ಹಾಗೆಯೇ, ಬೆಂಗಳೂರಿನ ರಿಂಗ್‌ರಸ್ತೆ ನಿರ್ಮಾಣ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಬೆಂಗಳೂರಿಗೆ ತಲುಪಿದ ನಂತರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಇದಕ್ಕಾಗಿ 282 ಕಿ.ಮೀ ಉದ್ದದ ರಿಂಗ್‌ರಸ್ತೆ ನಿರ್ಮಿಸುವ ಅಗತ್ಯವಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಇದನ್ನು ಪೂರ್ಣಗೊಳಿಸುವ ವಿಶ್ವಾಸವಿದ್ದು, ಆ ಮೂಲಕ ಹೊಸ ವರ್ಷದಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಅವರು ಭರವಸೆ ನೀಡಿದರು. ಅಲ್ಲದೇ, ರಾಷ್ಟ್ರೀಯ ಹೆದ್ದಾರಿ 275ರ ಮೈಸೂರು- ಕುಶಾಲನಗರ ನಡುವಿನ ಐದು ಪ್ಯಾಕೇಜ್‌ನಲ್ಲಿ ₹5200 ಕೋಟಿ ವೆಚ್ಚದಲ್ಲಿ 115 ಕಿ.ಮೀ ಕಾಮಗಾರಿ ಆರಂಭವಾಗಿದೆ. ಇದು ಪೂರ್ಣಗೊಂಡರೆ ಕುಶಾಲನಗರದಿಂದ ಬೆಂಗಳೂರಿಗೆ ತೆರಳುವ ಸಮಯ ಕೇವಲ 5 ಗಂಟೆಗಳ ಬದಲಿಗೆ ಎರಡೂವರೆ ಗಂಟೆಗಳಲ್ಲಿ ತಲುಪಬಹುದು ಎಂದರು.