ವಾಟ್ಸಪ್‌ನಲ್ಲಿ 3 ಹಿಡನ್ ಫೀಚರ್: ನೋಡಿ ನೀವೂ ಹೇಳ್ತೀರಾ ಏನ್ ಸೂಪರ್ ಗುರೂ!

First Published | Feb 17, 2020, 7:32 PM IST

ಈಗ ಮಾತುಕತೆ ಅಂದ್ರೆ ವಾಟ್ಸಪ್‌, ಅಂಚೆ ಕಚೇರಿಯೂ ವಾಟ್ಸಪ್, ಇಮೇಲ್ ಕೂಡಾ ವಾಟ್ಸಪ್, ಮನೆ ತೋರಿಸೋದಕ್ಕೂ ವಾಟ್ಸಪ್, ಹೆಣ್ಣು ನೋಡೋದಿಕ್ಕೂ ವಾಟ್ಸಪ್, ಹಣ ಕಳುಹಿಸೋದಕ್ಕೂ ವಾಟ್ಸಪ್.. ವ್ಯವಹಾರದ ವಿಧಾನವೂ ವಾಟ್ಸಪ್‌.... ಹೀಗೆ ಎಲ್ಲದಕ್ಕೂ ವಾಟ್ಸಪ್ ಬೇಕೇ ಬೇಕು .... ಆದರೆ ವಾಟ್ಸಪ್‌ನಲ್ಲಿ ಇನ್ನೂ ಹಲವು ಫೀಚರ್‌ಗಳಿವೆ, ಅದರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇಲ್ಲಿದೆ ಅಂತಹ ಮೂರು ಫೀಚರ್‌ಗಳ ಪರಿಚಯ...

ಹೈಕ್ವಾಲಿಟಿ ಫೋಟೋ ಕಳುಹಿಸುವುದಕ್ಕೂ ಒಂದು ತಂತ್ರವಿದೆ. ಸಾಮಾನ್ಯವಾಗಿ ಅಟ್ಯಾಚ್‌ಮೆಂಟ್‌ಗೆ ಹೋಗಿ ಫೋಟೋ ಅಟ್ಯಾಚ್ ಮಾಡಿ ಕಳುಹಿಸುತ್ತೀವಿ. ಅದರಲ್ಲಿ ಕ್ವಾಲಿಟಿ ಜೊತೆಗೆ ರಾಜಿ ಮಾಡಕೋಬೇಕಾಗುತ್ತೆ.
ಹೈಕ್ವಾಲಿಟಿ ಫೋಟೋ ಕಳುಹಿಸ್ಬೇಕಾದ್ರೆ ಹೀಗೆ ಮಾಡಿ. ಅಟ್ಯಾಚ್‌ಮೆಂಟ್‌ಗೆ ಹೋಗಿ, ಡಾಕ್ಯಮೆಂಟ್ ಸೆಲೆಕ್ಟ್ ಮಾಡಿ. ಅಲ್ಲಿ 'ಬ್ರೌಸ್ ದಿ ಡಾಕ್ಸ್' ಎಂಬ ಆಯ್ಕೆ ಒತ್ತಿ. ಈ ಆಯ್ಕೆ ಮೂಲಕ ನೀವು ಹೈಕ್ವಾಲಿಟಿ ಫೋಟೋವನ್ನು ಡಾಕ್ಯುಮೆಂಟ್ ರೀತಿ ಕಳುಹಿಸಬಹುದು.
Tap to resize

GIF ಬಳಸಿ ಚಾಟ್ ಮಾಡೋದ್ರಲ್ಲಿ ಮಜಾ ಇದೆ. ಇರೋ GIF ಬಳಸೋದೆ ಅಷ್ಟೇ ಅಲ್ಲ, ನೀವೇ ನಿಮ್ದೇ ಆದ GIF ರೆಡಿ ಮಾಡ್ಬಹುದು. ಆರು ಸೆಕೆಂಡಿನ GIF ಸೃಷ್ಟಿಸಬಹುದು.
ಅದಕ್ಕೆ, ಚಾಟ್‌ ವಿಂಡೋಗೆ ಹೋಗಿ, ಅಟ್ಯಾಚ್‌ಮೆಂಟ್‌ ಆಪ್ಶನ್ ಒತ್ತಿ ಗ್ಯಾಲರಿಯಿಂದ ವಿಡಿಯೋ ಸೆಲೆಕ್ಟ್ ಮಾಡಿ. ಅಲ್ಲೇ ಕಾಣಿಸಿಕೊಳ್ಳುವ ಟ್ರಿಮ್ಮಿಂಗ್ ಟೂಲ್ ಬಳಸಿ 6 ಸೆಕೆಂಡ್ ಅಥವಾ ಕಡಿಮೆ ಇರುವ ವಿಡಿಯೋ ರೆಡಿಮಾಡಿ . ಅಲ್ಲೇ ಕೆಳಗೆ ಕಾಣಿಸಿಕೊಳ್ಳುವ ಬಾಕ್ಸ್ ಪ್ರೆಸ್ ಮಾಡಿ. ಅಷ್ಟೇ! ಕಳುಹಿಸೋದಿಕ್ಕೆ GIF ರೆಡಿ!
ಗ್ಯಾಲರಿಯಿಂದ ಫೋಟೋ ಅಡಗಿಸಿ! ನಿಮ್ಮ ಸಂಗಾತಿ ತೀರಾ ಖಾಸಗಿ ಫೋಟೋ ವಾಟ್ಸಪ್‌ ಮೂಲಕ ಹಂಚಿಕೊಳ್ಳುತ್ತಾರೆ ಅಂತಾ ಭಾವಿಸಿ. ಗ್ಯಾಲರಿಯಲ್ಲಿ ಇಟ್ರೆ ಕಷ್ಟ, ಯಾವಾಗ್ಲಾದ್ರೂ ಏನಾದ್ರೂ ಹುಡುಕುವಾಗ ಯಾರಾದ್ರೂ ನೋಡ್ಬಿಟ್ರೆ, ಕಥೆ ಗೋವಿಂದ! ಹಾಗಾಗಿ, ಅಂಥಾ ಮೀಡಿಯಾ ಫೈಲ್‌ಗಳನ್ನು ಅಡಗಿಸಿಡೋ ಸೌಲಭ್ಯವೂ ವಾಟ್ಸಪ್‌ನಲ್ಲಿದೆ.
ವಾಟ್ಸಪ್‌ ಓಪನ್ ಮಾಡಿ, ಅಂಥ ಕಾಂಟ್ಯಾಕ್ಟ್ ಅಥವಾ ಗ್ರೂಪನ್ನು ಓಪನ್ ಮಾಡಿ. ಹೆಸರನ್ನು ಟ್ಯಾಪ್ ಮಾಡಿ. 'Media Visibility' ಎಂದು ಕಾಣಿಸಿಕೊಳ್ಳುತ್ತೆ. ಅಲ್ಲಿ NO ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಅಷ್ಟೇ, ಆನಂತರ ಆ ವ್ಯಕ್ತಿ ಅಥ್ವಾ ಗ್ರೂಪ್‌ನಲ್ಲಿ ಬಂದ ಫೋಟೋಗಳು ಗ್ಯಾಲರಿಯಲ್ಲಿ ಕಾಣಿಸಿಕೊಳ್ಳಲ್ಲ!

Latest Videos

click me!