ನನಗೂ ಮದುವೆಯಾಗೊ ಆಸೆಯಾಗಿದೆ ಎಂದ ಅನುಶ್ರೀ; ಹಸೆಮಣೆ ಏರಲು ಸಜ್ಜಾದ್ರಾ ಖ್ಯಾತ ನಿರೂಪಕಿ?

Published : Jun 14, 2022, 01:57 PM IST

ಅನುಶ್ರೀ  ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಿರೂಪಕಿ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಬಹುತೇಕ ರಿಯಾಲಿಟಿ ಶೋಗಳಿಗೆ ಅನುಶ್ರೀನೇ ಆಂಕರ್. ತನ್ನ ವಿಭಿನ್ನ ಶೈಲಿಯ ನಿರೂಪಣೆ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿದ್ದಾರೆ ಅನುಶ್ರೀ ಇದೀಗ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. 

PREV
17
ನನಗೂ ಮದುವೆಯಾಗೊ ಆಸೆಯಾಗಿದೆ ಎಂದ ಅನುಶ್ರೀ; ಹಸೆಮಣೆ ಏರಲು ಸಜ್ಜಾದ್ರಾ ಖ್ಯಾತ ನಿರೂಪಕಿ?

ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ ಅನುಶ್ರೀ ಮತ್ತೆ ಸುದ್ದಿಯಲ್ಲಿದ್ದಾರೆ. ಅನುಶ್ರೀ ಬಾರಿ ಸುದ್ದಿಯಾಗಿರುವುದು ಮದುವೆ ವಿಚಾರಕ್ಕೆ. ಹೌದು, ಮದುವೆಯಾಗಲ್ಲ ಎನ್ನುತ್ತಿದ್ದ ಅನುಶ್ರೀ ಇದೀಗ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. 

27

ಅನುಶ್ರೀ  ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಿರೂಪಕಿ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಬಹುತೇಕ ರಿಯಾಲಿಟಿ ಶೋಗಳಿಗೆ ಅನುಶ್ರೀನೇ ಆಂಕರ್. ತನ್ನ ವಿಭಿನ್ನ ಶೈಲಿಯ ನಿರೂಪಣೆ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿದ್ದಾರೆ ಅನುಶ್ರೀ. 

37

ಸದ್ಯ ಅನುಶ್ರೀ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ.1 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕಾರ್ಯಕ್ರಮದಲ್ಲಿ ಅನುಶ್ರೀ ಮದುವೆ ಬಗ್ಗೆ ಮಾತನಾಡಿದ್ದಾರೆ. ಸುಂದರ ಜೋಡಿಗಳನ್ನು ನೋಡಿದ ಅನುಶ್ರೀ ತನಗೂ ಮದುವೆಯಾಗೋ ಆಸೆಯಾಗಿದೆ ಎಂದಿದ್ದಾರೆ. 

47

ಅನುಶ್ರೀ ಮದುವೆಯಾವಾಗ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಲೆ ಇರುತ್ತಾರೆ. ಅನೇಕ ಬಾರಿ ಅನುಶ್ರೀ ಮದುವೆ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದು ಮದುವೆಯಾಗಲ್ಲ ಎಂದು ಹೇಳುತ್ತಿದ್ದರು. ಆದರೀಗ ಮದುವೆಯಾಗುವ ಆಸೆ ವ್ಯಕ್ತ ಪಡಿಸಿದ ಅನುಶ್ರೀ ಮಾತು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 

57

ಕಾರ್ಯಕ್ರಮದಲ್ಲಿ ರಿಯಲ್ ಜೋಡಿಗಳನ್ನು ನೋಡಿದ ಅನುಶ್ರೀ ನನಗೂ ಮದುವೆಯಾಗಬೇಕು ಎಂಬ ಆಸೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಅನುಶ್ರೀ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

67

ಅನುಶ್ರೀ ಅನೇಕ ಜನಪ್ರಿಯ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಸರಿಗಮಪ ಶೋ ಅನುಶ್ರೀಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಬಳಿಕ ಬೇಡಿಕೆ ಹೆಚ್ಚಿಸಿಕೊಂಡ ಅನುಶ್ರೀ ಯಾವುದೇ ರಿಯಾಲಿಟಿ ಶೋ, ಸಿನಿಮಾ ಈವೆಂಟ್ ಎಲ್ಲಾ ಕಡೆ ಅನುಶ್ರೀನೇ ನಿರೂಪಕಿಯಾಗಬೇಕೆಂದು ಅಭಿಮಾನಿಗಳು ಬಯಸುತ್ತಾರೆ.     

77

ನಿರೂಪಣೆ ಜೊತೆಗೆ ಅನುಶ್ರೀ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಸಿನಿಮಾದಲ್ಲಿ ಅನುಶ್ರೀಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಬಿಗ್ ಬಾಸ್ ಶೋನಲ್ಲೂ ಅನುಶ್ರೀ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ.1ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುಶ್ರೀ ಯಾವಾಗ ಮದುವೆ ಯಾಗ್ತಾರೆ, ಹುಡುಗ ಯಾರು ಎಂದು ಅನುಶ್ರೀನೆ ಬಹಿರಂಗ ಪಡಿಸಬೇಕಿದೆ.    

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories