ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಸುವರ್ಣ ವಾಹಿನಿಯಲ್ಲಿ 'ಜಾಕ್ ಪಾಟ್ ಪ್ರೇಮೋತ್ಸವ' ಸಂಗೀತ ಸುಧೆ

Published : Feb 15, 2024, 03:44 PM ISTUpdated : Feb 15, 2024, 03:52 PM IST

ಕರ್ನಾಟಕದ ಹೆಸರಾಂತ ಗಾನ ಕೋಗಿಲೆ  ಶ್ರೀಮತಿ ಬಿಆರ್ ಛಾಯಾ ಅವರು ಹಿನ್ನಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರ ಅನುಪಮ ಸಾಧನೆಗೆ ಪ್ರೇಮೋತ್ಸವದ ವೇದಿಕೆಯಲ್ಲಿ ಗೌರವಾರ್ಪಣೆಯನ್ನು ಸಲ್ಲಿಸಲಾಗಿದೆ.

PREV
18
ಪ್ರೇಮಿಗಳ  ದಿನಾಚರಣೆ ಪ್ರಯುಕ್ತ ಸುವರ್ಣ ವಾಹಿನಿಯಲ್ಲಿ 'ಜಾಕ್ ಪಾಟ್ ಪ್ರೇಮೋತ್ಸವ' ಸಂಗೀತ ಸುಧೆ

ಸ್ಟಾರ್ ಸುವರ್ಣ ವಾಹಿನಿಯು ವ್ಯಾಲಂಟೈನ್ಸ್ ಡೇ ಪ್ರಯುಕ್ತ 'ಜಾಕ್ ಪಾಟ್ ಪ್ರೇಮೋತ್ಸವ' ಎಂಬ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಪ್ರೇಮಿಗಳ ದಿನ ಮುಗಿದ ಮೇಲೂ ಪ್ರೇಮಿಗಳ ದಿನದ ಸವಿನೆನಪಿಗಾಗಿ ಎಂಬಂತೆ, 4 ದಿನಗಳ ಬಳಿಕ ಜಾಕ್‌ ಪಾಟ್ ಪ್ರೇಮೋತ್ಸವ ಬರಲಿದೆ. 
 

28

ಸುವರ್ಣ ವಾಹಿನಿಯು ತನ್ನ ವೀಕ್ಷಕರಿಗೆ ಯಾವತ್ತೂ ಹೊಸದನ್ನು ನೀಡಲು ಉತ್ಸುಕವಾಗಿರುತ್ತದೆ ಎಂಬುದಕ್ಕೆ ಇದೂ ಕೂಡ ಒಂದು ಸಾಕ್ಷಿ ಎನ್ನಬಹುದು. ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಜಾಕ್ ಪಾಟ್ ಪ್ರೇಮೋತ್ಸವ' ವೇದಿಕೆಯಲ್ಲಿ ಕರಾವಳಿ 'ಚಂಡೆ'ಯ ನಾದಾಮೃತವನ್ನು ವೀಕ್ಷಕರಿಗೆ ಅಚ್ಚುಕಟ್ಟಾಗಿ ತೋರಿಸಲಾಗಿದೆ. 

38

ಕನ್ನಡಿಗರ ನೆಚ್ಚಿನ ರಾಪರ್ ಚಂದನ್ ಶೆಟ್ಟಿ, ಕಾಟೇರ ಸಿನಿಮಾ ಖ್ಯಾತಿಯ ಗಾಯಕ ಅನಿರುದ್ಧ ಶಾಸ್ತ್ರೀ, ಐಶ್ವರ್ಯ ರಂಗರಾಜನ್, ಚಿನ್ಮಯಿ ಅತ್ರೇಯಸ್, ಇಂಪನಾ ಜಯರಾಜ್, ಸುಹಾನಾ ಸೈಯದ್ ಮತ್ತು ಕಾರ್ತಿಕ್ ಶರ್ಮ ಸೇರಿದಂತೆ ಖ್ಯಾತ ಗಾಯಕ-ಗಾಯಕಿಯರು ಒಟ್ಟಾಗಿ ಸಂಗೀತದ ವರ್ಷಧಾರೆಯನ್ನು ಹರಿಸಲಿದ್ದಾರೆ.
 

