ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್-ಭೂಮಿಕಾ ಮಿಂಚುವನ್ನು ದತ್ತು ನೀಡಲು ಯೋಚಿಸುತ್ತಿರುವಾಗ, ಜೈದೇವನಿಗೆ ಆಘಾತಕಾರಿ ಸತ್ಯವೊಂದು ತಿಳಿಯುತ್ತದೆ. ಅಪಹೃತ ಲಕ್ಷ್ಮೀಕಾಂತನಿಂದ ಆಕಸ್ಮಿಕವಾಗಿ ಹೊರಬಿದ್ದ ಮಾತಿನಿಂದ, ಮಿಂಚು ಗೌತಮ್-ಭೂಮಿಕಾಳ ಸ್ವಂತ ಮಗಳು ಎಂಬ ರಹಸ್ಯ ಜೈದೇವನಿಗೆ ಗೊತ್ತಾಗುತ್ತದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಮಿಂಚು ಸ್ಟೋರಿ ನಡೆಯುತ್ತಿದೆ. ಈಕೆ ತಮ್ಮದೇ ಮಗಳು ಎನ್ನುವ ಸತ್ಯ ಇನ್ನೂ ಲಕ್ಷ್ಮೀಕಾಂತ ಬಿಟ್ಟರೆ ಯಾರಿಗೂ ಗೊತ್ತಿಲ್ಲ, ಸ್ವತಃ ಗೌತಮ್ ಮತ್ತು ಭೂಮಿಕಾಗೂ ಗೊತ್ತಿಲ್ಲ.
25
ಮಿಂಚು ದತ್ತು
ಅತ್ತ ಮಹಿಮಾ ಮಗು ಕಳೆದುಕೊಂಡು ದುಃಖಿಸುತ್ತಿರುವ ಕಾರಣದಿಂದ ಮನಸ್ಸಿಲ್ಲದ ಮನಸ್ಸಿನಿಂದ ಮಿಂಚುವನ್ನು ಅವಳಿಗೆ ದತ್ತು ಕೊಡುವ ಬಗ್ಗೆ ಗೌತಮ್, ಭೂಮಿಕಾ ಚಿಂತಿಸುತ್ತಿದ್ದಾರೆ.
35
ಪಾರ್ಥನಿಂದ ವಿಷ್ಯ
ಈ ಬಗ್ಗೆ ಪಾರ್ಥ, ಜೈದೇವನಿಗೆ ವಿಷಯ ತಿಳಿಸುತ್ತಾನೆ. ಆಗಲೇ ಜೈದೇವ ಮಿಂಚುವಿಗೆ ಒಂದು ಗತಿ ಕಾಣಿಸಲು ಪ್ಲ್ಯಾನ್ ಮಾಡುತ್ತಿರುತ್ತಾನೆ.
ಈ ಬಗ್ಗೆ ತಾನು ಕಿಡ್ನ್ಯಾಪ್ ಮಾಡಿ ಕಟ್ಟಿಹಾಕಿರುವ ಲಕ್ಷ್ಮೀಕಾಂತನಿಗೆ ದತ್ತು ಕೊಡುವ ವಿಷಯವನ್ನು ಜೈದೇವ ಹೇಳುತ್ತಾನೆ. ಆಗ ಲಕ್ಷ್ಮೀಕಾಂತ ಅಯ್ಯೋ ಇದೇನಾಗೋಯ್ತು, ಸ್ವಂತ ಮಗು ಮತ್ತೆ ದೂರವಾಗ್ತಾಳಾ ಎಂದು ಮಾತಾಡಿಕೊಳ್ಳುವಾಗ ಅದು ಜೈದೇವನ ಕಿವಿಗೆ ಬೀಳುತ್ತದೆ.
55
ಅಸಲಿ ವಿಷ್ಯ ತಿಳಿದೋಯ್ತು
ಲಕ್ಷ್ಮೀಕಾಂತನ ಕೊರಳ ಪಟ್ಟಿ ಹಿಡಿದು ಕೇಳಿದಾಗ, ಆತ ಏನಿಲ್ಲ ಏನಿಲ್ಲ ಎಂದರೂ ಜೈದೇವ್ಗೆ ಅಸಲಿ ವಿಷ್ಯ ತಿಳಿದೇ ಬಿಡುತ್ತದೆ. ಅಲ್ಲಿಗೆ ಇನ್ನು ಮಿಂಚು ಕಥೆ ಮುಗಿದ ಹಾಗೆ. ಮಿಂಚುನೇ ಗೌತಮ್ ಪಾಲಿಗೆ ವಿಲನ್ ಆಗೋ ಹಾಗೆ ಜೈದೇವ್ ತಲೆತಿರುಗಿಸಿದರೂ ಅಚ್ಚರಿ ಏನಿಲ್ಲ. ಒಟ್ಟಿನಲ್ಲಿ ಕಥೆ ಬೇರೆಯದ್ದೇ ರೂಪ ಪಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.