ಅಂತೂ ಇಂತೂ ಮದುವೆಯಾವುದಾಗಿ ಘೋಷಿಸಿದ ನಿರೂಪಕಿ ಅನುಶ್ರೀ, ಹುಡುಗ ಯಾರು?

Published : May 14, 2024, 05:27 PM ISTUpdated : May 17, 2024, 06:04 PM IST

ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ  ಸಂದರ್ಶನ ನೀಡಿದ್ದು, ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.

PREV
15
ಅಂತೂ ಇಂತೂ ಮದುವೆಯಾವುದಾಗಿ ಘೋಷಿಸಿದ ನಿರೂಪಕಿ ಅನುಶ್ರೀ, ಹುಡುಗ ಯಾರು?

ನನ್ನ ಬಳಿ ಕೋಟ್ಯಂತರ ಜನ ಕೇಳುವ ಪ್ರಶ್ನೆ ನಿಮ್ಮ ಮದುವೆ ಯಾವಾಗ? ಯೂಟ್ಯೂಬ್‌ ನಲ್ಲಿ ನನಗೆ 10 ಸಾವಿರ ಮದುವೆ ಮಾಡಿಸಿದ್ದಾರೆ.  ಬಹುಷ ನಾನು ರಿಯಲ್ ಆಗಿ ಮದುವೆಯಾದ್ರೆ ಯಾರೂ ನಂಬಲಿಕ್ಕಿಲ್ಲ. ಅಷ್ಟು ಮದುವೆಯಾಗಿದೆ ಯೂಟ್ಯೂಬ್‌ ನಲ್ಲಿ ನನ್ನದು. ರಕ್ಷಿತ್‌ ಶೆಟ್ಟಿ ಜೊತೆ ಮೂರು ಸಲ ಮದುವೆ ಮಾಡಿಸಿದ್ದಾರೆ. ಒಂದು ಸಲ ನಾನೇ ಅವರಿಗೆ ಲಿಂಕ್ ಕಳಿಸಿದೆ. ಶೆಟ್ರೆ, ಕಂಗ್ರಾಜುಲೇಷನ್‌ ಎಂದೆ. ಅವರು ಹೋ, ಇದ್ಯಾವಾಗ ಮಾರೆ ಆದದ್ದು. ನೀವು ಕರೀಲೇ ಇಲ್ಲ ಅಂದರು. ನಾನಂದೆ ನಾವಿಬ್ಬರೂ ಬರಲೇ ಇಲ್ಲ. ಆದರೂ ನಮ್ಮ ಮದುವೆಯಾಗಿದೆ ಎಂದೆ.

25

ನಾನು ಯಾವುದೇ ಸಿಂಗಲ್ ಹುಡುಗನ ಜೊತೆ ಫೋಟೋ ಹಾಕಿದರೂ ಸಾಕು. ನನ್ನ ಜೊತೆ ಮದುವೆ ಮಾಡಿಸಿ ಬಿಡುತ್ತಾರೆ. ನನ್ನ ಕಸಿನ್‌ ನ ಗಂಡನೊಟ್ಟಿಗೂ ಪಾಪ ಅವರ ಜೊತೆಗೂ ಮದುವೆ ಮಾಡಿಸಿ ಬಿಟ್ಟಿದ್ದರು.  ನನ್ನ ಕಸಿನ್ ಕರೆ ಮಾಡಿ, ನಿನ್ನ ಮದುವೆ ಮಾಡುವುದರಲ್ಲಿ ನನ್ನ ಗಂಡನನ್ನೂ ಬಿಟ್ಟಿಲ್ಲ ಮಾರಾಯ್ತಿ ಅಂದಳು. ನಾನೀಗ ಅದನ್ನು ತುಂಬಾ ಸೀರಿಯಸ್‌ ಆಗಿ ತೆಗೆದುಕೊಳ್ಳುವುದಿಲ್ಲ. ತಲೆಬಿಸಿ ಮಾಡಿಕೊಳ್ಲುವುದಿಲ್ಲ. 

