Kaveri kannada Medium Serial ಅಂತ್ಯ; ವಿಶೇಷ ಪೋಸ್ಟ್‌ ಮೂಲಕ ಗೊಂದಲಕ್ಕೆ ತೆರೆ ಎಳೆದ ನಟ ರಕ್ಷಿತ್‌ ಗೋಪಾಲ್‌

Published : Mar 04, 2025, 10:24 AM ISTUpdated : Mar 04, 2025, 10:43 AM IST

Kaveri kannada Medium Serial End: ಕನ್ನಡದ ಕುರಿತಂತೆ ಕಥೆ ಇಟ್ಟುಕೊಂಡು ಮುಂದುವರೆದ ʼಕಾವೇರಿ ಕನ್ನಡ ಮೀಡಿಯಂʼ ಧಾರಾವಾಹಿ ಅಂತ್ಯವಾಗಿದೆ. ಈ ಬಗ್ಗೆ ಈ ಧಾರಾವಾಹಿ ನಟ ರಕ್ಷಿತ್‌ ಗೋಪಾಲ್‌ ಅರಸ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸ್ಟಾರ್‌ ಸುವರ್ಣ ವಾಹಿನಿ ಕೂಡ ವಿಶೇಷ ಪೋಸ್ಟ್‌ ಹಂಚಿಕೊಂಡಿದೆ. 

PREV
16
Kaveri kannada Medium Serial ಅಂತ್ಯ; ವಿಶೇಷ ಪೋಸ್ಟ್‌ ಮೂಲಕ ಗೊಂದಲಕ್ಕೆ ತೆರೆ ಎಳೆದ ನಟ ರಕ್ಷಿತ್‌ ಗೋಪಾಲ್‌

ನಟ ರಕ್ಷಿತ್‌ ಗೋಪಾಲ್‌ ಅರಸ್‌ ಅವರು ಈ ಧಾರಾವಾಹಿಯಲ್ಲಿ ಅಗಸ್ತ್ಯ ಬ್ರಹ್ಮಾವರ್‌ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

26

ಈ ಧಾರಾವಾಹಿ ಮೂಲಕ ನಟಿ ಮಹಾಲಕ್ಷ್ಮೀ ಅವರು ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ವರ್ಷಗಳ ಕಾಲ ನಾಯಕಿಯಾಗಿ ಮೆರೆದ ಅವರು ಈ ಸೀರಿಯಲ್‌ ಮೂಲಕ ಅಜ್ಜಿ ಪಾತ್ರಕ್ಕೆ ಬಡ್ತಿ ಪಡೆದಿದ್ದರು. 

36

ಕನ್ನಡ ಶಾಲೆಗಳ ಕುರಿತು ಒತ್ತು ನೀಡಿ ಈ ಧಾರಾವಾಹಿ ಕಥೆ ಹೆಣೆಯಲಾಗಿದೆ. ಇನ್ನು ಅಗಸ್ತ್ಯ, ಕಾವೇರಿ ಲವ್‌ಸ್ಟೋರಿ, ಇದನ್ನು ಮನೆಯವರು ಸ್ವೀಕರಿಸುವ ಬಗ್ಗೆ ಕೂಡ ಕಥೆ ಇತ್ತು. 

46

ರಕ್ಷಿತ್‌ ಗೋಪಾಲ್‌ ಅರಸ್‌ ಮಾತನಾಡಿ, "ನನ್ನ ಎಲ್ಲ ವೀಕ್ಷಕ ಮಿತ್ರರಿಗೆ ನನ್ನ ಅನಂತ ಅನಂತ ನಮಸ್ಕಾರಗಳು. ಕಾವೇರಿ ಕನ್ನಡ ಮೀಡಿಯಂಗೆ ನೀವು ನಮ್ಮನ್ನು ವಿಜಯದ ಹಾದಿಯಲ್ಲಿ ನಡೆಸಿ ಗೆಲುವಿಗೆ ಪಾತ್ರರಾಗಿದ್ದಿರಿ. ಸಂಚಿಕೆಗಳನ್ನು ನೋಡಿ ನೀವು ನೀಡುತ್ತಿದ್ದ ಪ್ರೀತಿ, ಸಲಹೆಗಳು, ಅಭಿನಂದನೆಗಳು ಅಪಾರ. ಕಾವೇರಿ ಕನ್ನಡ ಮೀಡಿಯಂ 474 ಸಂಚಿಕೆಗಳನ್ನು ಪೂರೈಸಿ ಆನಂದಸಾಗರದಲ್ಲಿ ಸುಕಾಂತ್ಯಗೊಂಡಿದೆ.  ಇದಕ್ಕೆ ನಿಜಕ್ಕು ನಿಮ್ಮ ಬೆಂಬಲವೆ ಕಾರಣ . ಇದೆ ಆರೈಕೆ, ಆಶೀರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ. ಹಾಗು ನನ್ನ ಸಹಕಲಾವಿದರಿಗೆ ಮತ್ತು ನಮ್ಮ ತಾಂತ್ರಿಕ ವರ್ಗದವರಿಗೆ ಹೃದಯಪೂರ್ವಕ ಧನ್ಯವಾದಗಳು" ಎಂದು ಹೇಳಿದ್ದಾರೆ. 

56

ಸ್ಟಾರ್‌ ಸುವರ್ಣ ವಾಹಿನಿ ವಿಶೇಷ ಪೋಸ್ಟ್‌ ಹಂಚಿಕೊಂಡು, "ಕನ್ನಡವನ್ನೇ ಉಸಿರಾಗಿಸಿಕೊಂಡು, ಕನ್ನಡದ ಸೊಗಡನ್ನು ಸಾರಿದ ನಮ್ಮ ಕಾವೇರಿ ಕನ್ನಡ ಮೀಡಿಯಂನ ಕತೆಗೆ ನೀವು ತೋರಿದ ಪ್ರೀತಿ ತೋರಿದ ಪ್ರೀತಿ, ಪ್ರೋತ್ಸಾಹ ಅವಿಸ್ಮರಣೀಯ. ಒಂದರ ಅಂತ್ಯ ಮತ್ತೊಂದರ ಶುಭಾರಂಭದ ಸಂಕೇತ. ಈ ಸುಂದರ ಪಯಣದಲ್ಲಿ ಜೊತೆಗಿದ್ದ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು" ಎಂದು ಹೇಳಿದ್ದಾರೆ. 

66

ನಟಿ ಕಮಲಶ್ರೀ ಅವರು ಈ ಧಾರಾವಾಹಿಯಲ್ಲಿ ಕೆಲ ದಿನಗಳ ಕಾಲ ನಟಿಸಿದ್ದರು. ಸದ್ಯ ಅವರೀಗ ಕ್ಯಾನ್ಸರ್‌ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 

Read more Photos on
click me!

Recommended Stories