ ಗಂಡ್‌ ಹೈಕ್ಳು ಲೈನ್‌ ಹಾಕೋಕೆ ಹೋಗಬೇಡಿ. ಈ ಬ್ಯೂಟಿಫುಲ್‌ ಸುಂದರಿಗೆ ಈಗಾಗಲೇ ಬಾಯ್ ಫ್ರೆಂಡ್ ಇದ್ದಾರೆ. ಇದು ತಿಳಿಯದೆ ಸುಮ್ ಸುಮ್ನೆ ಕಾಳು ಹಾಕೋದು, ಅದು ವೇಸ್ಟ್ ಆಗೋದು ಬೇಡ ಅಲ್ವಾ ಎಂದು ಹಲವರು ಹೇಳಿದ್ದಾರೆ.
 

ಪವಿ ಪೂವಪ್ಪ ಇನ್‌ಸ್ಟಾಗ್ರಾಮ್‌‌ನಲ್ಲಿ ಪರಿಚಯ ಮಾಡಿಕೊಟ್ಟಿದ್ದು ಈತನ ಹೆಸರು ಡಿಜೆ ಮ್ಯಾಡಿ ಎಂಬ ಪರಿಚಯಿಸಿದ್ದಾರೆ. ಇವರಿಬ್ಬರು ಕಳೆದ 3 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
 

ಮುಖ್ಯವಾಗಿ ಪವಿ ಪೂವಪ್ಪ ಅವರು ಬಿಕಾಂ ಪದವೀಧರೆ ಆಗಿದ್ದು, ರಾಜಾಜಿನಗರ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಇವರು 2013ರಿಂದ ಫ್ರೊಫೆಶನಲ್ ರನ್‌ವೇ ಮಾಡೆಲ್ ಆಗಿ ವೃತ್ತಿ ಮಾಡುತ್ತಿದ್ದಾರೆ. 
 

ಪವಿ ಪೂವಪ್ಪ ಅವರು ಮಿಸ್ ಅವೇಸಮ್ ಬೆಂಗಳೂರು 2016 ಸೌಂದರ್ಯ ಸ್ಪರ್ಧೆಯಲ್ಲಿ ಪವಿ ಪೂವಪ್ಪ ಅವರು ಗೆಲುವು ಸಾಧಿಸಿದ್ದರು. ಇನ್ನು ಪವಿ ಪೂವಪ್ಪ ಅವರ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೀಕ್ಷಣೆ ಆಗುತ್ತಿವೆ.

Latest Videos

click me!