ಜನರೊಳಗೆ ಮಾನಭಂಗ ಮಾಡಿದವರಿಗೆ ಒಳ್ಳೆಯದಾಗಲಿ: ದಿಢೀರ್​ ಲೈವ್​ಗೆ ಬಂದ Anchor Anushree ಹೇಳಿದ್ದೇನು?

Published : Jan 03, 2026, 08:06 PM IST

ತಮ್ಮನ್ನು ಟ್ರೋಲ್ ಮಾಡಿದವರಿಗೆ ನಿರೂಪಕಿ ಅನುಶ್ರೀ ಖಡಕ್ ಉತ್ತರ ನೀಡಿದ್ದಾರೆ. ತಿಮ್ಮಪ್ಪನ ದರ್ಶನದ ವೇಳೆ ಡಾ. ರಾಜ್‌ಕುಮಾರ್ ಕಂಡಿದ್ದರು ಎಂಬ ಹೇಳಿಕೆಗೆ ಟ್ರೋಲ್ ಆಗಿದ್ದ ಅವರು, ಕನಕದಾಸರ ಪದ್ಯವನ್ನು ಹೇಳುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

PREV
15
ಆ್ಯಂಕರ್​ ಅನುಶ್ರೀ ಲೈವ್​

ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ

ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ

ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ

ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ

ಜನರೊಳಗೆ ಮಾನಭಂಗ ಮಾಡಿದವರಿಗೆ

ಜೇನುತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ

ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ

ಮಹಾನುಭಾವ ಮುಕ್ತಿಯ ಕೊಡುವ

ನೆಲೆಯಾದಿಕೇಶವ...

ಎನ್ನುತ್ತಾ ಆ್ಯಂಕರ್​ ಅನುಶ್ರೀ (Anchor Anushree) ಕನಕದಾಸರ ಪದ್ಯವನ್ನು ಹೇಳುವ ಮೂಲಕ ತಮ್ಮನ್ನು ಟ್ರೋಲ್​ ಮಾಡುವವರಿಗೆ ಖಡಕ್​ ಉತ್ತರ ಕೊಟ್ಟಿದ್ದಾರೆ.

25
ಎಲ್ಲರಿಗೂ ಒಳ್ಳೆಯದಾಗಲಿ

ಯಾಕೋ ಗೊತ್ತಿಲ್ಲ ಕನಕದಾಸರ ಈ ಪದ ನನಗೆ ನೆನಪಾಯ್ತು ಎನ್ನುತ್ತಾ 2026 ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ. ಒಳ್ಳೆಯದನ್ನೇ ಮಾತನಾಡೋಣ, ಒಳ್ಳೆಯದ್ದನ್ನೇ ಯೋಚಿಸೋಣ, ಒಳ್ಳೆಯದ್ದನ್ನೇ ಮಾಡೋಣ, ಒಳ್ಳೆಯದನ್ನೇ ಬಯಸೋಣ. ನಮಸ್ಕಾರ ಎನ್ನುವ ಮೂಲಕ ತಾಗಿಸಿಕೊಳ್ಳುವವರಿಗೆ ತಾಗುವಂಥ ರಿಪ್ಲೈ ಮಾಡಿದ್ದಾರೆ.

35
ಆಗಿದ್ದೇನು?

ಅಷ್ಟಕ್ಕೂ, ಒಬ್ಬರು ಸ್ವಪ್ರಯತ್ನದಿಂದ ಮುಂದಕ್ಕೆ ಹೋಗುತ್ತಿದ್ದಾರೆ ಎಂದರೆ, ಅವರ ಕಾಲೆಳೆಯುವ ದೊಡ್ಡ ವರ್ಗವೇ ಇರುತ್ತದೆ. ಅದೇ ರೀತಿ ಆ್ಯಂಕರ್​ ಅನುಶ್ರೀ (Anchor Anushree) ಬಗ್ಗೆ ಟ್ರೋಲ್​ ಮಾಡುವವರಿಗೇನೂ ಕಡಿಮೆ ಇಲ್ಲ. ನೋಡುವಷ್ಟು ನೋಡಿದ್ದ ಅನುಶ್ರೀ ಕೆಲ ದಿನಗಳ ಹಿಂದೆ ಖಡಕ್​ ಉತ್ತರ ನೀಡಿದ್ದರು. ರಾಯಚೂರ್ ಮೀಮ್ಸ್ ಬ್ರೋ ಎನ್ನುವ ಟ್ರೋಲ್ ಪೇಜ್ ಒಂದು ಅನುಶ್ರೀಯವರ ಎರಡು ವಿಡಿಯೋವನ್ನು ಕಂಬೈನ್ ಮಾಡಿ ಹಾಕಿದ್ದು, ಅದಕ್ಕೆ ಕ್ಯಾಪ್ಶನ್ ಆಗಿ ಆಸ್ಕರ್ ಗೋಸ್ ಟು ಅನುಶ್ರೀ ಎಂದಿದ್ದಾರೆ. ಅಷ್ಟೇ ಅಲ್ಲದೇ ಇಫ್ ಬಕೆಟ್ ಹಾವ್ ಮೌತ್, ವಾರೆ ಮೇರಿ ಲಡ್ಕಿ ಎಂದು ಕೂಡ ವಿಡಿಯೋದಲ್ಲಿ ಹಾಕಿದ್ದರು.

