Scammersಯಿಂದ ನಿಮ್ಮ ಆ್ಯಂಡ್ರಾಯ್ಡ್ ಫೋನ್‌ ರಕ್ಷಿಸಲು ಇಲ್ಲಿವೆ 8 ಸುಲಭ ಉಪಾಯಗಳು!

First Published Nov 16, 2021, 12:50 PM IST

ನೀವು Android ಫೋನ್ ಅನ್ನು ಬಳಸುತ್ತಿದ್ದರೆ ನೀವು ಏನು ಡೌನ್‌ಲೋಡ್ (Download) ಮಾಡುತ್ತಿದ್ದೀರಿ ಮತ್ತು  ಯಾವ ಅಪ್ಲಿಕೇಶನ್‌ಗಳು  ನಿಮ್ಮ ಖಾಸಗಿ ಮಾಹಿತಿಯ ಹಂಚಿಕೊಳ್ಳಲು ಅನುಮತಿ ಹೊಂದಿವೆ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ಆಂಡ್ರಾಯ್ಡ್ ವಿಶ್ವದ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್ (Operating System) ಆಗಿರುವುದರಿಂದ ಹ್ಯಾಕರ್‌ಗಳು, ಸ್ಕ್ಯಾಮರ್‌ಗಳು ಮತ್ತು ಜಾಹೀರಾತುದಾರರಿಂದ ಬಳಸಲ್ಪಡುತ್ತವೆ. ಮಾಲ್‌ವೇರ್‌ನ (Malware) ಹೊರತಾಗಿ, ನಿಮಗೆ ನಿರಂತರವಾಗಿ ಜಾಹೀರಾತುಗಳನ್ನು ತೋರಿಸುವ ಮೂಲಕ ಹಣವನ್ನು ಗಳಿಸುವ ಲೆಕ್ಕವಿಲ್ಲದಷ್ಟು ಅಪ್ಲಿಕೇಶನ್‌ಗಳಿವೆ, ಇದರಿಂದಾಗಿ ನಿಮ್ಮ ಫೋನ್ ನಿಧಾನವಾಗುತ್ತದೆ. ನಿಮ್ಮ Android ಫೋನ್‌ನಲ್ಲಿ ನೀವು 8 ಬದಲಾವಣೆಗಳನ್ನು ಮಾಡಿದರೆ ಸ್ಕ್ಯಾಮರ್‌ಗಳಿಂದ ನಿಮ್ಮ ಡೇಟಾ/ಮಾಹಿತಿಯನ್ನು ರಕ್ಷಿಸಬಹುದು
 

1) ಹೊಸ ಆಂಡ್ರಾಯ್ಡ್ ಫೋನ್‌ನೊಂದಿಗೆ ಬರುವ ಬ್ಲೋಟ್‌ವೇರ್ (ವಿವಿಧ APPಗಳು) ಇಟ್ಟುಕೊಳ್ಳಬೇಡಿ. Bloatware ಸಲುಭವಾಗಿ ಜಾಗವನ್ನು ತೆಗೆದುಕೊಳ್ಳುತ್ತದೆ ಮತ್ತು ಮೊಬೈಲ್ ಸ್ಥಿರತೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಹೊಸ ಫೋನ್ ಖರೀದಿಸಿದ ನಂತರ, ನಿಮಗೆ ಸಾಧ್ಯವಾದರೆ, ಅವುಗಳನ್ನು ಯಾವಾಗಲೂ ಅನ್‌ಇನ್‌ಸ್ಟಾಲ್‌ (uninstall) ಮಾಡಿ. ಅಲ್ಲದೇ ಕೆಲವು ಉಪಯೋಗವಿಲ್ಲದ ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಲ್ಲಿ ಬಲವಂತವಾಗಿ ಸೇರಿಸಲಾಗಿರುತ್ತದೆ. ಅದು ಜಾಹೀರಾತುಗಳನ್ನು ತೋರಿಸಬಹುದು, ನಿಮ್ಮ ಸಾಧನದ ಬಳಕೆಯನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮ ಕಾಂಟೆಕ್ಟ್ ಲಿಸ್ಟ್‌ನ್ನು ಕದಿಯಬಹುದು

