ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ, (Seeta Rama serial) ಪ್ರಿಯಾ ಪಾತ್ರ ನಿರ್ವಹಿಸುತ್ತಿರುವ ನಟಿ ಮೇಘನಾ ಶಂಕರಪ್ಪ ಸದ್ಯ ಸೀರಿಯಲ್ ನಿಂದ ಬ್ರೇಕ್ ಪಡೆದು ರಾಜಸ್ಥಾನ ಕಡೆಗೆ ಪಯಣ ಬೆಳೆಸಿದ್ದಾರೆ.
28
ಹೌದು, ನಟಿ ಮೇಘನಾ (Meghana Shankarappa) ರಾಜಸ್ಥಾನದ ಉದಯಪುರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಫೋಟೊಸ್ ತೆಗೆದುಕೊಂಡಿದ್ದು, ಅದನ್ನು ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.
38
ಮೇಘನಾ ಶಂಕರಪ್ಪ ಇದೇ ವರ್ಷ ಫೆಬ್ರುವರಿ 10ನೇ ತಾರೀಕಿನಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಸ್ವಲ್ಪ ಸಮಯದಲ್ಲೇ ನಟಿ ಮತ್ತೆ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು.
ಇದಿಗ ಸೀರಿಯಲ್ ನಿಂದ ಬ್ರೇಕ್ ಪಡೆದಿರುವ ಮೇಘನಾ, ಮದುವೆಯಾದ ಮೂರು ತಿಂಗಳ ಬಳಿಕ ಹನಿಮೂನ್ ಗೆ ಹೋದಂತಿದೆ. ಆದ್ರೆ ನಟಿ ಸಿಂಗಲ್ ಆಗಿರೋ ಫೋಟೊ ಮಾತ್ರ ಶೇರ್ ಮಾಡಿದ್ದಾರೆ. ಎಲ್ಲೂ ಸಹ ಗಂಡನ ಫೋಟೊ ಶೇರ್ ಮಾಡಿಲ್ಲ.
58
ಕೆಂಪು ಬಣ್ಣದ ಸಲ್ವಾರ್ ಸೂಟ್ ಧರಿಸಿರುವ ಮೇಘನಾ ಶಂಕರಪ್ಪ, ಸರೋವರಗಳ ಸುಂದರ ನಗರಿಯ ಸುಂದರ ರಾಜಮನೆತನದ ಕಟ್ಟಡಗಳ ಮುಂದೆ ನಿಂತು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಉದಯಪುರದ (Udaipur) ಸೌಂದರ್ಯವೇ ಇವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
68
ಉದಯಪುರದ ಅರಮನೆಗಳ, ದೇಗುಲಗಳ ಸುಂದರವಾದ ವಾಸ್ತು, ಶಿಲ್ಪಕಲೆಗೆ, ಒಳಾಂಗಣದ ವಿನ್ಯಾಸ ಅದ್ಭುತ ಫೋಟೊಗಳನ್ನು ಸೆರೆಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
78
ಇನ್ನು ಮೇಘನಾ ಬಗ್ಗೆ ಹೇಳೋದಾದರೆ ಇವರು ಬಾಲ ನಟಿಯಾಗಿ ಗುರುತಿಸಿಕೊಂಡವರು,ಬಳಿಕ, ಕಿನ್ನರಿ, ಸುಬ್ಬುಲಕ್ಷ್ಮಿ ಸಂಸಾರ, ಸೇರಿ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸಹ ಭಾಗವಹಿಸಿದ್ದಾರೆ.
88
ಮೇಘನಾ ಶಂಕರಪ್ಪ, ನಟನೆಯ ಜೊತೆಗೆ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ ನಟಿ. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಮೇಘನಾ ಜೀವನದ ಒಂದಲ್ಲ ಒಂದು ಅಪ್ ಡೇಟ್ ಕೊಡುತ್ತಲೇ ಇರುತ್ತಾರೆ.