ಮಗಳ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗ್ಯಲಕ್ಷ್ಮೀ ಖ್ಯಾತಿಯ ನಟಿ ಗೌತಮಿ ಗೌಡ

Published : Oct 07, 2024, 10:52 AM ISTUpdated : Oct 07, 2024, 11:00 AM IST

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈ ಮೊದಲು ಶ್ರೇಷ್ಠಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಗೌತಮಿ ಗೌಡ ತಮ್ಮ ಮಗಳ ಮೊದಲ ವರ್ಷದ ಸಂಭ್ರಮದಲ್ಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡೋ ಮೂಲಕ ಮಗಳ ಮುಖ ರಿವೀಲ್ ಮಾಡಿದ್ದಾರೆ.   

PREV
17
ಮಗಳ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗ್ಯಲಕ್ಷ್ಮೀ ಖ್ಯಾತಿಯ ನಟಿ ಗೌತಮಿ ಗೌಡ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ (Bhagyalakshmi serial) ಕಾವ್ಯಾ ಗೌಡಕ್ಕಿಂತ ಮೊದಲು ಶ್ರೇಷ್ಠಾ ಪಾತ್ರಕ್ಕೆ ಜೀವ ತುಂಬಿದ ನಟಿ ಗೌತಮಿ ಗೌಡ. ಕಾರಣಾಂತರಗಳಿಂದ ಗೌತಮಿ ಸೀರಿಯಲ್ ನಿಂದ ಹೊರ ನಡೆದಿದ್ದರು. 
 

27

ನಂತರ ಗೌತಮಿ (Gowthami Gowda) ತಾವು ಗರ್ಭಿಣಿಯಾಗಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದರು. ಬಳಿಕ, ಮಗುವಾಗಿ, ಇದೀಗ ಮಗುವಿಗೆ ಒಂದು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. 
 

37

ಗೌತಮಿ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಗಳ ಒಂದು ವರ್ಷದ ಬರ್ತ್ ಡೇ ಫೋಟೊಗಳನ್ನು ಹಾಗೂ ಮುದ್ದಾದ ಫ್ಯಾಮಿಲಿ ಫೋಟೊಗಳನ್ನು, ವಿಡೀಯೋಗಳನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ಮಗಳಿಗಾಗಿ ಮುದ್ದಾದ ಸಾಲುಗಳನ್ನು ಸಹ ಬರೆದುಕೊಂಡಿದ್ದಾರೆ. 
 

47

ತಮ್ಮ ಮುದ್ದಿನ ಮಗಳಿಗೆ ವಿಯಾನಾ (Viyana) ಎಂದು ಗೌತಮಿ ಗೌಡ - ಜಾರ್ಜ್ ಕ್ರಿಸ್ಟಿ ದಂಪತಿ ನಾಮಕರಣ ಮಾಡಿದ್ದಾರೆ. ಜೊತೆಗೆ ನೀನು ನಮ್ಮನ್ನು ಪೂರ್ಣಗೊಳಿಸುತ್ತಿ, ನಮ್ಮ ಜೀವನದಲ್ಲಿ ಬೆಳಕು ತಂದಿರೋದಕ್ಕೆ, ನಮ್ಮ ಮನೆಯಲ್ಲಿ ಸಂತೋಷವನ್ನು ತುಂಬಿರೋದಕ್ಕೆ ಥ್ಯಾಂಕ್ಯೂ ವಿಯಾನಾ ಎಂದು ಬರೆದುಕೊಂಡಿದ್ದಾರೆ. 
 

57

ಗೌತಮಿ ಗೌಡ ಮುದ್ದು ಮಗಳಿಗೆ ಅಭಿಮಾನಿಗಳು ಸಹ ಪ್ರೀತಿಯಿಂದ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ, ಜೊತೆಗೆ ಅಪ್ಪನ ಝೆರಾಕ್ಸ್ ಕಾಪಿ ತರ ಇದ್ದಾಳೆ ಎಂದಿದ್ದಾರೆ. ಗೌತಮಿ ಮಗಳು ಕೇಕ್ ತಿನ್ನುವ ಫೋಟೊಗಳನ್ನು, ಮತ್ತೊಂದಿಷ್ಟು ಹ್ಯಾಪಿ ಫ್ಯಾಮಿಲಿ ಪಿಕ್ಚರ್ ಗಳನ್ನು ಸಹ ಶೇರ್ ಮಾಡಿದ್ದಾರೆ. 
 

67

ಸದ್ಯ ನಟನೆಯಿಂದ ದೂರ ಇರುವ ಗೌತಮಿ ಗೌರ್ಡ ಹೆಚ್ಚಾಗಿ ತಮ್ಮ ಗಂಡನ ಜೊತೆ ದೇಶ ವಿದೇಶ ಸುತ್ತುತ್ತಾ ಎಂಜಾಯ್ ಮಾಡಿ, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಜೊತೆಗೆ ಹಬ್ಬಗಳ ವಿಶೇಷ ವಿಡಿಯೋ, ಟ್ರಾವೆಲ್ ವಿಡಿಯೋ ಮಾಡಿ ವಿವಿಧ ರೀತಿಯ ಮಾಹಿತಿ ನೀಡುತ್ತಲೇ ಇರುತ್ತಾರೆ. 
 

77

ಇನ್ನು ಗೌತಮಿ ಕರಿಯರ್ ಬಗ್ಗೆ ಹೇಳೋದಾದ್ರೆ, ಬೃಂದಾವನ, ಎಲ್ಲರಂತಲ್ಲ ನಮ್ ರಾಜಿ, ಚಿ. ಸೌ. ಸಾವಿತ್ರಿ, ತಾಯವ್ವ, ಚಲಿಸುವ ಮೋಡಗಳು, ಅಮ್ಮ ನಿನಗಾಗಿ ಮೊದಲಾದ ಸೀರಿಯಲ್ ಗಳು, ಮಳೆ, ಜೆಸ್ಸಿ, ಕೋಟಿಗೊಬ್ಬ 2, (Kotigobba 2) ಅಂಬಿ ನಿಂಗ್ ವಯಸ್ಸಾಯ್ತೋ, ಬಾನ ದಾರಿಯಲ್ಲಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 
 

Read more Photos on
click me!

Recommended Stories