45
ತಿಮ್ಮಪ್ಪನ ಬಗ್ಗೆ

ಇತ್ತೀಚೆಗೆ ನಿರೂಪಕಿ ಅನುಶ್ರೀ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯವರ 45 ಚಿತ್ರದ ಇಂಟರ್ವ್ಯೂ ಮಾಡುತ್ತಾ, ನನಗೆ ತಿರುಪತಿಗೆ ಮೊದಲ ಬಾರಿ ಹೋದಾಗ, ತಿಮ್ಮಪ್ಪ ಕಾಣಿಸಲೇ ಇಲ್ಲ, ಬದಲಾಗಿ ಶ್ರೀನಿವಾಸ ಕಲ್ಯಾಣದ ಡಾ ರಾಜಕುಮಾರ್ ಅವರೇ ಕಾಣಿಸಿದ್ದರು ಎಂದಿದ್ದರು. ಅದರ ಜೊತೆಗೆ ಮತ್ತೊಂದು ಹಳೆಯ ವಿಡಿಯೋವನ್ನು ಸಹ ಟ್ರೋಲ್ ಪೇಜ್ ಶೇರ್ ಮಾಡಿದ್ದು, ಅದರಲ್ಲಿ ಅನುಶ್ರೀ ಚಿರಂಜೀವಿ ಅವರ ಜೊತೆ ವೇದಿಕೆಯಲ್ಲಿ ಮಾತನಾಡುತ್ತಾ, ನಾನು ಎಲ್ಲೆ ಹೋದರು ಮಂಜುನಾಥನ ದರ್ಶನ ಮಾಡುವಾಗ ಕಾಣುವಂತಹ ಮುಖ ಚಿರಂಜೀವಿ ಅವರದೇ ಎಂದು ಹೇಳಿದ್ದರು.

55
ಏನಿವಾಗ?

ಈ ಟ್ರೋಲ್ ವಿಡಿಯೋಗೆ ಅಷ್ಟೇ ಖಡಕ್ ಆಗಿ ಉತ್ತರಿಸಿದ್ದ ಆ್ಯಂಕರ್​ ಅನುಶ್ರೀ ಹೌದು ಏನಿವಾಗ, ಓಬವ್ವ ಅಂದಾಗ ಜಯಂತಿ ಅಮ್ಮ ನೆನಪಾಗ್ತಾರೆ.. ಕಿತ್ತೂರು ಚೆನ್ನಮ್ಮ ಅಂದಾಗ ಸರೋಜಮ್ಮ ನೆನಪಾಗ್ತಾರೆ… ಶ್ರೀನಿವಾಸ ಎಂದಾಗ ಅಪ್ಪಾಜಿ.. ಮಂಜುನಾಥ ಎಂದಾಗ ಚಿರಂಜೀವಿ ಸರ್… ಅದು ಹೆಮ್ಮೆ ಪಡೋ ಅಂತ ವಿಷಯ … ಕಾಮಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅನ್ನೋ ಹಾಗೆ… ನಿಮ್ಮ ಬುದ್ಧಿವಂತಿಕೆಗೆ ಹಾಗೆ ಕಾಣೋದು ಎಂದು ಉತ್ತರಿಸಿದ್ದರು. ಈಗ ಮತ್ತೊಮ್ಮೆ ಕನಕದಾಸರ ಪದ್ಯ ಹೇಳುವ ಮೂಲಕ ಖಡಕ್​ ತಿರುಗೇಟು ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories