QR ಕೋಡ್‌ನಲ್ಲಿರುವ ಮೂರು ಮೂಲೆಗಳಲ್ಲಿ ಬಾಕ್ಸ್‌ಗಳ ರಹಸ್ಯವೇನು? 4ನೇ ಮೂಲೆ ಖಾಲಿ ಯಾಕೆ?

Published : Jul 21, 2026, 11:56 AM IST

ಆನ್‌ಲೈನ್ ಪಾವತಿಗಳಲ್ಲಿ ವ್ಯಾಪಕವಾಗಿ ಬಳಸಲಾಗುವ QR ಕೋಡ್‌ಗಳು ಮೂರು ಮೂಲೆಗಳಲ್ಲಿ ಚೌಕಗಳನ್ನು ಹೊಂದಿರುತ್ತವೆ. ಈ ಮೂರು ಬಾಕ್ಸ್‌ಗಳ ಲಾಭ ಏನು? ನಾಲ್ಕನೇ ಮೂಲೆಯನ್ನು ಖಾಲಿಯನ್ನಾಗಿ  ಬಿಟ್ಟಿರಲು ಕಾರಣ ಏನು?

PREV
15
QR Code

ಡಿಜಿಟಲ್ ಜಗತ್ತಿನಲ್ಲಿಂದು ಬಹುತೇಕರು ಆನ್‌ಲೈನ್ ಪೇಮೆಂಟ್ ಮಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆನ್‌ಲೈನ್ ವ್ಯವಹಾರದಲ್ಲಿ QR Code ಹೆಚ್ಚು ಬಳಕೆಯಲ್ಲಿದೆ. ಆನ್‌ಲೈನ್ ಪೇಮೆಂಟ್ ಮಾತ್ರವಲ್ಲ ಆಪ್ ಡೌನ್‌ಲೋಡ್, ಹಾಟ್‌ಸ್ಪಾಟ್ ಶೇರಿಂಗ್ ಸೇರಿದಂತೆ ಹಲವು ಕಡೆ QR Code ಬಳಸುತ್ತಾರೆ. ನೀವು ಯಾವುದೇ QR Code ಗಮನಿಸಿದ್ರೆ ಅದರಲ್ಲಿ ನಿಮಗೆ ಮೂರು ಬಾಕ್ಸ್‌ಗಳು ಕಾಣಿಸುತ್ತವೆ. ಈ ಮೂರು ಬಾಕ್ಸ್‌ಗಳ ಅರ್ಥ ಏನು ಎಂದು ನೋಡೋಣ ಬನ್ನಿ.

25
Finder Pattern

QR Codeನ ಮೂರು ಕೋಣೆಯಲ್ಲಿ ಮೂರು ಬಾಕ್ಸ್‌ಗಳಿರುತ್ತವೆ. ಈ ಚೌಕಗಳನ್ನು Finder Pattern ಎಂದು ಕರೆಯಲಾಗುತ್ತದೆ. ಈ ಚೌಕಗಳ ಕೆಲಸ ಸ್ಕ್ಯಾನರ್ ಅಥವಾ ಸ್ಮಾರ್ಟ್‌ಫೊನ್ ಕ್ಯಾಮೆರಾಗಳಿಗೆ QR Code ಎಲ್ಲಿಂದ ಆರಂಭವಾಗುತ್ತಿದೆ ಮತ್ತು ಇದು ಡೈರೆಕ್ಷನ್ ಏನು ಎಂಬುದನ್ನು ಸೂಚಿಸೋದು ಆಗಿದೆ.