35

ನಾನು ಅಪ್ಪನ-ಅಮ್ಮನ ಆ ದಿನಗಳನ್ನು ನೋಡಿದ್ದೇನೆ. ಮದುವೆ ಬೇಡ ಅನ್ನುವ ಮಟ್ಟಕ್ಕೆ ಬರುವಷ್ಟು ಯೋಚನೆಗೆ ಕರೆದುಕೊಂಡು ಹೋಗುತ್ತದೆ. ಬಾಲ್ಯದ ಕೆಲ ವಿಚಾರಗಳು, ಅಪ್ಪ-ಅಮ್ಮನ ಜೀವನ ನಮ್ಮ ಮೇಲೂ ಪರಿಣಾಮ ಬೀರಿದೆ. ಹಾಗಾಗಿ ವಯಸ್ಸು ಆಗ್ತಾ ಇದೆ ಅನ್ನುವ ಬಗ್ಗೆ ಕೂಡ ಯೋಚಿಸುತ್ತಿಲ್ಲ. ಹೀಗಾಗಿ ನಾನು ಮದುವೆಯೇ ಬೇಡ ಎಂದು ಇದ್ದವಳು. ಈಗ ಮದುವೆಯಾಗುವ ನಿರ್ಧಾರದಲ್ಲಿದ್ದೇನೆ. ನೂರಕ್ಕೆ ನೂರು ಖುಷಿ ಸುದ್ದಿ ಸಿಗಬಹುದು. ಹುಡುಗನನ್ನು ಹುಡುಕಿ ಕೊಡಿ ಎಂದಿದ್ದಾರೆ. 

45

ನನಗೆ ನನ್ನದೇ ಆದ ಜವಾಬ್ದಾರಿಗಳಿತ್ತು. ಕೆಲವು ಕನಸುಗಳಿತ್ತು. ಅದನ್ನೆಲ್ಲ ಮಾಡಿ ನಾನು ಮದುವೆ ಆಗುತ್ತೇನೆ ಎಂದು ನಿರ್ಧರಿಸಿದ್ದೆ. ಇದು ಎಲ್ಲರೂ ಚಿಂತಿಸಬೇಕಾದ ವಿಚಾರ. ಅದಕ್ಕೆ ನಾನು ಸಮಯ ತೆಗೆದುಕೊಳ್ಳುತ್ತೇನೆ. ಯಾರೋ ಹೇಳುತ್ತಾರೆ ಸಮಾಜದ ನೀತಿ ನಿಯಮಗಳ ಬಗ್ಗೆ ಇಷ್ಟೇ ವರ್ಷದಲ್ಲಿ ಮದುವೆ ಆಗಬೇಕೆಂದು. ಪ್ಲೀಸ್‌ ಆ ಥರ ಕೇಳ ಬೇಡಿ. ನೀವು ಮಾನಸಿಕವಾಗಿ ಮದುವೆ ಆಗಲು ರೆಡಿಯಾಗಿದ್ದೀರಾ. ಭಾವನಾತ್ಮಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ, ಪ್ರಾಕ್ಟಿಕಲಿ ರೆಡಿ ಇದ್ರೆ ಮಾತ್ರ ಮದುವೆ ಆಗಿ ಇಲ್ಲದಿದ್ರೆ ಆಗಲೇ ಬೇಡಿ ಎಂದಿದ್ದಾರೆ.

55

 ಒಂದು ಹೆಣ್ಣು ತನ್ನವರನ್ನು ಬಿಟ್ಟು ಮನೆ ಬಿಟ್ಟು, ನಿಮ್ಮನ್ನು ನಂಬಿ ಬರುತ್ತಾಳೆ. ನೀವು ಅವರನ್ನು ಬಿಡುವಂತೆಯೇ ಇಲ್ಲ. ಮಕ್ಕಳನ್ನು ಹುಟ್ಟಿಸಿದ ನಂತರ ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಪಾಪ ಆ ಮಕ್ಕಳು ಏನು ತಪ್ಪು ಮಾಡಿರುತ್ತಾರೆ. ಅವರ ಕಷ್ಟ, ಅವರ ಜೀವನ ಕೇಳೋದ್ಯಾರು? ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಶಕ್ತರಾಗಿದ್ದೀರಿ ಎಂದರೆ ಮಾಡಿ. ಇಲ್ಲ ಅಂತಹ ವಿಚಾರಗಳಿಗೆ ಹೋಗಲೇ ಬೇಡಿ. ಇದು ಎಲ್ಲಾ ಸಿಂಗಲ್ ಪೇರೆಂಟ್‌, ಮದುವೆ ಆಗಲು ತಯಾರಾದವರು, ಅಗದವರಿಗೆ ಎಲ್ಲಿಗೂ ಹೇಳುತ್ತಿದ್ದೇನೆ ಎಂದಿದ್ದಾರೆ.

Read more Photos on
click me!

Recommended Stories