ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ನಟಿ, ಸದ್ಯ ನಟನೆಯಿಂದ ದೂರ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬೆಡಗಿ ರಜಿನಿ (actress Rajini) ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
28
ಮೇ 1 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರಜಿನಿ, ತಮ್ಮ ಗೆಳೆಯ ಜಿಮ್ ಪಾರ್ಟ್ನರ್ ಹಾಗೂ ರೀಲ್ಸ್ ಜೋಡಿ ಆಗಿರುವ ಅರುಣ್ ಗೌಡ (Arun Gowda) ಜೊತೆ ಜೋರಾಗಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
38
ತಮ್ಮ ಹುಟ್ಟುಹಬ್ಬದ ಫೋಟೊಗಳನ್ನು (birthday celebration) ನಟಿ ರಜಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರೋಮ್ಯಾಂಟಿಕ್ ಸೆಟಪ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಕಿರುತೆರೆಯ ಗಣ್ಯರು ಸಹ ಶುಭಾಶಯ ಕೋರಿದ್ದಾರೆ.
ಗೆಳೆಯ ಅರುಣ್ ಗೌಡ ಜೊತೆ ಬಾರ್ಬಿ ಡಾಲ್ ಕೇಕ್ ಕತ್ತಿರಿಸಿ ರಜಿನಿ ಸಂಭಮಿಸಿದ್ದಾರೆ. ಹಿನ್ನೆಲೆಯಲ್ಲಿ ಹ್ಯಾಪಿ ಬರ್ತ್ ಡೇ ಮಮ್ಮಿ ಅಂತಾನೂ ಇದೆ, ಅಲ್ಲದೇ, ಲವ್ ಅಂತಾನೂ ಡೆಕೋರೇಶನ್ ಮಾಡಲಾಗಿದೆ. ಜೊತೆಗೆ ಅರುಣ್ ಜೊತೆಗೆ ಫೋಟೊಸ್ ಕೂಡ ಶೇರ್ ಮಾಡಿದ್ದಾರೆ. ಹಾಗಾಗಿ ಮತ್ತೆ ಈ ಜೋಡಿಯ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನ ಮೂಡಿದೆ.
58
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಜಿನಿ, ಪ್ರತಿದಿನವೂ ಅರುಣ್ ಗೌಡ ಜೊತೆ ಕಾಮಿಡಿ ರೀಲ್ಸ್ (comedy reels) ಮಾಡಿ ಶೇರ್ ಮಾಡುತ್ತಿರುತ್ತಾರೆ. ಆರಂಭದಲ್ಲಿ ಈ ಜೋಡಿ ಜಿಮ್ ಗೆ ಸಂಬಂಧಿಸಿದ ರೀಲ್ಸ್ ಮಾಡಿ ಶೇರ್ ಮಾಡುತ್ತಿತ್ತು. ಅದಕ್ಕೆ ಉತ್ತಮ ರೆಸ್ಪಾನ್ಸ್ ಬರುತ್ತಿದ್ದಂತೆ ಮತ್ತಷ್ಟು ಕಾಮಿಡಿ ರೀಲ್ಸ್ ಗಳನ್ನು ಮಾಡಲು ಶುರು ಮಾಡಿದ್ದಾರೆ.
68
ಇತ್ತೀಚೆಗೆ ಎಲ್ಲಾ ರೀಲ್ಸ್ ಗಳಲ್ಲಿ ಅರುಣ್ ಮತ್ತು ರಜಿನಿ ಅಮ್ಮ ಮತ್ತು ಮಗನ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರುಣ್, ರಜಿನಿಯನ್ನು ಮಮ್ಮಿ ಅಂತಾನೇ ಕರೆಯುತ್ತಾರೆ. ಹಾಗಾಗಿ ಬರ್ತ್ ಡೇ ದಿನವೂ ಹ್ಯಾಪಿ ಬರ್ತ್ ಡೇ ಮಮ್ಮಿ ಎಂದು ಬರೆದುಕೊಂಡಿದ್ದಾರೆ.
78
ಅರುಣ್ ಗೌಡ ಹಾಗೂ ರಜಿನಿ ಲವರ್ಸ್ ಎನ್ನುವ ಸುದ್ದಿ ಬಹಳ ಹಿಂದಿನಿಂದಲೇ ಕೇಳಿ ಬರುತ್ತಿತ್ತು. ಯಾಕಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಜೊತೆಗಿರ್ತಾರೆ, ಕಾರ್ಯಕ್ರಮಗಳಲ್ಲೂ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ, ಅಲ್ಲದೇ ರಜನಿಅರುಣ್ ಎನ್ನುವ ಇನ್’ಸ್ಟಾಗ್ರಾಂ ಪೇಜ್ ಕೂಡ ಇದೆ.
88
ಆದರೆ ರಜಿನಿ ಮಾತ್ರ ಈ ಹಿಂದೆ ಇಲ್ಲ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್. ಎಲ್ಲರಿಗೂ ನಮ್ಮ ಬಗ್ಗೆ ಅನುಮಾನ ಇದೆ. ನನ್ನ ಮದುವೆ ಬಗ್ಗೆ, ಸಂಬಂಧದ ಬಗ್ಗೆ ಯೋಚನೆ ಮಾಡಿದ್ರೆ, ನಾನು ಖಂಡಿತವಾಗಿಯೂ ನಿಮ್ಮ ಮುಂದೆ ಹೇಳ್ತೀನಿ, ಆದರೆ ಸದ್ಯ ನಮ್ಮಿಬ್ಬರ ಮಧ್ಯೆ ಹಾಗೇನು ಇಲ್ಲ ಎಂದಿದ್ದರು.