35
ಮೂರು ಬಾಕ್ಸ್‌ ಗುರುತಿಸುವಿಕೆ

QR Code ಸ್ಕ್ಯಾನ್ ಮಾಡಿದಾಗ ಮೊದಲು ನಮ್ಮ ಕ್ಯಾಮೆರಾ ಈ ಮೂರು ಬಾಕ್ಸ್‌ಗಳನ್ನೇ ಗುರುತಿಸುತ್ತದೆ. ಕೋಡ್ ನೇರವಾಗಿದೆಯಾ? ಉಲ್ಟಾ ಆಗಿದೆಯಾ? ಯಾವ ಆಂಗಲ್‌ನಲ್ಲಿದೆ ಎಂಬುದನ್ನು ಗುರುತಿಸಲು ಈ ಬಾಕ್ಸ್ ಗಳು ಸಹಾಯ ಮಾಡುತ್ತವೆ. ಒಂದು ವೇಳೆ ನಾಲ್ಕು ಭಾಗದಲ್ಲಿಯೂ ಬಾಕ್ಸ್ ಮಾಡಿದ್ರೆ ಸ್ಕ್ಯಾನರ್‌ಗೆ ಕೋಡ್ ಯಾವ ಆಂಗಲ್‌ನಲ್ಲಿದೆ ಎಂಬುದನ್ನು ಪತ್ತೆ ಹಚ್ಚೋದು ಕಷ್ಟಕರವಾಗುತ್ತದೆ.

45
ನಾಲ್ಕನೇ ಮೂಲೆ

QR Codeನಲ್ಲಿ ಮೂರು Finder Patternಗಳಿಂದಲೇ ಗುರುತಿಸುವಿಕೆ ಸುಲಭವಾಗುತ್ತದೆ. ಯಾವ ಮೂಲೆ ಖಾಲಿಯಾಗಿದೆ ಎಂಬುದರ ಆಧಾರದ ಮೇಲೆ QR Codeನ ಒರಿಯೆಂಟೇಷನ್ ನಿರ್ಧಾರವಾಗುತ್ತದೆ. ಹಾಗಂತ ಖಾಲಿಯಿರೋ ನಾಲ್ಕನೇ ಮೂಲೆ ವೇಸ್ಟ್ ಅಂತಲ್ಲ. 

ಈ ಭಾಗದಲ್ಲಿ ಸಣ್ಣ ಸಣ್ಣ ಡೇಟಾ ಪ್ಯಾಟರ್ನ್, ಎರರ್ ಕರೆಕ್ಷನ್ ಮತ್ತು ಟೆಕ್ನಿಕಲ್ ಬಳಕೆಗಾಗಿ ಬಳಕೆಯಾಗುತ್ತದೆ. ಇದರಿಂದಲೇ ಕೆಲವೊಮ್ಮೆ QR Codeನ ಕೆಲ ಭಾಗ ಅಳಿಸಿದ್ರೂ ವರ್ಕ್ ಆಗುತ್ತದೆ.

55
ಅತ್ಯಂತ ವಿಶ್ವಾಸರ್ಹ ತಂತ್ರಜ್ಞಾನ

QR Codeನಲ್ಲಿರುವ Finder Pattern ಅತ್ಯಂತ ವಿಶ್ವಾಸರ್ಹ ತಂತ್ರಜ್ಞಾನ ಎಂದು ನಂಬಲಾಗಿದೆ. ನೀವು ಯಾವುದೇ ಆಂಗಲ್‌ನಿಂದಲೂ ಸ್ಕ್ಯಾನ್ ಮಾಡಿದರೂ ಕೆಲಸ ಮಾಡುತ್ತದೆ. ಈ ತಂತ್ರಜ್ಞಾನ ಸ್ಪೀಡ್ ಸ್ಕ್ಯಾನಿಂಗ್, ಗುಡ್ ಎಕ್ಸಪಿರೀಯನ್ಸ್ ಮತ್ತು ಸುರಕ್ಷಿತವಾಗಿದೆ. QR Code ನೋಡಲು ಸಾಮಾನ್ಯ ತಂತ್ರಜ್ಞಾನದಂತೆ ಕಾಣಿಸಿದ್ರೂ ಅತಿ ಹೆಚ್ಚಿನ ಭದ್ರತೆಯನ್ನು ಹೊಂದಿದೆ.

ಇದನ್ನೂ ಓದಿ: Skyroot Aerospace: ನಭಕ್ಕೆ ಹಾರಿದ ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಂ-1

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories