Amruthadhaare: ಹುಡುಗಿ ಅಂಕಲ್​ನ, ಯುವಕ ಆಂಟಿಯನ್ನು ಲವ್​ ಮಾಡೋದು ಟ್ರೆಂಡಂತೆ ನೋಡ್ರಪ್ಪಾ!

Published : Jan 08, 2026, 09:55 PM IST

'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್‌ಗೆ ಮನಸೋತ ಯುವತಿ ಸುಷ್ಮಾ, ಆತನಿಗೆ ಲವ್ ಲೆಟರ್ ನೀಡುವಂತೆ ಪತ್ನಿ ಭೂಮಿಕಾಳ ಬಳಿಯೇ ಕೇಳುತ್ತಾಳೆ. ಮತ್ತೊಂದೆಡೆ, ಸುನಿಲ್ ಕೂಡ ತನಗಿಂತ ಹಿರಿಯ ವಯಸ್ಸಿನ ಮಲ್ಲಿಯ ಪ್ರೀತಿಯಲ್ಲಿ ಬಿದ್ದಿದ್ದು,   ವಯಸ್ಸಿನ ಅಂತರವಿರುವ ಪ್ರೇಮಕಥೆಯ ಹೊಸ ಟ್ರೆಂಡ್ ಅನ್ನು ತೋರಿಸುತ್ತಿದೆ.

PREV
16
ಒಂದಾದರೂ ದೂರ ದೂರ

ಅಮೃತಧಾರೆಯಲ್ಲಿ (Amruthadhaare) ಸದ್ಯ ಭೂಮಿಕಾ ಮತ್ತು ಗೌತಮ್​ ಮಾನಸಿಕವಾಗಿ ಒಂದಾಗಿದ್ದಾರೆ. ಇಬ್ಬರೂ ಸೇರಿ ಕಳೆದುಹೋಗಿರುವ ಮಗಳನ್ನು ಹುಡುಕಲು ಒಂದಾಗಿದ್ದರೆ, ಅತ್ತ ಆಕಾಶ್​ ಮತ್ತು ಮಿಂಚು ತಮಗೆ ಇವರಿಬ್ಬರ ಸತ್ಯ ಗೊತ್ತು ಎನ್ನುವುದನ್ನು ರಿವೀಲ್​ ಮಾಡಿದ್ದಾರೆ.

26
ಲವ್​ನಲ್ಲಿ ಬಿದ್ದ ಯುವತಿ

ಅದೇ ಇನ್ನೊಂದೆಡೆ, ವಠಾರದ ಸುಷ್ಮಾ ಗೌತಮ್​ ಸರ್​, ಗೌತಮ್​ ಸರ್​ ಎನ್ನುತ್ತಲೇ ಲವ್​ನಲ್ಲಿ ಬಿದ್ದಿದ್ದಾಳೆ. ಇದೀಗ ಆಕೆ ಲವ್​ ಲೆಟರ್​ ಗೌತಮ್​ಗೆ ಕೊಡುವಂತೆ ಹೋಗಿ ಹೋಗಿ ಭೂಮಿಕಾಗೇ ಹೇಳಿದ್ದಾಳೆ. ಇದನ್ನು ಕೇಳಿ ಭೂಮಿಕಾ ಶಾಕ್​ ಆಗಿದ್ದಾಳೆ.

36
ಟ್ರೆಂಡ್​ ಮೇಡಂ

ನಿನ್ನ ವಯಸ್ಸೇನು, ಅವರ ವಯಸ್ಸೇನು? ಇವೆಲ್ಲಾ ಸರಿಯಾಗುವುದಿಲ್ಲ. ಹೀಗೆಲ್ಲಾ ಮಾಡಬಾರದು ಎಂದು ಹೇಳಿದಾಗ ಯುವತಿ ಸುಷ್ಮಾ ಇದು ಈಗಿನ ಟ್ರೆಂಡ್​ ಮೇಡಂ ಎಂದಿದ್ದಾಳೆ. ಬಾಲಿವುಡ್​​ ನಾಯಕಿಯರೇ ನನಗೆ ಸ್ಫೂರ್ತಿ. ಅವರೂ ಹೀಗೆಯೇ ದುಪ್ಪಟ್ಟು ವಯಸ್ಸಿನ ಗಂಡಸರನ್ನು ಮದ್ವೆಯಾಗ್ತಾರೆ. ನನಗೂ ಹಾಗೇ ಆಸೆ ಎಂದಿದ್ದಾಳೆ.

46
ಲವ್​ ಲೆಟರ್​

ಇದನ್ನು ಕೇಳಿ ಭೂಮಿಕಾಗೆ ಏನು ಹೇಳಬೇಕೋ ತಿಳಿಯದಾಗಿದೆ. ಸರಿ ಲವ್​ ಲೆಟರ್​ ಬರೆದುಕೊಡುತ್ತೇನೆ ಎಂದು ಹೇಳಿ ಸುಷ್ಮಾ ಕೊಟ್ಟಿರೋ ಪೇಪರ್​ ತೆಗೆದುಕೊಂಡು ಹೋಗಿದ್ದಾಳೆ. ಇದು ಈಗಿನ ಟ್ರೆಂಡ್ ಎನ್ನೋದು ಕೇಳಿ ಭೂಮಿಕಾ ಕಣ್​ ಕಣ್​ ಬಿಟ್ಟು ನೋಡಿದ್ದಾಳೆ.

56
ಮಲ್ಲಿ ಜೊತೆ ಲವ್​

ಅದೇ ಇನ್ನೊಂದೆಡೆ, ತನಗಿಂತ ಹೆಚ್ಚಿನ ವಯಸ್ಸಾಗಿರೋ ಮಲ್ಲಿಗೆ ಲವ್​ನಲ್ಲಿ ಬಿದ್ದಿದ್ದಾನೆ ಸುನಿಲ್​. ಜೈದೇವ್​ ಹೇಳಿದ ಎಂದು ಮಲ್ಲಿಯನ್ನು ಪ್ರೀತಿಯಲ್ಲಿ ಬೀಳಿಸೋ ಸುಪಾರಿ ಪಡೆದುಕೊಂಡಿದ್ದರೂ, ಇವನು ಮೊದಲೇ ಅವಳ ಮೋಹದ ಬಲೆಗೆ ಸಿಲುಕಿದ್ದಾನೆ.

66
ಒಟ್ನಲ್ಲಿ ಇದೇ ಟ್ರೆಂಡ್​?

ಒಟ್ಟಿನಲ್ಲಿ ಅಂಕಲ್​ರನ್ನು ಯುವತಿಯರು, ಆಂಟಿಯರನ್ನು ಯುವಕರು ಲವ್​ ಮಾಡೋದು ಬಾಲಿವುಡ್​ ನೀಡಿರೋ ಗಿಫ್ಟ್​, ಅದೀಗ ಟ್ರೆಂಡ್​ ಎನ್ನೋದನ್ನು ಅಮೃತಧಾರೆ ಸೀರಿಯಲ್​ ಕಲಿಸಿಕೊಡುತ್ತಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories