ಅದು ಆನ್ ಸ್ಕ್ರೀನ್ ಆಗಿರಲಿ ಅಥವಾ ಆಫ್ ಸ್ಕ್ರೀನ್ ಆಗಿರಲಿ ಅಮೃತಾ - ರಘು (Amrutha and Raghu) ಜೋಡಿಯನ್ನು ಎರಡೂ ಕಡೆಯೂ ಜನರು ತುಂಬಾನೆ ಇಷ್ಟಪಡ್ತಾರೆ. ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಸೀರಿಯಲ್ ಸೆಟ್ ನಲ್ಲಿ ಶುರುವಾದ ಇವರ ಪ್ರೇಮಕಥೆ ಇದೀಗ ಮದ್ವೆ ಆಗಿ ಮುದ್ದಾದ ಮಗಳ ಪೋಷಕರೂ ಆಗಿದ್ದಾರೆ ಈ ಜೋಡಿ.
ಈವಾಗ ಯಾಕೆ ರಘು ಅಮೃತಾ ಬಗ್ಗೆ ಹೇಳ್ತಿದೀವಿ ಅಂದ್ರೆ. ಕೆಲದಿನಗಳ ಹಿಂದಷ್ಟೇ ಅಮೃತಾ ತಮ್ಮ ಯೂಟೂಬ್ ಚಾನೆಲ್ ನಲ್ಲಿ (youtube channel) ತಮ್ಮ ಪತಿ ರಘು ಜೊತೆ ಯಾರಿಗೆ ಯಾರನ್ನ ಚೆನ್ನಾಗಿ ಗೊತ್ತು ಅನ್ನೋ ಫನ್ನಿ ಗೇಮ್ಸ್ ಆಡಿದ್ದು, ಈ ಸಂದರ್ಭದಲ್ಲಿ ತಮ್ಮ ಫಸ್ಟ್ ಕಿಸ್ ಗುಟ್ಟು ಕೂಡ ಬಿಚ್ಚಿಟ್ಟಿದ್ದಾರೆ ಜೋಡಿ.
ಅಮೃತಾ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ (colors kannada) ಪ್ರಸಾರವಾಗುತ್ತಿರುವ ಕೆಂಡ ಸಂಪಿಗೆ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚ್ತಾ ಇದ್ದರೆ, ರಘು ಝೀ ತೆಲುಗು ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ ಒಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ಅಮೃತಾ ತಮ್ಮ ಯೂಟೂಬ್ ಚಾನೆಲ್ ನಲ್ಲಿ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಕೇಳುತ್ತಾ, ಇಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಅನ್ನೋದನ್ನು ತಿಳಿಸಿದ್ದಾರೆ. ಅಮೃತಾ ರಘುಗೆ ನನ್ನ ಬಗ್ಗೆ ಬೋರಿಂಗ್ ವಿಷ್ಯ ಯಾವುದು ಎಂದು ಕೇಳಿದಾಗ ರಘು ಮದ್ವೆ ಮೊದಲು ತುಂಬಾ ಇಂಟ್ರೆಸ್ಟಿಂಗ್ ಆಗಿದ್ಲು, ಮದ್ವೆ ನಂತ್ರ ಸಖತ್ ಬೋರಿಂಗ್ ಆಗಿದ್ದಾಳೆ. ಎಲ್ಲಿಗೂ ಕರೆದ್ರೂ ಬರಲ್ಲ, ಮನೆಯಲ್ಲಿಯೇ ಇರ್ತಾಳೆ ಟೋಟಲ್ ಆಗಿ ಬೋರಿಂಗ್ ಎಂದು ಹೇಳಿ ಕಾಲೆಳೆದಿದ್ದಾರೆ.
