Technology: ಕನೆಕ್ಟ್ ಪ್ರೊ, ಇನ್‌ಪ್ಲುಯೆನ್ಸ್‌ ಪ್ರೋ ಆ್ಯಪ್‌ ಬಿಡುಗಡೆ

Kannadaprabha News   | Asianet News
Published : Nov 26, 2021, 07:03 AM IST

ಬೆಂಗಳೂರು(ನ.26):  ಮಾಹಿತಿ ತಂತ್ರಜ್ಞಾನ(Information Technology) ಕುರಿತು ಅಷ್ಟಾಗಿ ತಿಳಿದುಕೊಂಡಿಲ್ಲ, ಆದರೆ ಮೊದಲಿನಿಂದಲೂ ಜನರ ಜತೆ ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಹೇಳಿದ್ದಾರೆ.

PREV
14
Technology: ಕನೆಕ್ಟ್ ಪ್ರೊ, ಇನ್‌ಪ್ಲುಯೆನ್ಸ್‌ ಪ್ರೋ ಆ್ಯಪ್‌ ಬಿಡುಗಡೆ

ಗುರುವಾರ ಆಕಾರ್‌ಮ್ಯಾಕ್ಸ್‌(Akarmaxs) ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕನೆಕ್ಟ್ ಪ್ರೊ ಮತ್ತು ಇನ್‌ಪ್ಲುಯೆನ್ಸ್‌ ಪ್ರೊ’(ConnectPro, The Influence Pro) ಮೊಬೈಲ್‌ ಆ್ಯಪ್‌(Mobile App) ಬಿಡುಗಡೆಗೊಳಿದ ಸಿದ್ದರಾಮಯ್ಯ

24

ಜನರನ್ನು ಸಂಪರ್ಕಿಸಲು ಹಾಗೂ ಮಾಹಿತಿ ತಲುಪಿಸಲು ಸಹಕಾರಿಯಾದ ಮೊಬೈಲ್‌(Mobile) ಹೊಸದಾಗಿ ಬಂದಾಗ ಆರು ತಿಂಗಳು ಉಪಯೋಗಿಸಿದ್ದೆ. ತಡರಾತ್ರಿವರೆಗೂ ಕರೆಗಳು ಬಂದು ಕಿರಿಕಿರಿ ನೀಡಿದ್ದರಿಂದ ಎಸೆದಿದ್ದೆ. ಸಾರ್ವಜನಿಕರನ್ನು ತಲುಪಲು ಮಾಹಿತಿ ತಂತ್ರಜ್ಞಾನ ಅವಶ್ಯಕ ಎಂದರೂ ಸಹ ಮೊದಲಿನಂತೆ ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಹಳೆ ಸಂಸ್ಕೃತಿ ಮುಂದುವರಿಸಿದ್ದೇನೆ. ಮೊಬೈಲ್‌ ಇಟ್ಟುಕೊಂಡಿಲ್ಲ, ಆದರೆ ಕರೆಗಳು ಬಂದಾಗ ಸಿಬ್ಬಂದಿ ಮೊಬೈಲ್‌ ನೀಡುತ್ತಾರೆ. ಹೊರತಾಗಿ ಮಾಹಿತಿ ತಂತ್ರಜ್ಞಾನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹೋಗಿಲ್ಲ. ಈ ತಂತ್ರಜ್ಞಾನದಿಂದ ದುರುಪಯೋಗಕ್ಕಿಂತ ಉಪಯೋಗ ಹೆಚ್ಚಿದೆ. ನಮ್ಮ ಸಾಮಾಜಿಕ ಮಾಧ್ಯಮ ತಂಡದವರು, ಸಾಮಾಜಿಕ ಜಾಲತಾಣದಲ್ಲಿ(Social Media) ನನಗೆ ಆರೂವರೆ ಲಕ್ಷ ಫಾಲೋವರ್ಸ್‌ ಇರುವುದಾಗಿ ತಿಳಿಸಿದ ಸಿದ್ದರಾಮಯ್ಯ

34

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ್‌(CN Ashwathnarayan), ನಟ ಮತ್ತು ನಿರ್ದೇಶಕ ರಮೇಶ್‌ ಅರವಿಂದ್‌(Ramesh Aravind), ಹಿರಿಯ ನಟಿ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ(Tara Anuradha), ನಟಿ ಆದಿತಿ ಪ್ರಭುದೇವ್‌(Aditi Prabhudeva), ಎನ್‌ಅರ್‌ಐ ವೆಲ್‌ಫೇರ್‌ ಸೊಸೈಟಿ ಆಫ್‌ ಇಂಡಿಯಾ ಸಂಚಾಲಕ ದೀಪಕ್‌ ಸಿಂಗ್‌, ಕಂಪನಿಯ ಸಿಇಒ ಸ್ನೇಹಾ ರಾಕೇಶ್‌ ಉಪಸ್ಥಿತರಿದ್ದರು.

44

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಕನೆಕ್ಟ್ ಪ್ರೊ ಮತ್ತು ಇನ್‌ಪ್ಲುಯೆನ್ಸ್‌ ಪ್ರೊ’ ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಿದರು. ರಮೇಶ್‌ ಅರವಿಂದ್‌, ತಾರಾ ಅನುರಾಧ, ಆದಿತಿ ಪ್ರಭುದೇವ್‌, ದೀಪಕ್‌ ಸಿಂಗ್‌, ಸ್ನೇಹಾ ರಾಕೇಶ್‌ ಮತ್ತಿತರರು ಪಾಲ್ಗೊಂಡಿದ್ದರು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories