Most Followed Instagram: ಟಾಪ್‌ 10ರಲ್ಲಿ ರೊನಾಲ್ಡೊ, ಕೈಲಿ ಜೆನ್ನರ್‌, ಮೆಸ್ಸಿ!

Published : Jan 19, 2022, 10:39 AM ISTUpdated : Jan 19, 2022, 11:15 AM IST

ಮೆಟಾ ಒಡೆತನದ ಇನ್ಸ್ಟಾಗ್ರಾಮ್‌ ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ಸೋಷಿಯಲ್‌ ಮೀಡಿಯಾಗಳಲ್ಲೊಂದು. ಅಷ್ಟೇ ಅಲ್ಲದೇ ಇದು ಯುವಜನಾಂಗದ ಫೇವರೇಟ್‌ ಕೂಡ ಹೌದು!. ಫೋಟೋಸ್‌‌ ಶೇರಿಂಗ್‌, ರೀಲ್ಸ್‌ ಹಾಗೂ ಚಾಟಿಂಗ್‌ನಿಂದ ಮಾರ್ಕೆಂಟಿಂಗ್‌ವರೆಗೂ ಹಲವು ಫೀಚರ್ಸ್‌ಗಳಿಗೆ ಇನ್ಸ್ಟಾಗ್ರಾಮ್‌ ವೇದಿಕೆಯಾಗಿದೆ. Instagram 2010 ರಲ್ಲಿ ಫೋಟೋ-ಶೇರಿಂಗ್ ಅಪ್ಲಿಕೇಶನ್ ಆಗಿ ಪ್ರಾರಂಭವಾದ ಕ್ಷಣದಿಂದ ಇದು ಜನಪ್ರಿಯತೆಯನ್ನು ಪಡೆದುಕೊಂಡಿದೆ.  ಪ್ರಸ್ತುತ ಇನ್ಸಾಗ್ರಾಮ್‌ 1 ಬಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಹಾಗಾದ್ರೆ ಇನ್ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಖಾತೆಗಳು ಯಾವುವು ಗೊತ್ತಾ? ಇಲ್ಲಿದೆ ಡಿಟೇಲ್ಸ್‌ 

PREV
110
Most Followed Instagram: ಟಾಪ್‌ 10ರಲ್ಲಿ ರೊನಾಲ್ಡೊ, ಕೈಲಿ ಜೆನ್ನರ್‌, ಮೆಸ್ಸಿ!

1)ಇನ್ಸ್ಟಾಗ್ರಾಮ್‌ನ ಅಧಿಕೃತ ಖಾತೆಯು ಇಡೀ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಅನುಸರಿಸಲ್ಪಡುವ ಖಾತೆಯಾಗಿದೆ.  ಈ ಖಾತೆಯೂ ಒಟ್ಟು 450 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಈ ಅಧಿಕೃತ ಖಾತೆಯಿಂದ ಸುಮಾರು 7,000 ಪೋಸ್ಟ್‌ಗಳನ್ನು ಮಾಡಲಾಗಿದೆ. ಇನ್ಸಾಗ್ರಾಮ್‌ ಖಾತೆಯೂ  ಲೇಟೆಸ್ಟ್‌ ಫೋಸ್ಟ್‌ ಸಂಘಟಕಿ ಮತ್ತು ತಂತ್ರಜ್ಞೆ ಚೆಲ್ಸಿಯಾ ಮಿಲ್ಲರ್ (Chelsea Miller) ಫೋಟೋ ಶೇರ್‌ ಮಾಡಿದೆ.

210

2)ಇಮ್ಯಾಂಚೆಸ್ಟರ್ ಯುನೈಟೆಡ್‌ಗೆ ತನ್ನ ಭವ್ಯವಾದ ಪುನರಾಗಮನವನ್ನು ಮಾಡಿದ ನಂತರ, ರೊನಾಲ್ಡೊನ (Cristiano Ronaldo) ಸ್ಟಾರ್ಡಮ್ ಮತ್ತು ಫಾಲೋವರ್ಸ್ ಎರಡೂ ಏರುತ್ತಲೇ ಇದೆ. ಪ್ಲಾಟ್‌ಫಾರ್ಮ್‌ನಲ್ಲಿ 200 ಮಿಲಿಯನ್ ಅನುಯಾಯಿಗಳನ್ನು ತಲುಪಿದ ಮೊದಲ ವ್ಯಕ್ತಿ ರೋನಾಲ್ಡೋ. ಸದ್ಯ ರೋನಾಲ್ಡೋ 391 ಮಿಲಿಯನ್‌ ಫಾಲೋವರ್ಸ್‌ ಹೋಂದಿದ್ದಾರೆ