ಫಸ್ಟ್ ಟೈಮ್ ಇಬ್ರೂ ರಂಗೇ ಗೌಡ ಸೆಟ್ ನಲ್ಲಿ ಭೇಟಿಯಾದ ಸಂದರ್ಭವನ್ನು ನೆನಪಿಸಿದ ಅಮೃತಾ.. ಮೊದಲ ಬಾರಿಗೆ ರಘುನ ನೋಡಿದ ಮೇಲೆ ಅಮ್ಮ ಕೇಳಿದಾಗ ಅಮ್ಮ ಹೀರೋ ಚೆನ್ನಾಗಿಲ್ಲ ಅಂದಿದ್ದೆ ಅಂದ್ರು ಅಮೃತಾ. ಇನ್ನು ರಘುಕ್ಕಿಂತ ಮೊದಲೇ ಕಿರುತೆರೆಗೆ ಕಾಲಿಟ್ಟಿದ್ದ ಅಮೃತಾರನ್ನು ಮೊದಲ ಬಾರಿಗೆ ಎದುರಲ್ಲಿ ನೋಡಿದಾಗ, ಅಯ್ಯೋ ಇವ್ರೇನು ಇಷ್ಟು ಸಣ್ಣ ಇದ್ದಾರೆ ಅಲ್ವಾ ಅಂತ ಅನಿಸ್ತು ಅಂತ ಅಮೃತಾ ಹೈಟ್ ಬಗ್ಗೆ ಮಾತನಾಡಿದ್ದಾರೆ.
ಫಸ್ಟ್ ಟೈಮ್ ಇಬ್ರೂ ಜೊತೆಯಾಗಿ ಹೋದ ಜಾಗದ ಬಗ್ಗೆ ಮಾತನಾಡಿದ ಇವರು ಮೊದಲ ಬಾರಿ ಚಂದ್ರ ಲೇ ಔಟ್ ಕಾಫಿ ಶಾಪ್ ನಲ್ಲಿ ಇಬ್ರೂ ಭೇಟಿಯಾಗಿದ್ರಂತೆ. ಅದೇ ಸಮಯದಲ್ಲಿ ಅವರು ಫಸ್ಟ್ ಕಿಸ್ ಗುಟ್ಟು (first kiss) ಸಹ ಬಿಟ್ಟುಕೊಟ್ಟಿದ್ದಾರೆ. ಮೊದಲ ಬಾರಿ ಕಾರಲ್ಲಿ ಇಬ್ರೂ ಹೋಗೋವಾಗ ಅಮೃತಾ ಕಿಸ್ ಮಾಡಿದ್ರೂ ಅಂತ ರಘು ಹೇಳಿದ್ರೆ, ಇಲ್ಲಾ ನಾನು ಏನೋ ಹೇಳೋಕೆ ಹೋಗೋವಾಗ ರಘುನೇ ಸಡನ್ ಆಗಿ ಕಿಸ್ ಮಾಡಿದ ಎಂದು ಅಮೃತಾ ಹೇಳಿದ್ದಾರೆ.
ಇನ್ನು ಪ್ರಪೋಸ್ ಮಾಡೋ ವಿಷ್ಯ ಬಂದಾಗ, ಇಬ್ರೂ ಕೂಡ ಪ್ರಪೋಸ್ ಮಾಡಿಲ್ವಂತೆ. ಇಬ್ಬರಿಗೂ ಗೊತ್ತಿತ್ತಂತೆ ಲವ್ ಮಾಡ್ತಿದ್ರು ಅಂತೆ ಅಷ್ಟೇ. ಮತ್ತೆ ಐದು ವರ್ಷ ಆದ ಬಳಿಕ ಅಪ್ಪ, ಅಮ್ಮನ ಬಳಿ ಹೋಗಿ ಹೇಳಿದ್ರಂತೆ. ಎಲ್ಲರೂ ಒಪ್ಪಿದ ಮೇಲೆ ಇಬ್ರೂ ಮದ್ವೆ ಆದ್ರೂ ಇದೀಗ ಧೃತಿ ಅಂತ ಮುದ್ದಾದ ಮಗುವಿನ ತಂದೆ-ತಾಯಿ ಆಗಿದ್ದಾರೆ.