ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಸಂಭಾವನೆ ಇಷ್ಟೊಂದಾ? ಬಾಹುಬಲಿ 2 ಸಿನಿಮಾ ಬಜೆಟ್‌ಗಿಂತ ಹೆಚ್ಚು!

First Published | Oct 6, 2024, 9:12 PM IST

ಹಿಂದಿ ಬಿಗ್ ಬಾಸ್ 18 ರಿಯಾಲಿಟಿ ಶೋ ಭಾರಿ ಕುತೂಹಲ ಕೆರಳಿಸಿದೆ. ಇದರ ಜೊತೆಗೆ ಈ ಬಾರಿಯ ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಪಡೆದಿರುವ ಸಂಭಾವನೆ ಭಾರಿ ಚರ್ಚೆಯಾಗುತ್ತಿದೆ. ಸಲ್ಮಾನ್ ಸಂಭಾವನೆ ಮೊತ್ತ ಬಾಹುಬಲಿ 2, ಜೈಲರ್ ಸಿನಿಮಾ ಬಜೆಟ್‌ಗಿಂತಲೂ ಹೆಚ್ಚು. 
 

ಕನ್ನಡ ಬಿಗ್ ಬಾಸ್ ಶೋ ಆರಂಭಗೊಂಡು ಈಗಾಗಲೇ ಕಾವು ಪಡೆದುಕೊಂಡಿದೆ. ಇದೀಗ ಹಿಂದಿ ಬಿಗ್ ಬಾಸ್ ಶೋ ಆರಂಭಗೊಂಡಿದೆ. ಅಕ್ಟೋಬರ್ 6ರಿಂದ ಆರಂಭಗೊಂಡಿರುವ ಬಿಗ್ ಬಾಸ್ 18ನೇ ಆವೃತ್ತಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಬಿಗ್ ಬಾಸ್ ಮನೆ ಸೇರಿದಂತೆ ಫೋಟೋಗಳು ಲೀಕ್ ಆಗಿ ವೈರಲ್ ಆಗಿತ್ತು.  
 

ನಿರೂಪಕ, ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್ ಬಾಸ್ 18ರ ಶೋ ನಡೆಸಿಕೊಡಲು ಪಡೆಯುತ್ತಿರುವ ಸಂಭಾವನೆ ಭಾರಿ ಚರ್ಚೆಯಾಗುತ್ತಿದೆ. ಈ ಮೊತ್ತ ರಾಜಮೌಳಿ-ಪ್ರಭಾಸ್ ಬಾಹುಬಲಿ 2 ಚಿತ್ರದ ಬಜೆಟ್‌ಗಿಂತ ಹೆಚ್ಚು, ರಜನಿಕಾಂತ್ ಜೈಲರ್ ಸಿನಿಮಾ, ಶಾರುಖ್ ಖಾನ್ ಅಭಿನಯದ ಡುಂಕಿ ಸಿನಿಮಾ ಬಜೆಟ್‌ಗಿಂತಲೂ ದುಬಾರಿಯಾಗಿದೆ. 

Tap to resize

ಹಲವು ಮಾಧ್ಯಮಗಳ ವರದಿ ಪ್ರಕಾರ ಈ ಬಾರಿಯ ಬಿಗ್ ಬಾಸ್ ಶೋ ನಡೆಸಿಕೊಡಲು ಸಲ್ಮಾನ್ ಖಾನ್ ತಿಂಗಳಿಗೆ 60 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಹಿಂದಿ ಬಿಗ್ ಬಾಸ್ ಶೋ 15 ವಾರ ಕಾಲ ನಡೆಯಲಿದೆ. ಹೀಗಾಗಿ ಸಲ್ಮಾನ್ ಖಾನ್ ಒಟ್ಟು ಸಂಭಾವನೆ ಮೊತ್ತ ಬರೋಬ್ಬರಿ 250 ಕೋಟಿ ರೂಪಾಯಿ. ಇದು ಹಲವು ಬ್ಲಾಕ್ ಬಸ್ಟರ್, ದುಬಾರಿ ಬಜೆಟ್ ಸಿನಿಮಾ ಮೊತ್ತಕ್ಕಿಂತ ದುಬಾರಿಯಾಗಿದೆ.

ಬಿಗ್ ಬಾಸ್ 18ನೇ ಆವೃತ್ತಿ ಮುಕ್ತಾಯದ ವೇಳೆಗೆ ಸಲ್ಮಾನ್ ಖಾನ್ ಒಟ್ಟು 250 ಕೋಟಿ ರೂಪಾಯಿ ಜೇಬಿಗಿಳಿಸಲಿದ್ದಾರೆ. ಸಂಭಾವನೆಯನ್ನು ಹಂತ ಹಂತವಾಗಿ ಸಲ್ಮಾನ್ ಖಾನ್‌ಗೆ ನೀಡಾಗುತ್ತದೆ ಎಂದು ವರದಿಗಳು ಹೇಳುತ್ತಿದೆ. ಬಾಹುಬಲಿ 2 ಸಿನಿಮಾ ಬಜೆಟ್ ಮೊತ್ತ 180 ಕೋಟಿ ರೂಪಾಯಿ, ಜೈಲರ್ ಸಿನಿಮಾ ಬಜೆಟ್ 200 ಕೋಟಿ ರೂಪಾಯಿ, ಶಾರುಖ್ ಖಾನ್ ಡುಂಕಿ ಸಿನಿಮಾ ಬಜೆಟ್ 120 ಕೋಟಿ ರೂಪಾಯಿ. ಈ ಎಲ್ಲಾ ಸಿನಿಮಾ ಬಜೆಟ್ ಮೊತ್ತಕ್ಕಿಂತ ಸಲ್ಮಾನ್ ಖಾನ್ ಸಂಭಾವನೆ ಹೆಚ್ಚಾಗಿದೆ.

15 ವರ್ಷಗಳಿಂದ ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಇದೀಗ ವೀಕ್ಷಕರು ಸಲ್ಮಾನ್ ಖಾನ್ ಬಿಟ್ಟು ಬೇರೊಬ್ಬ ನಿರೂಪಕ ಬಿಗ್ ಬಾಸ್ ನಡೆಸಿಕೊಡುವುದು ಊಹಿಸಲು ಸಾಧ್ಯವಾಗದಷ್ಟು ನಟ ಆವರಿಸಿಕೊಂಡಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಸಂಭಾವನೆಯೂ ವರ್ಷದಿಂದ ವರ್ಷಕ್ಕೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ.

Latest Videos

click me!