ಮಗಳ‌ ನಾಮಕರಣದ‌ ಸಂಭ್ರಮದಲ್ಲಿ ನಟಿ‌ ಕಾವ್ಯಾ ಗೌಡ… ಮುದ್ದು ಸಿಯಾಗೆ ಹರಸಿ, ಆಶೀರ್ವದಿಸಿದ ಜನ

First Published | Oct 19, 2024, 6:43 PM IST

ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದ ನಟಿ ಕಾವ್ಯಾ ಗೌಡ ತಮ್ಮ ಮುದ್ದಿನ ಮಗಳ ನಾಮಕರಣ ಸಂಭ್ರಮದ ಫೋಟೊಗಳನ್ನ ಸೋಶಿಯಲ್ ಮಿಡೀಯಾದಲ್ಲಿ ಶೇರ್ ಮಾಡಿದ್ದಾರೆ. 
 

ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಮಿಂಚಿದ ನಟಿ ಕಾವ್ಯಾ ಗೌಡ, (Kavya Gowda) ಕನ್ನಡ ಕಿರುತೆರೆಯ ಫೇವರಿಟ್ ನಟಿಯಾಗಿದ್ರೂ ಅಂದ್ರೆ ತಪ್ಪಲ್ಲ. ನಂತರ ನಟನೆಯಿಂದ ದೂರ ಉಳಿದಿದ್ದ ನಟಿ, ನಂತ್ರ, ಮದುವೆ, ಮಗು ಎಂದು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳೋದೆ ಕಡಿಮೆಯಾಗಿತ್ತು. 
 

ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ಕಾವ್ಯಾ ಗೌಡ, ತಮ್ಮ ಪ್ರತಿಯೊಂದು ಸಂಭ್ರಮದ ಕ್ಷಣಗಳನ್ನು ಸಹ ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದ್ದರು. ಪತಿ ಸೋಮಶೇಖರ್ ಜೊತೆಗಿನ ಫೋಟೊ, ಅಕ್ಕ ಭವ್ಯಾ ಗೌಡ ಮತ್ತು, ಆಕೆಯ ಮಗಳೊಂದಿಗೆ ಫೋಟೊ, ಸುಂದರವಾದ ವಿಡೀಯೋಗಳೊಂದಿಗೆ ಜೊತೆಗೆ ತಮ್ಮ ಟ್ರಾವೆಲ್ ಫೋಟೊಗಳೊಂದಿಗೆ ನಟಿ ಆವಾಗವಾಗ ಕಾಣಿಸುಕೊಳ್ಳುತ್ತಿದ್ದರು. 
 

Tap to resize

ಇದೇ ಜನವರಿ 22 ರಂದು ಕಾವ್ಯಾ ಗೌಡ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರತಿಷ್ಠಾಪನೆ ದಿನವೇ ಮಗುವಿನ ಆಗಮನವಾಗಿರೋದಕ್ಕೆ ಮಗಳಿಗೆ ಪ್ರೀತಿಯಿಂದ ಸಿಯಾ ಎಂದೇ ಹೆಸರಿಟ್ಟು ಕರೆದರು. ಮಗಳಿಗೆ ಏಳು ತಿಂಗಳಾದ ಬಳಿಕ ಅಂದ್ರೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ದರು ನಟಿ. 
 

ಮಗು ಹುಟ್ಟಿದಾಗಲೇ ಮಗಳಿಗೆ ಸಿಯಾ ಅಂತ ಕರೆದು, ಮಗಳ ಹೆಸರಲ್ಲಿ ಈಗಾಗಲೇ ಇನ್’ಸ್ಟಾಗ್ರಾಂ ಪೇಜ್ ಕೂಡ ತೆರೆದಿರುವ ನಟಿ ಕಾವ್ಯಾ ಗೌಡ ದಂಪತಿಗಳು, ಇದೀಗ ಅಧಿಕೃತವಾಗಿ, ಬಂಧುಗಳು, ಸ್ನೇಹಿತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಾಮಕರಣ ಮಾಡಿದ್ದು,  ಮಗಳ ಹೆಸರನ್ನ ಸ್ಯಾಂಡ್ ಆರ್ಟ್ ಮೂಲಕ ವಿಶೇಷವಾಗಿ ಅನಾವರಣ ಮಾಡಿದ್ದಾರೆ. 
 

ನಾಮಕರಣ ಸಂಭ್ರಮದ ಫೋಟೊಗಳನ್ನ ಹಂಚಿಕೊಂಡಿರುವ ಕಾವ್ಯಾ ಗೌಡ Siya You’ve given my life a new meaning, one filled with endless love ಎಂದು ಬರೆದುಕೊಂಡಿದ್ದಾರೆ. ನಟಿಯ ಮುದ್ದಾದ ಫ್ಯಾಮಿಲಿ ಫೋಟೊ ನೋಡಿ, ಅಭಿಮಾನಿಗಳು ಹರಸಿ, ಮಗುವಿಗೆ ಆಶೀರ್ವದಿಸಿದ್ದಾರೆ. 
 

ಇನ್ನು ನಾಮಕರಣ ಸಂಭ್ರಮದಲ್ಲಿ ಕಿರುತೆರೆಯ ಸೆಲೆಬ್ರಿಟಿಗಳು ಭಾಗಿಯಾಗಿ ಸಂಭ್ರಮಿಸಿದ್ದಾರೆ. ನಟಿಯರಾದ ಸುಜಾತ ಕಷ್ಯಪ್, ಅಶ್ವಿನಿ, ಮೇಘಾ ಶೆಟ್ಟಿ (Megha Shetty) ಮೊದಲಾದವರು ಭಾಗಿಯಾಗಿದ್ದರು. ಕಾವ್ಯಾ ಗೌಡ ಸ್ನೇಹಿತೆಯಾಗಿರುವ ವಿಜಯಲಕ್ಷ್ಮೀ ದರ್ಶನ್ ಸಮಾರಂಭದಲ್ಲಿ ಭಾಗಿಯಾಗದಿರೋದನ್ನ ನೋಡಿ, ಮಿಸ್ಸಿಂಗ್ ವಿಜಿ ಅಕ್ಕ ಎಂದು ಅಭಿಮಾನಿಗಳು ಹೇಳಿದ್ದಾರೆ. 
 

ಶುಭ ವಿವಾಹ, ಗಾಂಧಾರಿ, ರಾಧಾ ರಮಣ (Radha Ramana) ಧಾರಾವಾಹಿಗಳಲ್ಲಿ ಸೈ ಎನಿಸಿಕೊಂಡಿದ್ದ ಕಾವ್ಯಾ ಗೌಡರನ್ನು ಇಂದಿಗೂ ಸಹ ಅಭಿಮಾನಿಗಳು ತೆರೆ ಮೇಲೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಕಾವ್ಯಾ ಮಾತ್ರ ನಟನೆಗೆ ಗುಡ್ ಬೈ ಹೇಳಿ, ತಮ್ಮ ಸುಂದರವಾದ ಫ್ಯಾಮಿಲಿ ಲೈಫ್, ತಾಯ್ತನವನ್ನ ಎಂಜಾಯ್ ಮಾಡ್ತಿದ್ದಾರೆ. 
 

Latest Videos

click me!