310

3)ಕೈಲಿ ಕಾಸ್ಮೆಟಿಕ್ಸ್‌ ಕಂಪನಿಯ ಸಂಸ್ಥಾಪಕಿ, ಮಾಡೆಲ್‌ ಕೈಲಿ ಜೆನ್ನರ್‌ (Kylie Jenner) ಇನ್ಸ್ಟಾಗ್ರಾಮ್‌ನಲ್ಲಿ (Kylie Jenner Instgram) 300 ಮಿಲಿಯನ್‌(30 ಕೋಟಿ) ಹಿಂಬಾಲಕರನ್ನು ಹೊಂದಿದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಈ ದಾಖಲೆ ಪಾಪ್‌ ಸ್ಟಾರ್‌ ಅರಿಯಾನ ಗ್ರಾಂಡೆ (29 ಕೋಟಿ) ಅವರ ಹೆಸರಲ್ಲಿತ್ತು. ಇದೀಗ ಗ್ರಾಂಡೆ ದಾಖಲೆ ಮುರಿದಿರುವ ಕೈಲಿ ಜೆನ್ನರ್‌ (24), ಫುಟ್‌ಬಾಲ್‌ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ(39 ಕೋಟಿ ಹಿಂಬಾಲಕರು) ಬಳಿಕ ಅತೀ ಹೆಚ್ಚು ಫಾಲೋವರ್‌ಗಳನ್ನ ಹೊಂದಿರುವ ವ್ಯಕ್ತಿಯೆನಿಸಿದ್ದಾರೆ. ಕೈಲಿ ಸದ್ಯ 303 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

410

4)ಫುಟ್‌ಬಾಲ್‌ನಲ್ಲಿ ರೊನಾಲ್ಡೊ ಅವರ ದೊಡ್ಡ ಪ್ರತಿಸ್ಪರ್ಧಿಯಂತೆ, ಇನ್ಸ್ಟಾಗ್ರಾಮ್‌ನಲ್ಲಿ ಕೂಡ ಲಿಯೊನೆಲ್ ಮೆಸ್ಸಿ  (Lionel Messi) ರೋನಾಲ್ಡೋ ಹಾಗೂ ಕೈಲಿ ನಂತರದ ಸ್ಥಾನದಲ್ಲಿದ್ದು 301 ಫಾಲೋವರ್ಸ್‌ ಹೊಂದಿದ್ದಾರೆ. ಅರ್ಜೆಂಟೀನಾದ ಫಾರ್ವರ್ಡ್ ಆಟಗಾರ ಸಾಮಾಜಿಕ ಮಾಧ್ಯಮದ ಆಟದಲ್ಲಿ  ಸಾಕಷ್ಟು ಆಕ್ಟಿವ್‌ ಆಗಿದ್ದು  #3 ಸ್ಥಾನಕ್ಕಾಗಿ ಕೈಲಿ ಜೆನ್ನರ್‌ನೊಂದಿಗೆ ಸ್ಪರ್ಧಿಸುತ್ತಿದ್ದಾರೆ

510

5)ಇನ್ಸ್ಟಾಗ್ರಾಮ್ ಪ್ರಾಬಲ್ಯಕ್ಕಾಗಿ ಮತ್ತೊಂದು ಪ್ರತಿಸ್ಪರ್ಧಿಯಾಗಿ, ಪೀಪಲ್ಸ್ ಚಾಂಪ್ ಡ್ವೇನ್ ಜಾನ್ಸನ್ (Dwayne Johnson) ಮತ್ತು ಅರಿಯಾನಾ ಗ್ರಾಂಡೆ 5 ನೇ ಅತಿ ಹೆಚ್ಚು ಫಾಲೋವರ್ಸ್ ಸ್ಥಾನಕ್ಕಾಗಿ  ಪೈಪೋಟಿಯಲ್ಲಿದ್ದಾರೆ. ಪ್ರತಿ ಕೆಲವು ವಾರಗಳಿಗೊಮ್ಮೆ ಈ ಅಂಕಿ ಸಂಖ್ಯೆಗಳು ಬದಲಾಗುತ್ತವೆ. ಪ್ರಸ್ತುತ 5ನೇ ಸ್ಥಾನ  ಹಾಲಿವುಡ್ ಚಲನಚಿತ್ರ ನಟ, ಮತ್ತು ಮಾಜಿ WWE ಚಾಂಪಿಯನ್ ದಿ ರಾಕ್‌ಗೆ ಹೋಗುತ್ತದೆ. ರಾಕ್‌ ಸದ್ಯ 291 ಮಿಲಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

