'ಸರಿಗಮಪ' ನಿರೂಪಕನ ರೊಮ್ಯಾಂಟಿಕ್‌ ಫೋಟೋ; ನೆಗೆಟಿವ್ ಕಾಮೆಂಟ್‌ಗೆ ನೋ ಪ್ರಾಬ್ಲಂ!

First Published | Nov 14, 2020, 12:09 PM IST

5ನೇ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷವಾದ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿದ ಕಿರುತೆರೆ ಜನಪ್ರಿಯ ನಿರೂಪಕ. ಹಾಟ್‌ ಫೋಟೋಗೆ ಟ್ರೋಲ್, 'We dont care'ಎಂದ ದಂಪತಿ.

ಕೇರಳಂ ಸರಿಗಮಪ ರಿಯಾಲಿಟಿ ಶೋ ನಿರೂಪಕ ಜೀವಾ ಜೋಸೆಫ್‌ ಹಾಗೂ ಪತ್ನಿ ಅಪರ್ಣಾ 5ನೇ ವಿವಾಹ ವಾರ್ಷಿಕೋತ್ಸವದ ಸಲುವಾಗಿ ವಿಭಿನ್ನ ಫೋಟೋ ಶೂಟ್ ಮಾಡಿಸಿದ್ದಾರೆ.
'5 ವರ್ಷಗಳು ಕಳೆದಿವೆ. ಈಗಲೂ ನಾವಿಬ್ಬರೂ ಮೊದಲಿನಷ್ಟೇ ಪ್ರೀತಿಸುತ್ತೇವೆ,' ಎಂದು ಜೀವಾ ಬರೆದುಕೊಂಡಿದ್ದಾರೆ.
Tap to resize

ಇಬ್ಬರು ಜೋಡಿಯಾಗಿ 'Mr and Mrs' ರಿಯಾಲಿಟಿ ಶೋ ನಿರೂಪಣೆ ಮಾಡಿದ್ದಾರೆ. ಇದು ಅತಿ ಹೆಚ್ಚು ಜನಪ್ರಿಯತೆ ಪಡೆದಿದ್ದು, ಅಭಿಮಾನಿಗಳು ಇನ್ನು ಹೆಚ್ಚು ರಿಯಾಲಿಟಿ ಶೋ ನಿರೂಪಣೆ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.
ವಾರ್ಷಿಕೋತ್ಸವದ ಪ್ರಯುಕ್ತ ಇಬ್ಬರು ಬೆಡ್‌ರೂಮ್‌ ರೊಮ್ಯಾನ್ಸ್‌ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್ ವೈರಲ್ ಆಗುತ್ತಿದ್ದಂತೆ, ನೆಗೆಟಿವ್ ಕಾಮೆಂಟ್ಸ್ ಹೆಚ್ಚಾಗಿದೆ ಎಂದು ಅಪರ್ಣಾ ಹೇಳಿಕೊಂಡಿದ್ದಾರೆ.
'ಜೀವಾ ನಿನ್ನನ್ನು ನಾವು ಜೆಂಟಲ್‌ಮ್ಯಾನ್‌ ಎಂದು ಕೊಂಡಿದ್ವಿ. ಆದರೆ ನೀವು ಈ ರೀತಿ ಬೆಡ್‌ರೂಮ್‌ ಫೋಟೋ ಶೇರ್ ಮಾಡಿಕೊಳ್ಳುವುದು ಒಳ್ಳೆಯದಲ್ಲ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಅಪರ್ಣಾ ಧರಿಸಿರುವ ಬಟ್ಟೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ಹಾಕಿಕೊಳ್ಳುವ ಬಟ್ಟೆಯಲ್ಲಿ ನಾನು ಕಂಫರ್ಟಬಲ್ ಇರೋವರೆಗೂ ಫೋಟೋ ತೆಗೆದು ಶೇರ್ ಮಾಡಿಕೊಳ್ಳುವುದಕ್ಕೆ ನನಗೆ ಯಾವುದೇ ಮುಜುಗರವಿಲ್ಲ,' ಎಂದಿದ್ದಾರೆ.
ಜೀವ ಹಾಗೂ ಅಪರ್ಣಾ ತುಂಬಾನೇ ಸ್ಟ್ರಾಂಗ್ ಕಪಲ್ ಅವರಿಬ್ಬರ ನಡುವೆ ಯಾರೂ ಎಂಟರ್ ಆಗಲು ಸಾಧ್ಯವಿಲ್ಲ ಎಂಬುದು ನೆಟ್ಟಿಗರ ಮಾತು.
ನಮ್ಮ ಹೆಸರಿಗೆ ಕೆಟ್ಟ ಕಳಂಕ ತರುವುದು ಅಥವಾ ಫೋಟೋವನ್ನು ಮತ್ತೊಂದು ರೀತಿಯಲ್ಲಿ ಎಡಿಟ್ ಮಾಡಿ ಟ್ರೋಲ್ ಮಾಡಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

Latest Videos

click me!