ಜಿಯೋ ಬಳಕೆದಾರರಿಗೆ ಬಂಪರ್‌ ಆಫರ್‌; ಹೊಸ ಪ್ಲಾನ್‌ನಲ್ಲಿ ಅತೀ ಕಡಿಮೆ ಬೆಲೆಗೆ ಅನ್‌ಲಿಮಿಡೆಟ್‌ 5G ಡೇಟಾ

First Published | Dec 7, 2023, 12:21 PM IST

ಮುಕೇಶ್ ಅಂಬಾನಿ ತಮ್ಮ ಜಿಯೋ ಬಳಕೆದಾರರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ: ಅನಿಯಮಿತ ಕರೆಗಳು, 5G ಡೇಟಾ, OTT ಚಂದಾದಾರಿಕೆ ಅತೀ ಕಡಿಮೆ ಬೆಲೆಯಲ್ಲಿದೆ. ಆ ಆಫರ್ ಬಗ್ಗೆ ಇಲ್ಲಿದೆ ಮಾಹಿತಿ.

ಮುಕೇಶ್ ಅಂಬಾನಿ ತಮ್ಮ ರಿಲಯನ್ಸ್ ಜಿಯೋ ಅಂಗಸಂಸ್ಥೆಯೊಂದಿಗೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದಾರೆ. ಭಾರತದ ಶ್ರೀಮಂತ ವ್ಯಕ್ತಿ ಜನಸಾಮಾನ್ಯರಿಗೆ ಮೊಬೈಲ್‌ ಕೈಗೆಟುಕುವ ಬೆಲೆಯಲ್ಲಿ ದೊರಕುವಂತೆ ಮಾಡಿದ್ದಾರೆ. ಹಾಗೆಯೇ ಸದ್ಯ ಮುಕೇಶ್ ಅಂಬಾನಿ ತಮ್ಮ ಜಿಯೋ ಬಳಕೆದಾರರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಮುಕೇಶ್‌ ಅಂಬಾನಿ ಜನರಿಗೆ ಅನುಕೂಲವಾಗುವಂತೆ ಹಲವಾರು ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇರುತ್ತಾರೆ. ರಿಲಯನ್ಸ್ ಜಿಯೋ ಯೋಜನೆಗಳ ಗುಂಪನ್ನು ಇತರ ಸೇವೆಗಳೊಂದಿಗೆ ಮತ್ತು ಜಿಯೋಸಿನಿಮಾ ಮತ್ತು ಸೋನಿ ಎಲ್ಐವಿಯಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಸಂಯೋಜಿಸಲಾಗಿದೆ. 

Latest Videos


ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಜಿಯೋ ಬಳಕೆದಾರರಿಗಾಗಿ ಸದ್ದಿಲ್ಲದೆ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಇದು ಬಹುತೇಕ ಗ್ರಾಹಕರಿಗೆ ಖುಷಿ ನೀಡುವ ಬಂಪರ್ ಆಫರ್ ಆಗಿದೆ.

Reliance Jioನ ಹೊಸ ಯೋಜನೆಯು ಅನಿಯಮಿತ ಕರೆಗಳು, 5G ಡೇಟಾವನ್ನು ನೀಡುತ್ತದೆ. ಇದು Sony LIV ಮತ್ತು Zee5 ನಂತಹ ವಿವಿಧ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯೊಂದಿಗೆ ಬರುತ್ತದೆ. ಹೊಸ ಲೋಡ್ ಮಾಡಿದ ಜಿಯೋ ಪ್ರಿಪೇಯ್ಡ್ ಪ್ಲಾನ್ ಬೆಲೆ 909 ರೂ. ಆಗಿದೆ.

909ರ ಹೊಸ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಯೋಜನೆಯು 84 ದಿನಗಳ ವರೆಗೆ ವ್ಯಾಲಿಡಿಟಿ ಹೊಂದಿದೆ. ಇದು ಬಳಕೆದಾರರಿಗೆ ದಿನಕ್ಕೆ 2GB 5G ಡೇಟಾ, ಅನ್‌ ಲಿಮಿಟೆಡ್‌ ಕಾಲ್ಸ್ ಮತ್ತು ದಿನಕ್ಕೆ 100 ಮೆಸೇಜ್‌ನ್ನು ಒದಗಿಸುತ್ತದೆ. ಇದು JioTV ಅಪ್ಲಿಕೇಶನ್ ಮೂಲಕ Sony LIV ಮತ್ತು Zee5 ಜೊತೆಗೆ JioCinema, JioCloudಗೆ ಚಂದಾದಾರಿಕೆಗಳನ್ನು ಸಹ ನೀಡುತ್ತದೆ.

ಇತ್ತೀಚೆಗೆ, ಕಂಪನಿಯು ಜಿಯೋ ಏರ್‌ಫೈಬರ್‌ಗೆ 401 ರೂ. ಬೆಲೆಯ ಹೊಸ ಬೂಸ್ಟರ್ ಪ್ಲಾನ್‌ನ್ನು ಘೋಷಿಸಿತು. ಇದು 401 ರೂ.ನ ಡೇಟಾ ಬೂಸ್ಟರ್ ಪ್ಲಾನ್ 1000GB ಡೇಟಾವನ್ನು ಒದಗಿಸುತ್ತದೆ. 
 

ಹೆಸರೇ ಸೂಚಿಸುವಂತೆ, ಇದು ಡೇಟಾ ಬೂಸ್ಟರ್ ಯೋಜನೆಯಾಗಿದೆ. ಇದನ್ನು ಪ್ರವೇಶಿಸಲು ಒಬ್ಬರು ಸಾಮಾನ್ಯ Jio AirFiber ಅಥವಾ Jio AirFiber Max ಯೋಜನೆಯನ್ನು ಹೊಂದಿರಬೇಕು. ಸೀಮಿತ ಅವಧಿಗೆ ಹೆಚ್ಚುವರಿ ಡೇಟಾ ಅಗತ್ಯವಿರುವ ಬಳಕೆದಾರರಿಗಾಗಿ ಹೊಸ ಯೋಜನೆಯಾಗಿದೆ.

click me!