610

6)ಅರಿಯಾನಾ ಗ್ರಾಂಡೆಯನ್ನು (Ariana Grande) ಅನುಸರಿಸಲು ಯಾರು ಬಯಸುವುದಿಲ್ಲ? ಗ್ರ್ಯಾಮಿ-ವಿಜೇತ ಗಾಯಕಿ ಮತ್ತು ದಿ ವಾಯ್ಸ್‌ ಕಾರ್ಯಕ್ರಮದ ಕೋಚ್‌ 2019 ರಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಪಡೆದ ಸಂಗೀತಗಾರ ಎಂಬ ಪಟ್ಟ ಪಡೆದರು. ಸದ್ಯ ಅರಿಯಾನಾ  290 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

710

7)ಸಲೆನಾ ಗೊಮೆಜ್ (Selena Gomez) ಅವರ ಇನ್ಸ್ಟಾ ಫೀಡ್ ಅವರ ಮಾನವ ಹಕ್ಕುಗಳ‌ (Human Rights) ಬಗ್ಗೆ ಅಭಿಪ್ರಾಯಗಳು, ಬ್ಯೂಟಿ ಬ್ರ್ಯಾಂಡ್ Rare, ಚಲನಚಿತ್ರ ಮತ್ತು ಸಂಗೀತದಲ್ಲಿನ ಅವರ ಕೆಲಸ, ಸೃಜನಾತ್ಮಕ ಭಾಗ (ಅವಳ ಅನೇಕ ಸುಂದರವಾದ ಚಿತ್ರೀಕರಣದ ಚಿತ್ರಗಳು) ಮತ್ತು ಅವರು ತುಂಬಾ ಆಸಕ್ತಿ ಹೊಂದಿರುವ ಅನೇಕ ವಿಷಯಗಳ ಬಗ್ಗೆ ಟಿಪ್ಪಣಿಗಳ ಆಸಕ್ತಿದಾಯಕ ಮಿಶ್ರಣವಾಗಿದೆ. ಪ್ರಸ್ತುತ ಸಲೆನಾ 290 ಮಿಲಿಯನ್ನ ಫಾಲೋವರ್ಸ್‌ ಹೊಂದಿದ್ದಾರೆ. 

810

8) ವಿಶ್ವದ ಅತ್ಯಂತ ಪ್ರಸಿದ್ಧ ಮುಖಗಳಲ್ಲಿ ಒಂದಾಗಿದ್ದರೂ ಸಹ,ಕಿಮ್ ಕಾರ್ಡಶಿಯಾನ್ (Kim Kardashian) ತನ್ನ ಪತಿ ಕಾನ್ಯೆ ವೆಸ್ಟ್ (Kanye West) ಜತೆಗಿನ ವಿವಾದದ ನಂತರದ ಜೀವನದಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದಾಳೆ ಮತ್ತು  ಕಿಮ್‌ರನ್ನು ಟಾಪ್‌ 10 ಫಾಲೋವರ್ಸ್‌ ಪಡೆದಿರುವ ಪಟ್ಟಿಯಲ್ಲಿ ನೋಡಲು ಆಶ್ಚರ್ಯವೇನಿಲ್ಲ. ಪ್ರಸ್ತುತ ಕಿಮ್‌ 280 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

910

9)ಗಾಯಕಿ-ನಟಿ-ಗೀತರಚನೆಕಾರ-ನಿರ್ಮಾಪಕಿ-ನರ್ತಕಿ-ಉದ್ಯಮಿ-ನಿರ್ದೇಶಕಿ ಬಿಯೋನ್ಸ್ (Beyoncé) ತಮ್ಮ lemonadeನೊಂದಿಗೆ ಕಲಾವಿದರು ಆಲ್ಬಮ್‌ಗಳನ್ನು  ಬಿಡುಗಡೆ ಮಾಡುವ ವಿಧಾನಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಪ್ರಸ್ತುತ ಬಿಯೋನ್ಸ್ 233 ಮಿಲಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

1010

10)ಕೆನಡಾದ ಗಾಯಕ-ಗೀತರಚನೆಕಾರ ಜಸ್ಟಿನ್  ಇನ್ಸ್ಟಾಗ್ರಾಮ್ ಫೀಡ್ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಜಸ್ಟಿನ್ ಪೋಸ್ಟ್‌ಗಳು ಸಾಮಾನ್ಯವಾಗಿ ಪ್ರದರ್ಶಕರಾಗಿ ಅವರ ಕೌಶಲ್ಯಗಳನ್ನು ಗೌರವಿಸುವುದು, ಕೆಲವು ಉತ್ತಮ ಮಾತುಗಳು (Quotes) ಮತ್ತು ಅವರ ಪತ್ನಿ ಹೈಲಿ ಬಾಲ್ಡ್ವಿನ್ ಅವರೊಂದಿಗಿನ ಚಿತ್ರಗಳನ್ನು ಒಳಗೊಂಡಿರುತ್ತವೆ. ಸದ್ಯ ಜಸ್ಟಿನ್ ಬೈಬರ್ ( Justin Bieber) 216 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

Read more Photos on
click me!

Recommended Stories