ಕನ್ನಡ ಕಿರುತೆರೆಯ ಫೆವರಿಟ್ ನಟಿ ಅಮೂಲ್ಯ ಗೌಡ ಇತ್ತೀಚೆಗೆ ವಿದೇಶ ಪ್ರವಾಸ ಮಾಡಿದ್ದು, ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಇದಕ್ಕೆ ಅವರ ಸಾಮಾಜಿಕ ಜಾಲತಾಣವೇ (social media) ಸಾಕ್ಷಿ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯರ ಸಖತ್ ಆಗಿರೋ ಫೋಟೋಗಳು ವೈರಲ್ ಆಗುತ್ತಿವೆ.
ಜನಪ್ರಿಯ ಕನ್ನಡ ಧಾರಾವಾಹಿಯಲ್ಲಿ ಕಮಲಿ ಪಾತ್ರದ ಮೂಲಕ ಹೃದಯ ಗೆದ್ದ ಅಮೂಲ್ಯ, ಬಿಗ್ ಬಾಸ್ ಕನ್ನಡ 9 ರಲ್ಲಿ ಭಾಗವಹಿಸಿದ್ದರು. ಈ ಬ್ಯೂಟಿಫುಲ್ ನಟಿ ತನ್ನ ಇನ್ಸ್ಟಾಗ್ರಾಮ್ (Instagram) ಮೂಲಕ ತನ್ನ ಅಭಿಮಾನಿಗಳಿಗಾಗಿ ಸದಾ ಒಂದಲ್ಲ ಒಂದು ಫೋಟೋಸ್ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಅಮೂಲ್ಯ (Amulya Gowda) ಕೂಡ ಟ್ರಾವೆಲ್ ಪ್ರೇಮಿಯಾಗಿದ್ದು, ಆಗಾಗ್ಗೆ ಸೊಗಸಾದ ಸ್ಥಳಗಳಲ್ಲಿ ರಜಾದಿನಗಳಿಗೆ ಹೋಗುತ್ತಾರೆ. ಇತ್ತೀಚೆಗೆ, ನಟಿ ಒಂದು ಪ್ರವಾಸವನ್ನು ಕೈಗೊಂಡಿದ್ದಾರೆ. ಅವರು ತನ್ನ ಗೆಳತಿಯರ ಜೊತೆ ಥೈಲ್ಯಾಂಡ್ ಗೆ ತೆರಳಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡಿದ್ದಾರೆ.
ಅಮೂಲ್ಯ ತನ್ನ ಥೈಲ್ಯಾಂಡ್ ರಜಾದಿನಗಳ ಸರಣಿ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಸಖತ್ತಾಗಿ ಎಂಜಾಯ್ ಮಾಡಿರೋದು ಕಂಡುಬಂದಿದೆ. ಅಮೂಲ್ಯರ ಕೆಲವು ಅದ್ಭುತ ಚಿತ್ರಗಳು ಇಲ್ಲಿವೆ, ಅದು ಖಂಡಿತವಾಗಿಯೂ ನಿಮಗೂ ಟ್ರಾವೆಲ್ ಮಾಡೋ ಆಸೆ ಹುಟ್ಟಿಸೋದು ಖಂಡಿತಾ.
'ಸ್ವಾತಿ ಮುತ್ತು' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಅಮೂಲ್ಯ, ಬಳಿಕ ಕಮಲಿ ಧಾರಾವಾಹಿಯಲ್ಲಿ ಡಬಲ್ ರೋಲ್ ನಲ್ಲಿ ಗಮನ ಸೆಳೆದರು. ಬಳಿಕ ಬಿಗ್ ಬಾಸ್ ನಲ್ಲೂ ನಟಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ನಟ ರಾಕೇಶ್ ಜೊತೆ ಅಮೂಲ್ಯ ಹೆಸರು ತಳುಕು ಹಾಕಿತ್ತು.
ಕಮಲಿ ಸೀರಿಯಲ್ ನಲ್ಲಿ (Kamali serial) ಅಪ್ಪಟ ಗ್ರಾಮೀಣ ಹುಡುಗಿಯಾಗಿ ಅಮೂಲ್ಯ ಅದ್ಭುತ ಅಭಿನಯ ನೀಡಿದ್ದರು. ಸೀರಿಯಲ್ ನಲ್ಲಿ ಅವರ ಮುಗ್ಧತೆ, ಭಾಷೆ, ಡ್ರೆಸ್ಸಿಂಗ್ ನಿಂದಾಗಿ ಇವರು ಜನ ಮನ ಗೆದ್ದಿದ್ದರು. ಆದರೆ ರಿಯಲ್ ಲೈಫ್ ನಲ್ಲಿ ಈ ಬೆಡಗಿ ಸಖತ್ ಹಾಟ್ ಆಗಿದ್ದಾರೆ.
ಸದಾ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸುವ ಈ ಚೆಲುವೆ, ಆವಾಗವಾಗ ತಮ್ಮ ಸ್ನೇಹಿತರ ಜೊತೆ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ಸೋಶಿಯಲ್ ಮೀಡೀಯಾದಲ್ಲಿ ಸದಾ ಆಕ್ಟೀವ್ ಆಗಿರುವ ಈ ನಟಿ, ತಮ್ಮ ಮುದ್ದಾದ ಫೋಟೊಗಳ ಮೂಲಕವೇ ಜನರ ಜೊತೆ ಸದಾ ಕನೆಕ್ಟ್ ಆಗಿರುತ್ತಾರೆ.