ತಮ್ಮ ಮುದ್ದಾದ ನಿರೂಪಣೆಯಿಂದ ಭಾರಿ ಜನಮನ್ನಣೆ ಗಳಿಸಿರುವ ನಟಿ, ನಿರೂಪಕಿ ಅನುಶ್ರೀ (Anhor Anushree) ಸದ್ಯ ಸರಿಗಮಪ ನಿರೂಪಣೆ ಮಾಡ್ತಿದ್ದಾರೆ. ಇದೀಗ ಅದರಿಂದ ಕೊಂಚ ಬ್ರೇಕ್ ತೆಗೆದುಕೊಂಡು ಅನುಶ್ರೀ ಎರಡು ವಾರಗಳ ಹಿಂದೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದು, ಇದೀಗ ಅಲ್ಲಿನ ಸುಂದರ ಕ್ಷಣಗಳ ಫೋಟೋ ಶೇರ್ ಮಾಡಿದ್ದಾರೆ.
ತಮ್ಮ ಸ್ನೇಹಿತೆ ಜೊತೆ ಆಸ್ಟ್ರೇಲಿಯಾ ಪ್ರವಾಸ (Australia travel) ಮಾಡಿರುವ ಅನುಶ್ರೀ, ಕಳೆದ ಕೆಲವು ದಿನಗಳಿಂದ ಅಲ್ಲಿನ ವಿಡಿಯೋ, ಫೋಟೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿದ್ದಾರೆ. ಇಂದು ತಮ್ಮ ಸುಂದರ ನೆನಪುಗಳನ್ನು ಮೆಲುಕು ಹಾಕಲು ಅವರು ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ನಿಯಾನ್ ಗ್ರೀನ್ ಬಣ್ಣದ ಡ್ರೆಸ್ ಧರಿಸಿರುವ ಅನುಶ್ರೀ ಎಲೆ ಹಸಿರೇ… ಗ್ರೀನ್ ಅಲರ್ಟ್ ಎಂದು ಬರೆದು, ಆಸ್ಟ್ರೇಲಿಯಾದಲ್ಲಿ ಕಳೆದ ಮಧುರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ನೆಚ್ಚಿನ ನಿರೂಪಕಿಯ ಫೋಟೋಗಳನ್ನು ನೋಡಿ ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಕೆಲವು ಅಭಿಮಾನಿಗಳು ಅನುಶ್ರೀ ಮೇಡಂ ಇನ್ನೂ ಆಸ್ಟ್ರೇಲಿಯಾದಲ್ಲೇ ಇದ್ದೀರಾ? ಸರಿಗಮಪ ಕ್ಕೆ ಬನ್ನಿ ಬೇಗ ಎಂದು ಕೇಳಿಕೊಂಡಿದ್ದಾರೆ. ಸರಿಗಮಪ ದಲ್ಲೂ ಇದ್ದೀರಾ? ಆಸ್ಟ್ರೇಲಿಯಾ ಫೋಟೋನು ಹಾಕ್ತೀರಾ… ಎಲ್ಲಿದ್ದೀರಿ ಮೇಡಂ ಸರಿಯಾಗಿ ಹೇಳಿ ಎಂದು ಹೇಳಿದ್ದಾರೆ.
ಇನ್ನೂ ಕೆಲವರು ಅನುಶ್ರೀಯವರು ಕೇವಲ ತಮ್ಮೊಬ್ಬರದೇ ಫೋಟೋ ಹಾಕಿರೋದು ನೋಡಿ, ಯಾರು ಫೋಟೋ ಶೂಟ್ ಮಾಡಿದ್ದು ಅನ್ನೋದು ಯಕ್ಷ ಪ್ರಶ್ನೆಯಾಗಿದೆ ಎಂದು ಕೇಳಿದ್ದಾರೆ. ಅದಕ್ಕೆ ಮತ್ತೊಬ್ಬರು ಫೋಟೋ ತೆಗೆದವರು ಅನುಶ್ರೀಯವರ ಬೆಸ್ಟ್ ಫ್ರೆಂಡ್ ಎಂದು ಸಹ ಹೇಳಿದ್ದಾರೆ.
ಅನುಶ್ರೀಯವರು ಐಸ್ ಕ್ರೀಮ್ ತಿನ್ನುತ್ತಾ ಒಂದು ಬೆಂಚ್ ಮೇಲೆ ಕುಳಿತಿರುವ ಫೋಟೋ ಇದೆ. ಬೆಂಚ್ ನಲ್ಲಿ ಇನ್ಯಾರೋ ವ್ಯಕ್ತಿ ಸಹ ಕುಳಿತಿರೋದು ಕಾಣಿಸುತ್ತಿದೆ. ಅದನ್ನು ನೋಡಿದ ಅಭಿಮಾನಿಗಳು ಮೇಡಂ ನಿಮ್ಮ ಪಕ್ಕ ಇರೋರು ಪ್ರಿಯಾಂಕ ಚೋಪ್ರಾ (Priyanka Chopra) ಗಂಡನ ತರ ಕಾಣಿಸ್ತಿದ್ದಾರೆ, ಅವರೇನಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅನುಶ್ರೀ ಆದ್ರೆ ಅವರಲ್ಲ ಬಿಡಿ ಎಂದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಸಖತ್ತಾಗಿ ಎಂಜಾಯ್ ಮಾಡಿರುವ ಅನುಶ್ರೀ ಅಲ್ಲಿರುವ ಆಸ್ಟ್ರೇಲಿಯಾ ಸ್ಕೈ ಪಾಯಿಂಟ್, ಬೀಚ್‌ಗಳು ಹಾಗೂ ಪ್ರಾಣಿ ಸಂಗ್ರಹಾಲಯಕ್ಕೆ ಹಾಗೂ ಇತರ ಜನಪ್ರಿಯ ತಾಣಗಳಿಗೂ ಭೇಟಿ ನೀಡಿದ್ದಾರೆ. ಅಲ್ಲದೇ ಬ್ರಿಸ್ಬೇನ್‌ನ ಉತ್ತರದ ಸನ್‌ಶೈನ್ ಕೋಸ್ಟ್ ತೀರದಲ್ಲಿ ತಮ್ಮ ಫೇವರಿಟ್ ನಟ ಪುನೀತ್ ರಾಜ್ ಕುಮಾರ್ ಹೆಸರು ಅಪ್ಪು ಎಂದು ಬರೆದುಕೊಂಡಿದ್ದರು.