48

ಕರ್ನಾಟಕದ ಹೆಸರಾಂತ ಗಾನ ಕೋಗಿಲೆ  ಶ್ರೀಮತಿ ಬಿಆರ್ ಛಾಯಾ ಅವರು ಹಿನ್ನಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅವರ ಅನುಪಮ ಸಾಧನೆಗೆ ಪ್ರೇಮೋತ್ಸವದ ವೇದಿಕೆಯಲ್ಲಿ ಗೌರವಾರ್ಪಣೆಯನ್ನು ಸಲ್ಲಿಸಲಾಗಿದೆ. 
 

58

ಈ ಸಂದರ್ಭದಲ್ಲಿ ಸುವರ್ಣ ವಾಹಿನಿಯ ಬಳಗದ ಜೊತೆಗೆ ಅಲ್ಲಿ ನಿರೂಪಣೆ, ನಟನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿದರು ಹಾಜರಿದ್ದು ಈ ಕಾರ್ಯಕ್ರಮದ ಕಳೆ ಹೆಚ್ಚುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. 

68

ಇದರ ಜೊತೆ 40 ವರ್ಷಗಳ ದಾಂಪತ್ಯ ಜೀವನವನ್ನು ಪೂರೈಸಿರುವ ಬೊಂಬಾಟ್ ಭೋಜನ ಖ್ಯಾತಿಯ ಸಿಹಿ-ಕಹಿ ದಂಪತಿಗಳಾದ  ಚಂದ್ರು ಮತ್ತು ಗೀತಾ ಅವರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಪ್ರೇಮೋತ್ಸವ ವೇದಿಕೆಯಲ್ಲಿ ಸಂಭ್ರಮಿಸಿದ್ದಾರೆ. 

78

ಈ ಸಮಯದಲ್ಲಿ ಸಿಹಿ ಕಹಿ ಗೀತಾ ದಂಪತಿಗಳು ತಮ್ಮ ದಾಂಪತ್ಯ ಜೀವನದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಮೆಲುಕು ಹಾಕಿ ಸಂತೋಷದ ಕ್ಷಣಗಳನ್ನುಎಲ್ಲರೊಡನೆ ಹಂಚಿಕೊಂಡಿದ್ದಾರೆ.  2 ಗಂಟೆಗಳ ಈ ಕಾರ್ಯಕ್ರಮ ಟಿವಿ ವೀಕ್ಷಕರಿಗೆ ಮಹಾ ಮನರಂಜನೆ ನೀಡುವುದಂತೂ ಖಚಿತ.

88

ಈ ಪ್ರೇಮಿಗಳ ದಿನ ಸಂಗೀತಮಯವಾಗಲಿದೆ. ಮನರಂಜನೆಯ ರಸದೌತಣವನ್ನು ಹೊತ್ತು ತರ್ತಿದೆ 'ಜಾಕ್ ಪಾಟ್ ಪ್ರೇಮೋತ್ಸವ' ಸಂಗೀತ ಸಂಜೆ. ಇದೇ ಭಾನುವಾರ ರಾತ್ರಿ 7.00 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ ಮೂಡಿ ಬರಲಿದ್ದು, ತಪ್ಪದೇ ವೀಕ್ಷಿಸಿ ಎಂದು ಸುವರ್ಣ ವಾಹಿನಿ ತನ್ನ ವೀಕ್ಷಕ ಬಳಗಕ್ಕೆ ಈ ಮೂಲಕ ವಿನಂತಿ ಮಾಡಿಕೊಂಡಿದೆ. 

click me!

Recommended Stories