ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದ ಪೇಜಾವರಶ್ರೀ

Published : Jun 13, 2024, 10:53 PM IST

ಬಳಿಕ ಶ್ರೀಗಳು ರಾಯರ ಮೂಲ ಬೃಂದಾವಣಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪೂಜೆ ಬಳಿಕ ಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದ ಶ್ರೀಗಳು. ಈ ವೇಳೆ ಮಠದ ಸಿಬ್ಬಂದಿ ಸಹ ಶ್ರೀಗಳ ಜೊತೆ ಇದ್ದು ಸಾಥ್ ನೀಡಿದರು.  

PREV
13
ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದ ಪೇಜಾವರಶ್ರೀ

ಉಡುಪಿ ಕೃಷ್ಣಮಠದ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಇಂದು ಮಂತ್ರಾಲಯದ ಶ್ರೀರಾಘವೇಂದ್ರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.

23

ಮಂತ್ರಾಲಯಕ್ಕೆ ಆಗಮಿಸಿದ ಉಡುಪಿ ಶ್ರೀಗಳಿಗೆ ಮಠದವತಿಯಿಂದ ಅದ್ದೂರಿ ಸ್ವಾಗತ ದೊರೆಯಿತು. ಪೇಜಾವರ ಶ್ರೀಗಳು ಮಂತ್ರಾಲಯ ಮಠದ ಪ್ರವೇಶ ದ್ವಾರ ತಲುಪುತ್ತಲೇ ಶ್ರೀಗಳನ್ನು ಸನ್ಮಾನಿಸಿ ಸ್ವಾಗತಿಸಿದರು. 
 

33

ಶ್ರೀ ಗುರುರಾಘವೇಂದ್ರ ಸ್ವಾಮಿಗಳಿಗೆ ಮಂಗಳಾರತಿ ಮಾಡುವ ಮೂಲಕ ವಿಶೇಷವಾಗಿ ಪೂಜೆ ಸಲ್ಲಿಸಿದ ಶ್ರೀಗಳು. ಶ್ರೀಗಳ ಆಗಮಿಸುವಿಕೆ ಮೊದಲೇ ತಿಳಿದಿದ್ದರಿಂದ ಗುರುರಾಘವೇಂದ್ರ ಮಠ ಸಿಬ್ಬಂದಿ ಸಕಲ ವ್ಯವಸ್ಥೆ ಮಾಡಿದ್ದರು.

Read more Photos on
click me!

Recommended Stories