ಖ್ಯಾತ ನಿರೂಪಕಿ ಅನುಶ್ರೀ, ತಮ್ಮ ಜರ್ನಿ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಟ್ರೋಲ್ ಮಾಡುವವರ ಬಗ್ಗೆ ಮಾತನಾಡಿದ್ದಾರೆ. ಅಪ್ಪು ತಮಗೆ ಕಳುಹಿಸಿದ್ದ ವೈಯಕ್ತಿಕ ಮೆಸೇಜ್ ತೋರಿಸುವ ಮೂಲಕ, ಟ್ರೋಲಿಗರಿಗೆ 'ಗಿಲ್ಲಿ' ಸ್ಟೈಲ್‌ನಲ್ಲಿ ಖಡಕ್ ಉತ್ತರ ನೀಡಿದ್ದಾರೆ.
ಅತ್ಯಂತ ಕಷ್ಟದಿಂದ ಮೇಲಕ್ಕೆ ಬಂದು, ಇಂದು ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು ಆ್ಯಂಕರ್ ಅನುಶ್ರೀ (Anchor Anushree). ಇವರು ನಿರೂಪಣೆಗೆ ನಿಂತರು ಎಂದರೆ ಅಲ್ಲಿ ಹಾಸ್ಯಗಳ ಸುರಿಮಳೆ ಇರುತ್ತದೆ, ಎಷ್ಟು ಮಾತನಾಡಿದರೂ ಮತ್ತಷ್ಟು ಮಾತು ಕೇಳಬೇಕು ಎನ್ನುವ ವಾತಾವರಣವೂ ನಿರ್ಮಾಣವಾಗಿರುತ್ತದೆ. ಇದೇ ಕಾರಣಕ್ಕೆ ಅನುಶ್ರೀ ಅವರಿಗೆ ಅಷ್ಟೊಂದು ಡಿಮಾಂಡ್.
26
ಜರ್ನಿಯ ಮಾತು
ಸದ್ಯ ಅನುಶ್ರೀ ಅವರು ರೋಷನ್ ಜೊತೆ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇದೇ ವೇಳೆ ತಮ್ಮ ಸಂಪೂರ್ಣ ಜರ್ನಿ ಹಾಗೂ ಫೇಮಸ್ ಆಗುತ್ತಿದ್ದಂತೆಯೇ ಟ್ರೋಲಿಗರಿಂದ ಆಗುತ್ತಿರುವ ಮಾನಸಿಕ ಹಿಂಸೆಗಳ ಬಗ್ಗೆಯೂ ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ ಅನುಶ್ರೀ.
36
ಅಪ್ಪು ದೊಡ್ಡ ಫ್ಯಾನ್
ಅನುಶ್ರೀ ಅವರನ್ನು ನೋಡಿರುವವರಿಗೆ ಇದಾಗಲೇ ಅವರು ಪುನೀತ್ ರಾಜ್‌ಕುಮಾರ್ ಅವರ ಅದೆಷ್ಟು ದೊಡ್ಡ ಅಭಿಮಾನಿ ಎನ್ನುವುದು ಗೊತ್ತಿದೆ. ಇದಾಗಲೇ ಹಲವಾರು ಬಾರಿ ಅವರು ತಮ್ಮ ಅಭಿಮಾನದ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಫೋಟೋ ಇಟ್ಟು ಪೂಜಿಸುತ್ತಾರೆ. ಅಪ್ಪು ನಿಧನದ ಬಳಿಕ ಅವರಿಗಾಗಿ ಕಣ್ಣೀರು ಹಾಕಿದ್ದಾರೆ.
ಆದರೆ, ಪುನೀತ್ ರಾಜ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅವರ ಹೆಸರು ಹೇಳಿಕೊಂಡು ದುಡ್ಡು ಮಾಡುತ್ತಾರೆ. ಅವರದ್ದು ಮೊಸಳೆ ಕಣ್ಣೀರು ಹೀಗೆ ಏನೇನೋ ಬಾಯಿಗೆ ಬಂದಂಥ ಕಮೆಂಟ್ಸ್ ಮಾಡುತ್ತಲೇ ಇದ್ದಾರೆ. ಅದಕ್ಕೆ ಈಗ ಅನುಶ್ರೀ ಅವರು ಅಪ್ಪು ಅವರ ಮೆಸೇಜ್ ತೋರಿಸುತ್ತಾ, ಗಿಲ್ಲಿ ಸ್ಟೈಲ್‌ನಲ್ಲಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
56
ಮೆಸೇಜ್‌ನಲ್ಲಿ ಏನಿದೆ?
ಪುನೀತ್ ರಾಜ್ ಅನುಶ್ರೀ ಅವರಿಗೆ ಕಳಹಿಸಿದ್ದ ಮೆಸೇಜ್‌ನಲ್ಲಿ, ‘ನೀವು ತುಂಬಾನೇ ಸ್ವೀಟ್. ನಿಮ್ಮಂಥ ಅಭಿಮಾನಿ ಹೊಂದಲು ನಿಜಕ್ಕೂ ಖುಷಿ ಆಗುತ್ತದೆ. ದೇವರು ಒಳ್ಳೆಯದು ಮಾಡಲಿ’ ಎಂದಿದ್ದಾರೆ.
66
ಗಿಲ್ಲಿ ಸ್ಟೈಲ್‌ನಲ್ಲಿ...
ಅದನ್ನು ತೋರಿಸಿದ ಅನುಶ್ರೀ, ‘ನಾನು ಯಾವ ರೀತಿಯ ಫ್ಯಾನ್ ಎನ್ನೋದು ಅವರಿಗೆ ಗೊತ್ತಿತ್ತು. ಹೀಗಿರುವಾಗ ಇಂಥವರಿಗೆ ಯಾಕೆ ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ. ಬಳಿಕ ಗಿಲ್ಲಿ ಸ್ಟೈಲ್ ಅಲ್ಲಿ ಹೇಳ್ತೀನಿ, ಜಸ್ಟ್ ಲೀವ್ ಇಟ್’ ಎಂದು action ಮಾಡಿ ತೋರಿಸಿದ್ದಾರೆ ನಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.