2)ನೀವು ಹೊಸ Android ಸ್ಮಾರ್ಟ್‌ಫೋನ್ ಖರೀದಿಸಿದಾಗಲೆಲ್ಲಾ, Google ನ ಹುಡುಕಾಟ ಸಾಧನ (Find Device) ಸೇವೆಯನ್ನು ಸಕ್ರಿಯಗೊಳಿಸಿ. ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಅದನ್ನು ಟ್ರ್ಯಾಕ್ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಇದು ಸಕ್ರಿಯಗೊಳಿಸುವುದು ಮುಖ್ಯವಾಗಿದೆ ಏಕೆಂದರೆ ಕಳ್ಳರು ಮೊಬೈಲ್‌ನಲ್ಲಿ ಆಸಕ್ತಿ ಹೊಂದಿಲ್ಲ, ಅವರು ನಿಮ್ಮ ಡೇಟಾವನ್ನು ಕದಿಯಲು ಉತ್ಸುಕರಾಗಿದ್ದಾರೆ. ಅಲ್ಲದೇ, ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ಲಾಕ್‌ಸ್ಕ್ರೀನ್  (Lockscreen) ಅನ್ನು Activate ಮಾಡಿ, ಇದರಿಂದ ಯಾರೂ ಮೊಬೈಲ್ ಡೇಟಾವನ್ನು ಆಫ್ ಮಾಡಲು ಅಥವಾ ಪಾಸ್‌ವರ್ಡ್ ಇಲ್ಲದೇ ಸಾಧನವನ್ನು ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ.

3)ಸೆಟ್ಟಿಂಗ್‌ನಲ್ಲಿ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅನೇಕ ಮಾಲ್‌ವೇರ್ (Malware) ಅಥವಾ ಸ್ಪೈವೇರ್‌ಗಳು (Spyware) ಐಕಾನ್ ಅನ್ನು ರಚಿಸುವುದಿಲ್ಲ, ಆದರೆ ನಿಮ್ಮ ಮೊಬೈಲ್‌ ನಲ್ಲಿ ಅಡಗಿರುತ್ತವೆ. ಸಂಪೂರ್ಣ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್ ಪಟ್ಟಿಯನ್ನು ಪರಿಶೀಲಿಸುವುದರಿಂದ ಅಪರಿಚಿತ ಅಪ್ಲಿಕೇಶನ್‌ಗಳನ್ನು ಗುರುತಿಸಲು ನಿಮಗೆ ಸಹಾಯವಾಗಬಹುದು.
 

4) ನೀವು ಸ್ವಲ್ಪ ಸಮಯದವರೆಗೆ ಅಪ್ಲಿಕೇಶನ್ ಅನ್ನು ಬಳಸದಿದ್ದರೆ ಅದನ್ನು Uninstall ಮಾಡುವುದು ಉತ್ತಮ. ಅಲ್ಲದೆ, ನಿಮ್ಮ ಫೋನ್‌ನಲ್ಲಿ ಕೆಲವು ಹಳೆಯ ಅಪ್ಲಿಕೇಶನ್‌ಗಳಿದ್ದರೆ, ಅವುಗಳನ್ನು ಸಹ Uninstall ಮಾಡಿ. ಹಳೆಯ ಅಥವಾ ಬಳಕೆಯಾಗದ ಅಪ್ಲಿಕೇಶನ್‌ಗಳನ್ನು ಇಟ್ಟುಕೊಳ್ಳುವುದು ಹೆಚು ಮೆಮೊರಿಯನ್ನು (Memory)   ತೆಗೆದುಕೊಳ್ಳುತ್ತವೆ ಮತ್ತು ಅದನ್ನು update ಮಾಡದ  ಕಾರಣ ಮಾಲ್‌ವೇರ್  ಸಹ ಸಕ್ರಿಯವಾಗಬಹುದು

5)ನಿಮ್ಮ Google ಖಾತೆಯ ಪಾಸ್‌ವರ್ಡ್ ಅನ್ನು ಯಾವಾಗಲೂ ನಿಯತಕಾಲಿಕವಾಗಿ ಬದಲಾಯಿಸಿ. ಇದರಿಂದ ಇತರರು ಸುಲಭವಾಗಿ ನಿಮ್ಮ ಖಾತೆ ಯಾಕ್ಸಸ್ (Access) ಪಡೆಯಲು ಸಾಧ್ಯವಾಗುವುದಿಲ್ಲ.  ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಾ ಇರುವುದರಿಂದ ಅದು ನಿಮ್ಮ ಖಾತೆಯನ್ನು ರಕ್ಷಿಸುತ್ತದೆ.
 

