ಕಳುಹಿಸಿದವರಿಗೂ, ಮೆಸೇಜನ್ನು ಸ್ವೀಕರಿಸದವರಿಗೂ ಮೆಸೇಜ್ ಡಿಲೀಟ್ ಆಗ್ಬೇಕಾದ್ರೆ, ಇಬ್ಬರೂ ವಾಟ್ಸಪ್‌ನ ಅಪ್ಡೇಟೆಡ್ ಆವೃತ್ತಿ ಬಳಸಬೇಕು. ಇಲ್ದಿದ್ರೆ 'ಡಿಲೀಟ್ ಫಾರ್ ಎವ್ರಿ ಒನ್' ವರ್ಕ್ ಆಗಲ್ಲ. ಮೆಸೇಜ್ ಡಿಲೀಟ್ ಆಗಲ್ಲ!
'ಡಿಲೀಟ್ ಫಾರ್ ಎವ್ರಿ ಒನ್' ಮೂಲಕ ಆ್ಯಪಲ್ ಫೋನ್‌ನಲ್ಲಿ, ಚಾಟ್ ಡಿಲೀಟ್ ಆದ್ರೂ ಸೇವ್ ಆಗಿರೋ ಮಿಡಿಯಾ ಫೈಲ್‌ಗಳು ಡಿಲೀಟ್ ಆಗಲ್ಲ. ಆ್ಯಪಲ್ ಪ್ರೈವೆಸಿ ಪಾಲಿಸಿಯು ಬಳಕೆದಾರರ ಗ್ಯಾಲರಿಯನ್ನು ಆ್ಯಕ್ಸೆಸ್ ಮಾಡೋ ಅನುಮತಿ ಯಾರಿಗೂ ನೀಡಲ್ಲ.
ನೀವು 'ಡಿಲೀಟ್ ಫಾರ್ ಎವ್ರಿ ಒನ್' ಮಾಡೋ ಮುಂಚೆ ಮೆಸೇಜ್ ಸ್ವೀಕರಿಸಿದವರು ಮೆಸೇಜನ್ನು ಓದಿರುವ ಸಾಧ್ಯತೆಯೂ ಇರುತ್ತೆ. ಮೆಸೇಜ್ ಡಿಲೀಟ್ ಆದ್ರೂ, ಆ ಕಡೆಯವರು ನಿಮ್ಮ ಸಂದೇಶವನ್ನು ಗಮನಿಸಿರುತ್ತಾರೆ, ಹಾಗೂ ಸೇವ್ ಮಾಡಿಡುವ ಸಾಧ್ಯತೆಯೂ ಇರುತ್ತೆ.
'ಡಿಲೀಟ್ ಫಾರ್ ಎವ್ರಿ ಒನ್' ಯಶಸ್ವಿಯಾಗಿದೆಯೋ ಇಲ್ಲವೋ ಎಂದು ವಾಟ್ಸಪ್ ನಿಮಗೆ ನೋಟಿಫಿಕೇಶನ್ ಕಳುಹಿಸಲ್ಲ. ಆದುದರಿಂದ ಮೆಸೇಜ್ ಡಿಲೀಟ್ ಆಗಿದೆಯೋ ಇಲ್ಲವೋ ತಿಳಿಯುವ ಬೇರೆ ಯಾವ ವಿಧಾನವೂ ಇಲ್ಲ.
ಮೊದಲು 7 ನಿಮಿಷಗಳಿಗೆ ಸೀಮಿತವಗಿದ್ದ, 'ಡಿಲೀಟ್ ಫಾರ್ ಎವ್ರಿ ಒನ್' ಸೌಲಭ್ಯ, ಈಗ ಒಂದು ಗಂಟೆಗೆ ವಿಸ್ತರಣೆಯಾಗಿದೆ. ಅದರ ಬಳಿಕ ಡಿಲೀಟ್ ಮಾಡಿದ್ರೆ ನೀವು ಕಳುಹಿಸಿದ ಮೆಸೇಜ್ ಡಿಲೀಟ್ ಆಗಲ್ಲ.