ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಮೊದಲ ಮಹಿಳಾ ಕನ್ನಡ Rapper ಇಶಾನಿ.
ಇಶಾನಿ ಮೂಲತಃ ಮೈಸೂರಿನ ಹುಡುಗಿ ಆದರೆ ಹುಟ್ಟಿದ್ದು ದುಬೈನಲ್ಲಿ ಹಾಗೂ ಬೆಳೆದಿದ್ದು ಲಾಸ್ ಏಂಜಲಿಸ್‌ನಲ್ಲಿ. ಕನ್ನಡದಲ್ಲಿ ಅತಿ ಹೆಚ್ಚು Rap ಸಾಂಗ್‌ಗಳನ್ನು ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಇಶಾನಿ ಸುಮಾರು 26 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು 444 ಪೋಸ್ಟ್ ಹಾಕಿದ್ದಾರೆ.
ಸಾಕಷ್ಟು ಇಂಗ್ಲಿಷ್ ಮತ್ತು ಕನ್ನಡ ರ್ಯಾಪ್ ಸಾಂಗ್ ಮಾಡಿರುವ ಇಶಾನಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡು ಹುಡುಗರ ನಿದ್ರೆ ಕೆಡಿಸಿದ್ದಾರೆ.
ಮೊದಲ ವಾರ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಸ್ಪರ್ಧಿಸಲು ನಾಲಾಯಕ್ ಎಂದು ಬಿಬಿ ಮನೆಯಲ್ಲಿರುವ ಸ್ಪರ್ಧಿಗಳು ಬೋರ್ಡ್ ಹಾಕಿಬಿಟ್ಟರು.
ಹೀಗಾಗಿ ಬಿಬಿ ಮನೆಗೆ ಕಾಲಿಟ್ಟ ಮೂರೇ ದಿನದಲ್ಲಿ ಇಶಾನಿ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಇಶಾನಿ ಇದ್ದಿದ್ದು ಇದ್ದಂಗೆ ಮುಖಕ್ಕೆ ಮಾತನಾಡುವುದು ಅನೇಕರಿಗೆ ಇಷ್ಟವಿಲ್ಲ.
ಇನ್ನು ಇಶಾನಿ ಹೆಚ್ಚಿನ ಸಮಯವನ್ನು ಮೈಕಲ್ ಮತ್ತು ಸ್ನೇಹಿತ್ ಜೊತೆ ಕಳೆಯುತ್ತಾರೆ. ಹೀಗಿರುವಾಗ ನಮ್ಮ ಜೊತೆ ಮಾತನಾಡುತ್ತಿಲ್ಲ ಎಂದು ಇನ್ನಿತ್ತರರನ್ನು ನಾಮಿನೇಟ್ ಮಾಡುತ್ತಾರೆ.