ಡೀಪ್ ನೆಕ್ ಟಾಪ್ ಧರಿಸಿ ಮಂದಹಾಸ ಬೀರಿದ ಸಾರಾ, ಇವ್ರನ್ನ ನೋಡೋದೆ ಕಣ್ಣಿಗೆ ಹಬ್ಬವೆಂದ ಫ್ಯಾನ್!

First Published | Aug 6, 2024, 3:45 PM IST

ಅಮೃತಧಾರೆ ಧಾರಾವಾಹಿಯ ನಟಿ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಕ್ಯೂಟ್ ಆಂಡ್ ಹಾಟ್ ಆಗಿರುವ ಫೋಟೋಗಳನ್ನ ಹಂಚಿಕೊಂಡಿದ್ದಾರೆ. 
 

ಕನ್ನಡ ಕಿರುತೆರೆಯಲ್ಲಿ ಬೋಲ್ಡ್ ಮತ್ತು ಸ್ಟೈಲಿಶ್ ನಟಿಯರ ಲಿಸ್ಟ್ ತುಂಬಾ ಹೆಚ್ಚಾಗಿದೆ. ಅವರಲ್ಲಿ ಒಬ್ರು ನಟಿ ಸಾರಾ ಅಣ್ಣಯ್ಯ (Sara Annaiah). ಈ ನಟಿ ಯಾವಾಗ್ಲೂ ತಮ್ಮ ಬೋಲ್ಡ್ ಲುಕ್‌ನಿಂದಾಗಿ ಸುದ್ದಿಯಲ್ಲಿರ್ತಾರೆ.
 

ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಮಹಿಮಾ ಪಾತ್ರದ ಮೂಲಕ ಮಿಂಚುತ್ತಿರುವ ನಟಿ ಸಾರಾ ಅಣ್ಣಯ್ಯ, ಸೀರಿಯಲ್‌ನಲ್ಲಿ ಎಷ್ಟೊಂದು ಸ್ಟೈಲಿಶ್ ಆಗಿದ್ದಾರೋ, ನಿಜ ಜೀವನದಲ್ಲಿ ಸಹ ಸಖತ್ ಬೋಲ್ಡ್ ಮತ್ತು ಸ್ಟೈಲಿಶ್ ನಟಿ. 
 

Tap to resize

ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ನಟಿ ಸಾರಾ, ಹೆಚ್ಚಾಗಿ ಸೀರೆಯುಟ್ಟು, ಮಾಡರ್ನ್ ಡ್ರೆಸ್, ತುಂಡುಡುಗೆಗಳಲ್ಲಿ, ಬಿಕಿನಿಯಲ್ಲೂ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 
 

ಇದೀಗ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿರುವ ಎಲ್ಲಾ ಫೋಟೋಗಳನ್ನ ಡಿಲಿಟ್ ಮಾಡಿರುವ ನಟಿ ಸಾರಾ, ಹೊಸದಾಗಿ ಒಂದಷ್ಟು ಫೋಟೋ ಸೀರೀಸ್ ಗಳನ್ನ ಶೇರ್ ಮಾಡಿದ್ದು, ಫ್ಯಾನ್ಸ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 
 

ಸಾರಾ ಪಿಂಕ್ ಬಣ್ಣದ ಡೀಪ್ ಆಗಿರುವ ಸ್ಕ್ವೇರ್ ನೆಕ್ ಟಾಪ್ ಧರಿಸಿದ್ದು, ನೀಲಿ ಬಣ್ಣದ ಡೆನಿಮ್ ಧರಿಸಿದ್ದಾರೆ. ಕ್ಲೀವೇಜ್ ಕಾಣಿಸುವಂತ ಟಾಪ್ ಧರಿಸಿ ನಟಿ ತುಂಬಾನೆ ಮುದ್ದಾಗಿ ಜೊತೆಗೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 
 

ನಟಿಯ ಫೋಟೋಗಳನ್ನು ಜನರು ಇಷ್ಟಪಟ್ಟಿದ್ದು, ಬ್ಯೂಟಿಫುಲ್ ಪಿಂಕ್ ಎಂದಿದ್ದಾರೆ, ಇನ್ನೂ ಕೆಲವರು ಡಬಲ್ ಡೋಸ್ ಆಫ್ ಗ್ಲಾಮರ್, ಈಕೆಯನ್ನ ನೋಡೋದೆ ಕಣ್ಣಿಗೆ ಹಬ್ಬ ಎಂದಿದ್ದಾರೆ. ಫೋಟೋ ಸಖತ್ತಾಗಿದೆ, ನೀವು ಬೆಸ್ಟ್ ಮಾಡೆಲ್ ಎಂದಿದ್ದಾರೆ. 
 

ಸಾರಾ ಅಣ್ಣಯ್ಯ ನಗುವಿಗೂ ಮನಸೋತಿರುವ ಅಭಿಮಾನಿಗಳು, ಮಗುವಿನಂತಹ ನಗುವಿನ ಒಡತಿ ಎಂದಿದ್ದಾರೆ. ಪ್ರಕೃತಿ ಮಧ್ಯೆದಲ್ಲಿ ಎಲ್ಲೋ ಫೋಟೋ ತೆಗೆಸಿಕೊಂಡಿದ್ದು, ಒಂದಷ್ಟು ಸೆಲ್ಫಿಗಳನ್ನು ಸಹ ನಟಿ ಶೇರ್ ಮಾಡಿದ್ದು, ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 
 

ಕನ್ನಡತಿ (Kannadathi) ಸೀರಿಯಲ್‌ನಲ್ಲಿ ಸೈಕೋ ವರೂಧಿನಿ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಸಾರಾ ಅಣ್ಣಯ್ಯ, ಮೊದಲ ಸೀರಿಯಲ್ ಮೂಲಕವೇ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ನಮ್ಮ ಲಚ್ಚಿ ಸೀರಿಯಲ್‌ನಲ್ಲೂ ನಟಿಸಿದ್ದ ಸಾರಾ, ತಮಿಳು ವೆಬ್ ಸೀರೀಸ್‌ಗಳಲ್ಲೂ ನಟಿಸಿದ್ದಾರೆ. ಸದ್ಯಕ್ಕೆ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಆಗಿ ನಟಿಸುತ್ತಿದ್ದಾರೆ. 
 

Latest Videos

click me!