ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಬೆಸ್ಟ್ ಆ್ಯಂಕರ್ ಅನುಶ್ರೀ ಹೇಗೋ ಟಾಲಿವುಡ್‌ಗೆ ಸುಮಾ ಕನಕಾಲ ಫೇಮಸ್ ಆ್ಯಂಕರ್ ಆಗಿದ್ದಾರೆ. ಸಿನಿಮಾ ರಿಲೀಸ್ ಈವೆಂಟ್‌ಗಳನ್ನ ಸುಮಾ ಕಾರ್ಯಕ್ರಮ ನಿರ್ವಹಿಸಿದ್ರೆ, ಅದಕ್ಕೊಂದು ಕಿಕ್ ಇರುತ್ತೆ. ಹಲವು ಹೀರೋಗಳ ಸಿನಿಮಾ ರಿಲೀಸ್ ಈವೆಂಟ್‌ಗಳಿಗೆ ಸುಮಾ ಅವರೇ ಆ್ಯಂಕರ್ ಆಗಿರಬೇಕು ಅನ್ನೋ ಸೆಂಟಿಮೆಂಟ್ ಇದೆ. ಸಂದರ್ಭಕ್ಕೆ ತಕ್ಕಂತೆ ಹಾಸ್ಯ ಮಾಡ್ತಾ, ನಗ್ತಾ, ಚಟುವಟಿಕೆಯಿಂದ ಕಾರ್ಯಕ್ರಮ ನಿರ್ವಹಿಸೋದ್ರಲ್ಲಿ ಸುಮಾ ನಿಸ್ಸೀಮರು. ಸುಮಾ ಕಾರ್ಯಕ್ರಮ ನಿರ್ವಹಿಸಿದ್ರೆ ಯಾರಿಗೂ ಬೋರ್ ಆಗೋದಿಲ್ಲ ಅನ್ನೋ ಅಭಿಪ್ರಾಯ ಇದೆ.