6) ಸೆಟ್ಟಿಂಗ್‌ಗಳ ಮೆನುವಿನಲ್ಲಿ ನೀವು ಅಜ್ಞಾತ ಮೂಲಗಳಿಂದ (Unknown Sources) ಅಪ್ಲಿಕೇಶನ್ Install ಮಾಡುವುದನ್ನು ಆಫ್ ಮಾಡಿ. ಈ ಆಯ್ಕೆಯು ಅಪ್ಲಿಕೇಶನ್‌ಗಳನ್ನು ರಹಸ್ಯವಾಗಿ Install ಮಾಡುವುದನ್ನು ತಡೆಯುತ್ತದೆ ಮತ್ತು Google Play ಅನ್ನು ಹೊರತುಪಡಿಸಿ ಇತರ ಮೂಲಗಳಿಂದ ಅಪ್ಲಿಕೇಶನ್‌ಗಳನ್ನು Install ಮಾಡುವುದನ್ನು ಕೂಡ  ತಡೆಯುತ್ತದೆ.

7)APK ಫೈಲ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ನಿಮಗೆ ಅರ್ಥವಾಗದಿದ್ದರೆ, ನೀವು Google Play ಸ್ಟೋರ್‌ನಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಹೆಚ್ಚು ಸೂಕ್ತ. Google Play ನಲ್ಲಿ ಕಂಡುಬರದ ಹಲವು ಅಪ್ಲಿಕೇಶನ್‌ಗಳಿವೆ ಮತ್ತು APK ಫೈಲ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಅವುಗಳನ್ನು Install ಮಾಡಬೇಕಾಗುತ್ತದೆ. ಆದಾಗ್ಯೂ, APK APP ತನ್ನದೇ ಆದ ಅಪಾಯಗಳೊಂದಿಗೆ ಬರುತ್ತದೆ, ಏಕೆಂದರೆ ಇದನ್ನು Google ಅನುಮೋದಿಸಿರುವುದಿಲ್ಲ.
 

8)ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಯಾವಾಗಲೂ ಅಗತ್ಯವಿರುವ ಅನುಮತಿಗಳು ಮತ್ತು ನಿಯಮಗಳನ್ನು ಓದುವ ಅಭ್ಯಾಸವನ್ನು ಮಾಡಿಕೊಳ್ಳಿ. ಆ್ಯಪ್ ಅತಿಯಾದ ಅನುಮತಿಗಳನ್ನು ಕೇಳಿದಾಗಲೆಲ್ಲಾ ನೀವು ಅಪ್ಲಿಕೇಶನ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸಲು ಪ್ರಾರಂಭಿಸಬೇಕು. ಉದಾಹರಣೆಗೆ, ವಾಲ್‌ಪೇಪರ್‌ಗಾಗಿ ಅಪ್ಲಿಕೇಶನ್‌ಗೆ ನಿಮ್ಮ contact list ಅಥವಾ MIC Permission ಅಗತ್ಯವಿಲ್ಲ. ಕೇವಲ ಅದಕ್ಕೆ ನಿಮ್ಮ ಗ್ಯಾಲರಿಗೆ ಪ್ರವೇಶದ ಅಗತ್ಯವಿರುತ್ತದೆ. ಹಾಗಾಗಿ ಈ ಎಲ್ಲ ಅಂಶಗಳನ್ನು ಕಡೆಗಣಿಸದೇ ಪಾಲಿಸಿದರೆ ಸ್ಕ್ಯಾಮರ್ಸ್‌ ನಿಮ್ಮ ಮಾಹಿತಿ ಕದಿಯುವುದನ್ನು ತಡೆಹಿಡಿಯಬಹುದು.
 

click me!