ಏಷ್ಯಾದ ಹಾಗೂ ಭಾರತದ ನಂಬರ್ 1 ಶ್ರೀಮಂತ ಮುಕೇಶ್ ಅಂಬಾನಿ. ಹಲವಾರು ಕೋಟಿ ಕೋಟಿ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಇದು 16.18 ಟ್ರಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಅಂಗಸಂಸ್ಥೆಗಳನ್ನು ಹೊಂದಿದೆ.
ಮುಕೇಶ್ ಅಂಬಾನಿ ಹೊಸ ಹೊಸ ಬಿಸಿನೆಸ್‌ನಲ್ಲಿ ಹೂಡಿಕೆ ಮಾಡಿ ಹಲವು ಪ್ರಾಡಕ್ಟ್‌ಗಳನ್ನು ಕಡಿಮೆ ಬೆಲೆಗೆ ಹೊರ ತರುತ್ತಾರೆ. ಕಳೆದ ಕೆಲವು ವರ್ಷಗಳಿಂದ, ಮುಕೇಶ್ ಅಂಬಾನಿ ಅನೇಕ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ್ದಾರೆ. ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿ ಅಗ್ರಸ್ಥಾನದಲ್ಲಿ ಹೊರಹೊಮ್ಮಿವೆ.
ತಂತ್ರಜ್ಞಾನ ಮತ್ತು ವ್ಯವಹಾರ ಕೌಶಲ್ಯಗಳ ಮಿಶ್ರಣದೊಂದಿಗೆ ಅದೇ ವಿಧಾನವನ್ನು ಅನುಸರಿಸುತ್ತಿರುವ ಮುಕೇಶ್ ಅಂಬಾನಿ ಈಗ ಭಾರತದಲ್ಲಿ ಬಹು ಶತಕೋಟಿ ಡಾಲರ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಭಾರತದಲ್ಲಿ ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮಾರುಕಟ್ಟೆ ಗಾತ್ರವು ಪ್ರಸ್ತುತ ಸುಮಾರು 6 ಶತಕೋಟಿ ಡಾಲರ್‌ಗಳು ಎಂದು ಅಂದಾಜಿಸಲಾಗಿದೆ. ಸದ್ಯ ಈ ಉದ್ಯಮವನ್ನು ಪ್ರವೇಶಿಸಲು ಮುಕೇಶ್ ಅಂಬಾನಿ ಭಾರತದಲ್ಲಿ 15000 ರೂ.ಗೆ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವರದಿಯ ಪ್ರಕಾರ, ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ, ಲ್ಯಾಪ್‌ಟಾಪ್ ತಯಾರಕರಾದ HP, Acer, Lenovo ಮತ್ತು ಇತರರೊಂದಿಗೆ ಮಾತುಕತೆ ನಡೆಸುತ್ತಿದೆ. ಮುಂಬರುವ ತಿಂಗಳುಗಳಲ್ಲಿ 15000 ರೂ.ಗಳ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಸಾಮಾನ್ಯವಾಗಿ ಇಂಥಾ ಲ್ಯಾಪ್‌ಟಾಪ್‌ನ್ನು ತಯಾರಿಸಲು ಹೆಚ್ಚು ವೆಚ್ಚವಾಗುತ್ತದೆ. ಆದರೆ ಜಿಯೋ ಲ್ಯಾಪ್‌ಟಾಪ್‌ನ ಬೆಲೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಏಕೆಂದರೆ ಅದು ಕ್ಲೌಡ್‌ನಿಂದ ಚಾಲಿತವಾಗುತ್ತದೆ. ಇದರರ್ಥ ಲ್ಯಾಪ್‌ಟಾಪ್‌ನ ಪ್ರಕ್ರಿಯೆ ಮತ್ತು ಸಂಗ್ರಹಣೆಯು ರಿಲಯನ್ಸ್ ಜಿಯೋ ನೀಡುವ ಕ್ಲೌಡ್ ಕಂಪ್ಯೂಟಿಂಗ್ ಸೇವೆಯಾದ ಜಿಯೋ ಕ್ಲೌಡ್‌ನಲ್ಲಿ ನಡೆಯುತ್ತದೆ.
ಅತಿ ಕಡಿಮೆ ಲ್ಯಾಪ್‌ಟಾಪ್‌ನ್ನು ಒದಗಿಸಿಕೊಡುವ ಮೂಲಕ ಮುಕೇಶ್ ಅಂಬಾನಿ ಮೊದಲ ಬಾರಿಗೆ ಲ್ಯಾಪ್‌ಟಾಪ್ ಖರೀದಿದಾರರು ಮತ್ತು ಶಿಕ್ಷಣ ಸಂಸ್ಥೆಗಳನ್ನು ತಲುಪಲು ದಾರಿ ಮಾಡಿಕೊಡುತ್ತಿದ್ದಾರೆ.
ಇದು ಜಿಯೋ ಕ್ಲೌಡ್ ಚಂದಾದಾರಿಕೆ ಮಾದರಿಯಲ್ಲಿ ಬರುತ್ತದೆ ಮತ್ತು ಒಂದೇ ಲ್ಯಾಪ್‌ಟಾಪ್‌ನಲ್ಲಿ ಬಹು ಚಂದಾದಾರಿಕೆಗಳನ್ನು ಪ್ರವೇಶಿಸಬಹುದು. ವರದಿಯ ಪ್ರಕಾರ, ಕಂಪನಿಯು ಈಗಾಗಲೇ HP Chromebook ನಲ್ಲಿ ಪ್ರಯೋಗಗಳನ್ನು ನಡೆಸಲು ಪ್ರಾರಂಭಿಸಿದೆ.